ಆರ್‌ಎಸ್‌ಎಸ್‌ ಪಥ ಸಂಚಲನ; ಗಣವೇಷಧಾರಿಯಾಗಿ ಸಚಿವರು ಭಾಗಿ

ಬೆಂಗಳೂರು, ಅಕ್ಟೊಬರ್ 09: ಆರ್‌ಎಸ್‌ಎಸ್‌ ವತಿಯಿಂದ ಭಾನುವಾರ ಬೆಳಗ್ಗೆ ಶ್ರೀರಾಂಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ತಾಕರ್ಷಕ ಪಥ ಸಂಚಲನ ನಡೆಯಿತು.

ಚಿತ್ತಾಕರ್ಷಕ ರೂಟ್ ಮಾರ್ಚ್‌ನಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಕೂಡ ಗಣವೇಷಧಾರಿಯಾಗಿ, ಪಥ ಸಂಚಲನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿ ಗಮನ ಸೆಳೆದರು. ಆರ್‌ಎಸ್‌ಎಸ್‌ ಕಾರ್ಯಕರ್ತರು, ಮುಖಂಡರು, ಬಿಜೆಪಿ ನಾಯಕರು ಪಥಸಂಚಲನ ನಡೆಸಿದ್ದು ಎಲ್ಲರನ್ನು ಆಕರ್ಷಿಸಿತು.

ನಗರದ ಶ್ರೀರಾಂಪುರದ ಅಂಬೇಡ್ಕರ್ ಸ್ಕೂಲ್ ಕ್ರೀಡಾಂಗಣದಿಂದ ಆರಂಭವಾದ ಪಥ ಸಂಚಲನವು ಗಾಯತ್ರಿ ನಗರದ ಹಲವು ಬೀದಿಗಳ ಮೂಲಕ ಸಾಗಿತು. ಸಂಘದ ಘೋಷ ವಾಕ್ಯಕ್ಕೆ ತಕ್ಕಂತೆ ದಂಡಧಾರಿಗಳಾಗಿ ಸಾವಿರಾರು ಕಾರ್ಯಕರ್ತರು ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ ಸಾಗಿದರು. ರೂಟ್ ಮಾರ್ಚ್ ಉದ್ದಕ್ಕೂ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು, ಸಚಿವರು ಸೇರಿದಂತೆ ಎಲ್ಲ ಕಾರ್ಯಕರ್ತರ ಮೇಲೂ ಪುಷ್ಪವೃಷ್ಠಿ ಮಾಡಿ, ಸಂಭ್ರಮಿಸಿದರು.

Minister Ashwath Narayan Participate In RSS Root March on Sunday

ಮೈದಾನದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ತಾಯಿ ಭಾರತ ಮಾತೆಗೆ ನಮಿಸಿದರು. ಬಳಿಕ ಪಥ ಸಂಚಲನವು ಹಿಂದಿರುಗಿ, ಅಂಬೇಡ್ಕರ್ ಶಾಲೆಯ ಕ್ರೀಡಾಂಗಣದಲ್ಲೇ ಸಂಪನ್ನಗೊಂಡಿತು.

ರೂಟ್ ಮಾರ್ಚ್‌ಗೆ ಅನುಮತಿ:

ರೂಟ್ ಮಾರ್ಚ್‌ ನಡೆಸಲು ಉದ್ದೇಶಿಸಿದ್ದ ಆರ್‌ಎಸ್‌ಎಸ್‌ಗೆ ತಮಿಳುನಾಡು ಸರ್ಕಾರ ಅನುಮತಿ ನಿರಾಕರಿಸಿತ್ತು. ಇದಾದ ಬಳಿಕ ರೂಟ್‌ ಮಾರ್ಚ್ ಕುರಿತು ರಾಜ್ಯ ಹೈಕೋರ್ಟ್‌ ಸಕಾರಾತ್ಮಕ ಆದೇಶವಿದ್ದರೂ ಸರ್ಕಾರ ಮಾತ್ರ ಈ ಬಗ್ಗೆ ಅನುಮತಿ ನೀಡಲಿಲ್ಲ.

Minister Ashwath Narayan Participate In RSS Root March on Sunday

ಇದನ್ನು ಪ್ರಶ್ನಿಸಿ ನ್ಯಾಯಾಂಗ ನಿಂದನೆ ಪ್ರರಕಣವನ್ನು ಆರ್‌ಎಸ್‌ಎಸ್‌ ದಾಖಲಿಸಿತ್ತು. ಆದರೆ ಪ್ರಕರಣದ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದ ನ್ಯಾಯಾಲಯ ರೂಟ್‌ ಮಾರ್ಚ್‌ಗೆ ಅನುಮತಿ ನೀಡುವಂತೆ ಸೂಚಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+