Get Updates
Get notified of breaking news, exclusive insights, and must-see stories!

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಸಿಗಲಿದೆ ದಿನಸಿ, ಅಗತ್ಯ ಸರಕುಗಳು

ರಾಜ್ಯ ಸರ್ಕಾರಿ ಉದ್ಯೋಗಿಗಳು ಇನ್ನು ಮುಂದೆ ಸೇನಾ ಸಿಬ್ಬಂದಿ ಮಾದರಿಯಲ್ಲಿ ಅಗತ್ಯ ವಸ್ತುಗಳು ಮತ್ತು ದಿನಸಿಯನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಹೇಗೆ ಅಂತೀರಾ ಈ ಸುದ್ದಿ ಓದಿ.

ಬೆಂಗಳೂರು, ಜನವರಿ. 30: ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಶೀಘ್ರದಲ್ಲೇ ಮಿಲಿಟರಿ ಸಿಬ್ಬಂದಿ ಮಾದರಿಯಲ್ಲೇ ಇವರು ರಿಯಾಯಿತಿ ದರದಲ್ಲಿ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ.

ಹೌದು, ಸರ್ಕಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸೇನಾ ಕ್ಯಾಂಟೀನ್ ಮಾದರಿಯ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ನೌಕರರ ಸಂಘ ಸ್ಥಾಪಿಸುವ ಈ ಫ್ಯಾಮಿಲಿ ಮಾರ್ಟ್‌ಗಳಲ್ಲಿ ಸರ್ಕಾರಿ ನೌಕರರು ಶೇಕಡಾ 10 ರಿಂದ 60 ರಷ್ಟು ರಿಯಾಯಿತಿಯಲ್ಲಿ ಅಗತ್ಯ ಸರಕುಗಳು ಮತ್ತು ದಿನಸಿಗಳನ್ನು ಖರೀದಿಸಬಹುದು.

ಮಾರ್ಟ್ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ (ಸಿಎಸ್‌ಡಿ) ಯಂತೆಯೇ ಈ ಫ್ಯಾಮಿಲಿ ಮಾರ್ಟ್‌ಗಳು ಇರಲಿವೆ. ಸಿಎಸ್‌ಡಿಗಳಲ್ಲಿ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗಾಗಿ ಮಾಡಲಾಗಿದ್ದು, ಇವುಗಳನ್ನು ಮಿಲಿಟರಿ ಕ್ಯಾಂಟೀನ್ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ದಿನಸಿ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಇತರ ವಸ್ತುಗಳು ಸೇರಿದಂತೆ ದೈನಂದಿನ ಬಳಕೆಗೆ ಗುಣಮಟ್ಟದ ಉತ್ಪನ್ನಗಳು ಮಾರ್ಟ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ.

Military canteen-like mart to open for Karnataka State govt employees soon

ಪ್ರಸ್ತುತ, ರಾಜ್ಯ ಸರ್ಕಾರದ ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ 72 ಇಲಾಖೆಗಳಲ್ಲಿ 5.2 ಲಕ್ಷ ಉದ್ಯೋಗಿಗಳಿದ್ದಾರೆ. ಮಾಜಿ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಕೂಡ ಈ ಮಾರ್ಟ್ ಅನ್ನು ಬಳಸಿಕೊಳ್ಳಬಹುದು.

"ಶಿವಮೊಗ್ಗದಲ್ಲಿ ಮೊದಲ ಫ್ಯಾಮಿಲಿ ಮಾರ್ಟ್ ಉದ್ಘಾಟನೆಯಾಗಲಿದೆ. ಫೆಬ್ರವರಿ 4 ರಂದು ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮಾವೇಶವನ್ನು ಆಯೋಜಿಸಿದ್ದೇವೆ. ಈ ವೇಳೆ ಮಾರ್ಟ್ ಅನ್ನು ಉದ್ಘಾಟಿಸಲಾಗುವುದು. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿಯ ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು" ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾಹಿತಿ ನೀಡಿದ್ದಾರೆ.

Military canteen-like mart to open for Karnataka State govt employees soon

"ಈ ಮಾರ್ಟ್‌ಗಳು ಸರ್ಕಾರಿ ಭೂಮಿಯಲ್ಲಿ ಇರಲಿದ್ದು, ಅವುಗಳನ್ನು ಖಾಸಗಿ ಏಜೆನ್ಸಿ ನಡೆಸಲಿವೆ. ಇಲ್ಲಿ ದೊರೆಯುವ ಉತ್ಪನ್ನಗಳು ಸಿಬ್ಬಂದಿಗೆ ಕೈಗೆಟುಕುವ ದರದಲ್ಲಿ ಲಭ್ಯವಿರುತ್ತವೆ . ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ವಸ್ತುಗಳನ್ನು ಖರೀದಿಸಲು ಬರುವುದರಿಂದ, ಅವುಗಳನ್ನು ನಡೆಸುವ ಏಜೆನ್ಸಿಗೆ ಇದು ಆರ್ಥಿಕವಾಗಿ ಸಹಾಯ ಮಾಡುತ್ತದೆ" ಎಂದು ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.

"ಮಾರ್ಟ್‌ಗಳನ್ನು ಸ್ಥಾಪಿಸಲು ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ಭೂಮಿಯನ್ನು ಪಡೆಯಲಾಗುತ್ತಿದೆ. ಬೆಂಗಳೂರಿನಲ್ಲಿ, ಕನಿಷ್ಠ ನಾಲ್ಕು ಮಾರ್ಟ್‌ಗಳನ್ನು ಆರಂಭಿಸಬೇಕಾಗುತ್ತದೆ. ಆದರೆ ಮುಖ್ಯ ವಿಷಯವೆಂದರೆ ಬೆಂಗಳೂರಿನಲ್ಲಿ ಭೈಮಿ ಸಿಗುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ. ನಾಲ್ಕು ದಿಕ್ಕಿನಲ್ಲಿ ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು. ಇದು ಸಿಬ್ಬಂದಿಗೆ ಹತ್ತಿರದ ಮಾರ್ಟ್‌ನಿಂದ ಉತ್ಪನ್ನಗಳನ್ನು ಖರೀದಿಸಲು ಅನುಕೂಲಕರವಾಗಿದೆ" ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+