ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಯೋಜನೆ: ಸಚಿವ ಸಿಸಿ ಪಾಟೀಲ್
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅದಮ್ಯ ಚೇತನದ 201 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಸಂಭ್ರಮ
ಬೆಂಗಳೂರು ನವೆಂಬರ್ 4: "ದಿವಂಗತ ಅನಂತಕುಮಾರ್ ಅವರ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ಹರಿಯುತ್ತಿರುವ ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆಯನ್ನು ರೂಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ನದಿಯ ಶುದ್ದೀಕರಣಕ್ಕೆ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಅವರು ಕೈಜೋಡಿಸುವ ಭರವಸೆಯನ್ನು ನೀಡಿದ್ದು, ಅವರ ಸಹಕಾರದಲ್ಲಿ ಶುದ್ದೀಕರಣ ಕಾರ್ಯಕ್ಕೆ ಶೀಘ್ರ ಯೋಜನೆ ರೂಪಿಸಲಾಗುವುದು" ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಮತ್ತು ಗಣಿ ಹಾಗೂ ಭೂವಿಜ್ಞಾನ ಸಚಿವ ಸಿ ಸಿ ಪಾಟೀಲ್ ತಿಳಿಸಿದರು.
ನಗರದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿಂದು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅದಮ್ಯ ಚೇತನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 201 ರೂಪಾಯಿಗಳನ್ನು ನೀಡಿ ಗಿಡ ನೆಟ್ಟು ಸಂಭ್ರಮಿಸಿದರು. ನಂತರ ಮಾತನಾಡಿದ ಅವರು, ವೃಷಭಾವತಿ ನದಿಯ ಶುದ್ದೀಕರಣದ ಬಗ್ಗೆ ಡಾ ತೇಜಸ್ವಿನಿ ಅನಂತಕುಮಾರ್ ಹಾಗೂ ಕುಲಪತಿ ಕೆ ಆರ್ ವೇಣುಗೋಪಾಲ್ ಅವರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಎರಡು ದಿನಗಳ ನಂತರ ಯೋಜನೆಯ ಜೊತೆಗೆ ಭೇಟಿಯಾಗುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬದುಕಿದ್ದಾಗ ಅನುಸರಿಸಿದ್ದು, ಸಾವಿನ ನಂತರವೂ ಮುಂದುವರೆಯಬೇಕು ಎನ್ನುವ ಗುರಿಯನ್ನು ದಿವಂಗತ ಅನಂತ ಕುಮಾರ್ ಅವರು ಹೊಂದಿದ್ದರು. ಅವರು ಹಾಕಿಕೊಟ್ಟ ಗಿಡ ನೆಡುವ ಯೋಜನೆ ಬಹಳ ಶ್ಲಾಘನೀಯ. ದಿವಂಗತ ಅನಂತ ಕುಮಾರ್ ಅವರು ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ 201 ರೂಪಾಯಿಗಳನ್ನು ನೀಡಿ ನೊಂದಾಯಿಸಿಕೊಂಡ ಸಾರ್ವಜನಿಕರು ಸೇರಿದಂತೆ, ವಿದ್ಯಾರ್ಥಿಗಳು, ಸ್ವಯಂ ಸೇವಕರು 201 ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.

201 ವಾರದಿಂದ ಗಿಡ ನೆಡುವ ಕಾರ್ಯ
ಕಳೆದ 201 ವಾರಗಳಿಂದ ಗಿಡ ನೆಡುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ಡಾ ತೇಜಸ್ವಿನಿ ಅನಂತಕುಮಾರ್ ಅವರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ಇಲಾಖೆ ಸಚಿವ ಆಗಿರುವ ವರೆಗೂ ಸರಕಾರ ಹಾಗೂ ಇಲಾಖೆಯಿಂದ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎನ್ನುವ ಭರವಸೆ ನೀಡಿದರು.
ಪರಿಸರವನ್ನು ಉಳಿಸುವ ಅತಿಮುಖ್ಯ ವಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದಲ್ಲಿ ಕೆಲ ಕಡೆ ಬರ ಇದೆ ಕೆಲ ಕಡೆ ತೀವ್ರ ಪ್ರವಾಹ ಇದೆ. ಈ ರೀತಿಯ ಪ್ರಾಕೃತಿಕ ಹಾನಿ ಆಗುತ್ತಿರುವುದು ನಮ್ಮ ಸ್ವಯಂಕೃತ ಅಫರಾಧ, ಗಿಡಗಳನ್ನು ನೆಡುತ್ತಿಲ್ಲ. ಪರಿಸರ ಹಾಗೂ ಅರಣ್ಯ ನಾಶದಿಂದ ಆಗಿರುವ ಪರಿಣಾಮ ಇದಾಗಿದೆ. ಇಂತಹ ಸಂಧರ್ಭದಲ್ಲಿ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರೂ ರಾಜ್ಯದ ಎಲ್ಲಾ ಕಡೆ ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಂದು ಕರೆ ನೀಡಿದರು. 201 ರೂಪಾಯಿಗಳನ್ನು ನೀಡುವ ಮೂಲಕ ಒಂದು ಗಿಡ ನೆಟ್ಟಿದ್ದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು.

ತೇಜಸ್ವಿನಿ ಅನಂತಕುಮಾರ್ ಮಾತನಾಡಿ
ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ದಿವಂಗತ ಅನಂತಕುಮಾರ್ ಅವರು 2016 ಜನವರಿ 3 ರಂದು ಚಾಲನೆ ನೀಡಿದ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ನಗರವನ್ನು ಮತ್ತಷ್ಟು ಹಸರೀಕರಣ ಮಾಡುವ ಕನಸನ್ನು ಅವರು ಕಂಡಿದ್ದರು. ಅವರ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಒಬ್ಬ ಮನುಷ್ಯನಿಗೆ ಒಂದು ವರ್ಷ ಉಸಿರಾಡಲು ಅಗತ್ಯವಿರುವ ಆಮ್ಲಜನಕ ಉತ್ಪಾದಿಸಲು 7 ಮರಗಳು ಬೇಕು. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರಕ್ಕೆ 7 ಕೋಟಿ ಹಾಗೂ 6 ಕೋಟಿ ಜನಸಂಖ್ಯೆಯ ಕರ್ನಾಟಕಕ್ಕೆ ಸುಮಾರು 42 ಕೋಟಿ ಮರಗಳ ಅಗತ್ಯವಿದೆ.
201 ನೇ ಹಸಿರು ಭಾನುವಾರದ ಪ್ರಯುಕ್ತ ಪೇಪರ್ ನ್ಯಾಪ್ ಕಿನ್ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಂಕಲ್ಪ ಮಾಡಿ ಎಂದು ಕರೆ ನೀಡಿದರು. ಅದಮ್ಯ ಚೇತನ ವತಿಯಿಂದ ಸುಮಾರು ಒಂದುವರೆ ಲಕ್ಷ ಮರಗಳನ್ನು ನೆಟ್ಟಿದ್ದು, ಇದು ಬಹಳ ಕಡಿಮೆ ಸಂಖ್ಯೆಯಾಗಿದ್ದು ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ನದಿಯ ಬಗ್ಗೆ ಅನಂತ್ ಕುಮಾರ್ ಕಾಳಜಿ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ವೃಷಭಾವತಿ ನದಿ ಹರಿಯುತ್ತಿದೆ. ವೃಷಭಾವತಿ ನದಿಯ ಬಗ್ಗೆ ದಿವಂಗತ ಅನಂತಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಭಗೀರಥರ ಮಾದರಿಯಲ್ಲಿ ಗಂಗೆಯನ್ನು ಸ್ವಚ್ಚ ಮಾಡಿದಾಗ, ನಾವು ವೃಷಭಾವತಿಯನ್ನು ಯಾಕೆ ಸ್ವಚ್ಚ ಮಾಡಬಾರದು ಎನ್ನುವ ಕನಸನ್ನು ಹೊಂದಿದ್ದರು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು ಇದರ ಶುದ್ದೀಕರಣಕ್ಕೆ ಅದಮ್ಯ ಚೇತನ ಸಂಸ್ಥೆ ಸಂತಸದಿಂದ ಕೈಜೊಡಿಸಲಿದೆ. ಭಾನುವಾರ ಅಲ್ಲದೆ ಬೇರೆ ದಿನಗಳಲ್ಲೂ ಈ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.

ಬೆಂಗಳೂರು ವಿವಿ ಕುಲಪತಿ ಮಾತನಾಡಿ
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕೆ ಆರ್ ವೇಣುಗೋಪಾಲ್ ಮಾತನಾಡಿ, ದಿವಂಗತ ಅನಂತಕುಮಾರ್ ಅವರೊಂದಿಗಿನ ಒಡನಾಟ ಬಹಳ ಹಳೆಯದು. ಅನಂತಕುಮಾರ್ ಅವರ ಆಶಯದಂತೆ ಸತತವಾಗಿ 201 ವಾರ ಒಂದು ವಾರವೂ ಬಿಡದೆ ಗಿಡ ನೆಡುವ ಕಾರ್ಯಕ್ರಮ ಮಾಡುತ್ತಿರುವುದು ಸುಲಭದ ಕೆಲಸವಲ್ಲ. ನಗರದ ಅಭಿವೃದ್ದಿಯ ಬಗ್ಗೆ ಸಾಕಷ್ಟು ಕಾಳಜಿಯನ್ನು ಅವರು ತೋರಿಸುತ್ತಿದ್ದರು. ಇಂತಹ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿರುವ ಡಾ ತೇಜಸ್ವಿನಿ ಅನಂತಕುಮಾರ್ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಮಾನ್ಯ ಸಚಿವರು ವಿಶ್ವವಿದ್ಯಾಲಯದ ಅಭಿವೃದ್ದಿಗೆ ಬೇಕಾಗಿರುವ ಕೆಲಸಗಳಿಗೆ ಅಧಿಕಾರಿಗಳಿಗೆ ಇಲ್ಲಿಂದಲೇ ಸೂಚನೆ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ಹರಿಯುತ್ತಿರುವ ವೃಷಭಾವತಿ ನೀರನ್ನು ಐವತ್ತು ವರ್ಷಗಳ ಹಿಂದೆ ಕುಡಿಯಲು ಉಪಯೋಗಿಸಲಾಗುತ್ತಿತ್ತು. ಆದರೆ, ಈಗ ಈ ನೀರು ಕೊಳಚೆ ನೀರಾಗಿದೆ. ಇದನ್ನು ಸಚಿವರ ಗಮನಕ್ಕೆ ತಂದ ಕೂಡಲೇ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಕರೆ ಮಾಡಿ ಇದಕ್ಕೆ ಒಂದು ಯೋಜನೆಯನ್ನು ರೂಪಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಸ್ವಿಯೇಜ್ ಸೆಪ್ಟಿಕ್ ಟ್ರೀಟ್ ಮೆಂಟ್ ಕಟ್ಟುವ ಮೂಲಕ ನೀರನ್ನು ಶುದ್ಧೀಕರಿಸಿ, ಶುದ್ದೀಕರಿಸಿದ ನೀರನ್ನು ಬಳಸಿಕೊಂಡು ಉಳಿದಿದ್ದನ್ನು ಮುಂದಕ್ಕೆ ಬಿಡುವ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಂದಿನ ಒಂದು ತಿಂಗಳ ಒಳಗೆ ವೃಷಭಾವತಿ ನೀರನ್ನು ಶುದ್ದೀಕರಣದ ಯೋಜನೆಯ ಪ್ರಾರಂಭದ ಕಾರ್ಯಕ್ರಮ ಹಮ್ಮಿಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications