ನನ್ನನ್ನು ಬೇಕಿದ್ದರೆ ಪಕ್ಷದಿಂದ ಹೊರಹಾಕಲಿ; ಸಚಿವ ಮಾಧುಸ್ವಾಮಿ
ಬೆಂಗಳೂರು, ಜನವರಿ 6: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಅವಾಚ್ಯವಾಗಿ ಗುಸುಗುಸು ಮಾತನಾಡಿರುವ ಆಡಿಯೋ ಬಹಿರಂಗಗೊಂಡಿದ್ದು, ಬಿಜೆಪಿ ಪಕ್ಷ ಹಾಗೂ ಸರ್ಕಾರಕ್ಕೆ ಭಾರೀ ಮುಜುಗರ ತಂದೊಡ್ಡಿದೆ.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವ ಬೈರತಿ ಬಸವರಾಜ್ ಅವರದು ತುಮಕೂರು ಕಾರ್ಯಕ್ರಮ ಇತ್ತು. ನನಗೆ ಅವರು ಸುಮ್ನೇ ಉದ್ಘಾಟನೆ ಮಾಡಿ ಹೋಗೋಣ, ಕ್ಯಾಬಿನೆಟ್ ಮೀಟಿಂಗ್ ಇದೆ ಅಂತ ಹೇಳಿದ್ದರು.
ಆಗ ನಾನು, ನೋಡಪ್ಪ ಲೇಟ್ ಆಗುತ್ತೆ, ಫ್ಲೈಓವರ್ ಮೇಲೆ ಹೋಗೋದು 2 ಗಂಟೆ ತಡವಾಗುತ್ತದೆ, ಅದ್ಕೆ 9.30ಕ್ಕೆ ಹೋಗೋಣ ಅಂತ ಹೋದೆ. 9.30ರಿಂದ 10 ವರೆಗೂ ಕಾರ್ಯಕ್ರಮ ಆಗುತ್ತಿತ್ತು. ನಾನು ಭಾಷಣ ಮಾಡಲ್ಲ, ಭೈರತಿ ಅವರು ಮಾತನಾಡಲಿ ಸಾಕು ಎಂದು ಹೇಳಿ ಹೊರಟೆ.

ಅವನ್ಯಾರೋ ಅಧಿಕಾರಿ ಲೆಕ್ಕಪತ್ರ ಕೊಡಲು ಬಂದಾಗ ಇಲ್ಲಪ್ಪ, ಕ್ಯಾಬಿನೆಟ್‌ಗೆ ಲೇಟ್ ಆಗುತ್ತೆ ಅಂತ ಹೇಳಿ ಸಭೆಯಿಂದ ಎದ್ದು ಬಂದೆ. ಅದನ್ನು ಬಿಟ್ರೆ ಬೇರೆ ಏನೇ ವಿಷಯ ಏನೂ ಇಲ್ಲ. ಕಾರ್ಯಕ್ರಮ ಶುರುವಾದಾಗ ಏನೇನು ಮಾತನಾಡಿದಾರೋ ನನಗೆ ಗೊತ್ತಿಲ್ಲ, ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ತುಮಕೂರಿನ ಸಭೆಯಿಂದ ಎದ್ದು ಬಂದಿರುವುದು ಇವತ್ತು 12ಕ್ಕೆ ಕ್ಯಾಬಿನೆಟ್ ಮೀಟಿಂಗ್ ಇದೆ ಅಂತ ಅಷ್ಟೇ ಎಂದರು.
ನಂತರ ಸಚಿವ ಬೈರತಿ ಬಸವರಾಜ್ ಹಾಗೂ ತುಮಕೂರು ಸಂಸದ ಜಿ.ಎಸ್. ಬಸವರಾಜು ಮಾತನಾಡಿರುವ ಬಗ್ಗೆ ಮಾಧ್ಯಮದವರು ಪ್ರಶ್ನಸಿದಾಗ, ನಮಗೆ ಅಂತವರ ಬಗ್ಗೆ ಗೊತ್ತೂ ಇಲ್ಲ, ಅನುಭವವವೂ ಇಲ್ಲ. ಆವರು ಆಡಿರುವ ಪಾರ್ಟುಗಳಿದ್ದರೆ ಅವರು ಆಡಿರುತ್ತಾರೆ, ನನಗೆ ಸಂಬಂಧವಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಈ ಹಿಂದೆ ಜಗಳ ಆಗಿತ್ತಾ ಎಂಬ ಪ್ರಶ್ನೆಗೆ, ಅದೆಲ್ಲ ಏನೂ ಇಲ್ಲ. ನೀವೇ ನೋಡಿದ್ರಲ್ಲ, ಸೀದಾ ಕ್ಯಾಬಿನೆಟ್‌ಗೆ ಬಂದಿದೀನಿ ಎಂದರು. ನಿಮ್ಮಿಂದ ತುಮಕೂರಿನಲ್ಲಿ ಬಿಜೆಪಿಗೆ ಒಂದೇ ಒಂದು ಸೀಟು ಬರಲ್ಲ ಎಂಬ ಸಚಿವ- ಸಂಸದರ ಮಾತಿಗೆ, ಆಯ್ತಪ್ಪ ಸಂತೋಷ, ಪಾರ್ಟಿಯಿಂದ ನನ್ನ ತೆಗೆದುಹಾಕಿ ಬಿಡಲಿ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಮಾಧುಸ್ವಾಮಿ ಬಗ್ಗೆ ಭೈರತಿ ಬಸವರಾಜ್- ಜಿ.ಎಸ್. ಬಸವರಾಜು ಮಾತುಕತೆ
ತುಮಕೂರಿನ ಸುದ್ದಿಗೋಷ್ಠಿಯಲ್ಲೇ ಕುಳಿತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜುಗೆ ಸಂಸದ ಜಿ.ಎಸ್. ಬಸವರಾಜು ಚಾಡಿ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ, ಇಬ್ಬರೂ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸುತ್ತಾ ಗುಸುಗುಸು ಮಾತನಾಡಲು ಶುರು ಮಾಡಿದರು. ಆ ವೇಳೆ ಸಚಿವರ ಕಿವಿಯಲ್ಲಿ ಪಿಸುಗುಟ್ಟಿದ ಜಿ.ಎಸ್. ಬಸವರಾಜು, ತಮ್ಮ ಹಳೆಯ ಸಿಟ್ಟನ್ನು ತೀರಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಸಚಿವ ಭೈರತಿ ಬಸವರಾಜ್ ಅವರ ಕಿವಿಯಲ್ಲಿ ಮಾಧುಸ್ವಾಮಿ ಅವರ ಕಾರ್ಯವೈಖರಿ ವಿರುದ್ಧ ತಮ್ಮ ಅಸಮಾಧಾನವನ್ನು
ಈ ನನ್ನ ಮಗ ನಮ್ಮ ಮಂತ್ರಿ ಹೇಂಗೆ ಗೊತ್ತಾ? ಎಂದು ಉತ್ತರ ಕೊರಿಯಾದ ಕಿಮ್‌ಜಾಂಗ್ ಉನ್‌ಗೆ ಹೋಲಿಸಿದ್ದಾರೆ. ಇವನಿಂದ ಒಂದು ಸೀಟ್ ಬರಲ್ಲ. ಮಾತು ಎತ್ತಿದರೆ, ಹೊಡಿ, ಬಡಿ, ಕಡಿ ಅಂತಾನೆ.
ಇವನು ಜಿಲ್ಲೆಯನ್ನು ಹಾಳುಮಾಡಿ ಬಿಟ್ಟಿದ್ದಾನೆ, ಅಧಿಕಾರಿಗಳನ್ನು ಏಕವಚನದಲ್ಲಿಯೇ ಬಯ್ಯುತ್ತಾನೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ತಮ್ಮ ಆರೋಗ್ಯ ಸರಿಯಿಲ್ಲ ಎಂದರೂ, ನೀನು ನಿನ್ನ ಹೆಂಡತಿಯ ಸೀರೆ ಒಗೆಯಲಷ್ಟೇ ಲಾಯಕ್ಕು ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಎಲ್ಲರ ಮುಂದು ಹೇಳಿ ಅವರನ್ನು ನಿಂದಿಸುತ್ತಾನೆ.
ಈ ವೇಳೆ ಸಚಿವ ಭೈರತಿ ಬಸವರಾಜ್ ಮಾತನಾಡಿ, ಸುಮ್ಮನಿರು ಆಮೇಲೆ ಮಾತನಾಡೋಣ ಎಂದು ಸಂಸದ ಜಿ.ಎಸ್. ಬಸವರಾಜ್ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಆದರೂ ಸಂಸದರು ಮಾತ್ರ ಬೈಯ್ಯುತ್ತಲೇ ಇದ್ದರು.
ಭೈರತಿ ಬಸವರಾಜ್ ಇನ್ನೇನು ಮತ್ತೆ ಎಂದು ಹೇಳಿದ್ದು ಮತ್ತೆ ಆಡಿರುವ ಮಾತು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಸುಮ್ಮನಿರು ಆಮೇಲೆ ಮಾತನಾಡೋಣ ಎಂದು ಸುದ್ದಿಗೋಷ್ಠಿ ಆರಂಭಿಸುತ್ತಾರೆ.
ಆದರೆ, ಸುಮ್ಮನಾಗದ ಸಂಸದ ಬಸವರಾಜು, ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನು, ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವನೇ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೆ ತಲೆಕೆಡಿಸಕೊಳ್ಳಬೇಡಿ ಎಂದು ಹೆಸರು ಹೇಳದೇ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರೆಸುತ್ತಾರೆ.












Click it and Unblock the Notifications