Bengaluru: ಆಹಾರ ಬೇಸಿಯಲು ನೀರಿಲ್ಲದೇ ಕೂಲಿ ಕಾರ್ಮಿಕರು ಸಂಕಷ್ಟ: ಬೇರೆ ನಗರಗಳತ್ತ ವಲಸೆ

ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನಲ್ಲಿ ಎಷ್ಟೇ ಸೂಕ್ತ ಕ್ರಮಗಳನ್ನು ಕೈಗೊಂಡರು, ಅಲ್ಲಿ ಇಲ್ಲಿ ಮಳೆ ಆಗುತ್ತಿದ್ದರೂ ಸಹ ನೀರಿನ ಭವಣೆ ನಿಂತಿಲ್ಲ. ಬೇಸಿಗೆ ಕಳೆಯಲು ಇನ್ನೂ ಒಂದೂವರೆ ತಿಂಗಳು ಇದೆ. ಜನರ ನೀರಿಲ್ಲದ ತತ್ತರಿಸುತ್ತಿದ್ದು, ಇದರ ಮುಂದುವರಿ ಭಾಗವಾಗಿ ವಲಸೆ ಕಾರ್ಮಿಕರು ಬೆಂಗಳೂರಿನಿಂದ ಕಾಲ್ಕೀಳುತ್ತಿದ್ದಾರೆ.

ಬೆಂಗಳೂರಿನ ತೀವ್ರ ನೀರಿನ ಕೊರತೆಯ ಸಮಸ್ಯೆ ವಲಸೆ ಕಾರ್ಮಿಕರನ್ನು ಇಲ್ಲಿಂದ ಓಡಿಸುವಂತೆ ಮಾಡಿದೆ. ನಗರದ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ವಲಸೆ ಕಾರ್ಮಿಕರು ಬಂದು ನೆಲೆಸಿದ್ದರು. ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ಕೂಲಿ ಕಾರ್ಮಿಕರಿಗೆ ನೀರು ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ.

Migrant Workers from Bengaluru s Bellandur Area Left Because of Water Issues

ಈ ಕೂಲಿ ಕಾರ್ಮಿಕರು ಕುಡಿಯುವ ಮತ್ತಿತರರೆ ಅಗತ್ಯಗಳಿಗೆ ಹೆಚ್ಚಿನ ಹಣ ನೀಡಬೇಕಾದ ಅನಿವಾರ್ಯತೆ ಇದೆ. ಬಿಡಿಗಾಸಿಗೆ ದುಡಿಯಲು ಬಂದ ಇವರು ಹಣ ನೀಡಿ ಅಗತ್ಯ ವಸ್ತು ಪೂರೈಸಿಕೊಳ್ಳಲು ಆಗವುದಿಲ್ಲ. ಹೀಗಾಗಿ ನೀರಿನ ಸಮಸ್ಯೆಗೆ ಅಂಜಿ ಬೆಂಗಳೂರು ಬಿಡುತ್ತಿದ್ದಾರೆ.

ಅಗತ್ಯದಷ್ಟು ನೀರು ಪೂರೈಕೆ ಆಗುತ್ತಿಲ್ಲ

ಕಾರ್ಮಿಕರು ಮತ್ತವರು ಕುಟುಂಬಗಳು ವಾಸಿಸುವ ಇಲ್ಲಿನ ಪ್ರತಿ ಶೆಡ್‌ನ ಮುಂದೆ ನೀರಿನ ಡ್ರಮ್‌ಗಳನ್ನು ಇಡಲಾಗಿದ.ಎ ಇಲ್ಲಿರುವ 40 ಡ್ರಮ್‌ಗಳಲ್ಲಿ ಮೂರು ದಿನಕ್ಕೆ ಒಮ್ಮೆಯಂತೆ ಬಿಡುವ ನೀರಿನಿಂದ 14 ಡ್ರಮ್‌ಗಳು ಮಾತ್ರ ತುಂಬುತ್ತವೆ. ಇಲ್ಲಿ ಸುಮಾರು 60ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿವೆ. ಇವರಿಗೆಲ್ಲ ಇಷ್ಟು ಪ್ರಮಾಣದ ನೀರು ಸಾಕಾಗುತ್ತಿಲ್ಲ ಎನ್ನಲಾಗಿದೆ.

Migrant Workers from Bengaluru s Bellandur Area Left Because of Water Issues

ಬೇರೆ ನಗರದತ್ತ ವಲಸೆ ಕಾರ್ಮಿಕರು

ಬೆಳ್ಳಂದೂರು ಪ್ರದೇಶವು ಗಲಭೆಯ ಐಟಿ ಬಿಟಿ ಕಂಪನಿಗಳು ಹೆಚ್ಚಿವೆ. ಬಹುಮಹಡಿ ವಸತಿ ಕಟ್ಟಡಗಳು ಇವೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಅಸ್ಸಾಂನಿಂದ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಇಲ್ಲಿ ನೆಲೆಸಿದ್ದಾರೆ. ಇವರಿಗೆಲ್ಲ ನೀರಿನ ಸಮಸ್ಯೆ ಆಗುತ್ತಿರುವ ಕಾರಣಕ್ಕೆ ಇವರು ಬದುಕು ಕಟ್ಟಿಕೊಳ್ಳಲು ಬೇರೆ ನಗರದತ್ತ ಮುಖ ಮಾಡಿದ್ದಾರೆ ಎಂದು ವರದಿ ಆಗಿದೆ.

ಆಹಾರ ಬೇಯಿಸಲು ನೀರಿಲ್ಲದೇ ಪರದಾಟ

ನಾವು ಕೂಲಿ ಕಾರ್ಮಿಕರು. ವಾರಕ್ಕೆ ಒಂದು ಭಾರಿಮಾತ್ರ ನೀರು ಖರೀದಿಸಲು ಸಾಮರ್ಥ್ಯ ಹೊಂದಿದ್ದೇವೆ. ಆರ್‌ಒ ಘಟಕ ವಾರಕ್ಕೆ ಮೂರು ಬಾರಿ ಮಾತ್ರ ತೆರೆದಿರುತ್ತದೆ. ಅನ್ನ ಮಾಡಿಕೊಳ್ಳುವ, ಆಹಾರ ಪದಾರ್ಥ ಬೇಯಿಸಲು ನೀರಿಲ್ಲದಾಗಿದೆ. ಕೊಳವೆ ಬಾವಿ ನೀರು ಪೂರೈಕೆ ಇಲ್ಲದಾಗಿದೆ. ಇಲ್ಲಿನ ಮಾಲೀಕರು ಮತ್ತು ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದರು.

ನೀರಿಗಾಗಿ ನಿತ್ಯ ರೂ. 120 ಪಾವತಿ

ರಂಜಾನ್ ವೇಳೆ ಶುದ್ಧ ನೀರಿಗಾಗಿ ನಿತ್ಯ ನಾವು 120 ರೂ. ಹಣ ಪಾವತಿಸಿದ್ದೇವೆ. ಇಲ್ಲಿರುವ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ನೋಡಲಷ್ಟೇ ಅಳವಡಿಸಿದಂತಿವೆ. ಕಳೆದ ಎರಡು ತಿಂಗಳಿನಿಂದ ನೀರು ಬರದೆ ತೊಂದರೆ ಆಗಿದೆ. ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಆರ್‌ಒ ಯೂನಿಟ್‌ಗಳಲ್ಲಿ 10 ಲೀಟರ್ ನೀರಿಗೆ 30 ರೂ.ವರೆಗೆ ನೀಡಬೇಕಿದೆ. ಇನ್ನೂ ನೀರಿನ ಟ್ಯಾಂಕರ್‌ಗೆ 500 ರಿಂದ 1,500 ರೂ.ಗೆ ನೀಡಬೇಕಿದೆ ಎಂದು ಕೂಲಿ ಕಾರ್ಮಿಕರು ಅಳಲು ತೋಡಿಕೊಂಡರು.

ಇಲ್ಲಿನ ಸುಮಾರು 70 ಕೂಲಿ ಕಾರ್ಮಿಕರ ಕುಟುಂಬಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಕುಟುಂಬ ಮರಳಿ ತಮ್ಮ ಉತ್ತರ ಭಾರತದತ್ತ ಹೋಗಿದ್ದಾರೆ. ಇಲ್ಲಿಂತ ಹೋಗದಿದ್ದರೆ, ಮನೆಗೆ ಕಳುಹಿಸುವ ಹಣ ಇಲ್ಲಿ ನೀರಿಗೆ ಕೊಡಬೇಕಾಗುತ್ತದೆ ಎಂದು ಕೂಲಿ ಮಹಿಳೆಯೊಬ್ಬರು ತಿಳಿಸಿದರು.

ಪಶ್ಚಿಮ ಬಂಗಾಳದ ಹೌರಾದಿಂದ ಇಲ್ಲಿಗೆ ಕೆಲ ಕಾರ್ಮಿಕರು ಬಂದಿದ್ದಾರೆ. ಹೌರಾದಲ್ಲಿ ನಿತ್ಯ ಕೂಲಿಗೆ 750 ರೂ. ಸಿಕ್ಕರೆ ಇಲ್ಲಿ ಮಾತ್ರ 1,100 ರೂ. ನಿತ್ಯ ದುಡಿಯುತ್ತೇವೆ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ. ಇಬ್ಬರು ಮಕ್ಕಳಿರುವ ನಾನು ನಿತ್ಯ ನೀರಿಗಾಗಿ ಸಾಕಷ್ಟು ಹನ ವ್ಯಯಿಸುತ್ತಿದ್ದೇನೆ. ನೀರಿಗೆ ವ್ಯಯಿಸುವ ಹಣವನ್ನು ಬಟ್ಟೆ ಒಗೆಯಲು, ಸ್ನಾನ ಇನ್ನಿತರ ಕೆಲಸಗಳನ್ನು ಮಾಡದೇ ಉಳಿಸಿಕೊಳ್ಳುತ್ತಿದ್ದೇವೆ.

ನಮಗೆ ಪ್ರತಿ ವಾರ ಕನಿಷ್ಠ 40 ಲೀಟರ್ ಶುದ್ಧ ನೀರಿನ ಅಗತ್ಯತೆ ಇದೆ. ಇಲ್ಲಿಯೇ ಹತ್ತಿರ ಆರ್‌ಒ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+