ಮೆಟ್ರೋಗೆ ಬಂದಿದ್ದ ಅಪರಿಚಿತ ವ್ಯಕ್ತಿಯ ಊರಲ್ಲಿ ಸೈನಿಕರೇ ಹೆಚ್ಚು
ಬೆಂಗಳೂರು, ಮೇ 16: ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದ ವ್ಯಕ್ತಿಯ ಕುರಿತಂತೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ.
ಬಂಧನಕ್ಕೊಳಗಾಗಿದ್ದ ರಾಜಸ್ಥಾನ ಮೂಲದ ಸಾಜಿದ್ ಖಾನ್ ವಾಸವಿರುವ ಗ್ರಾಮದಲ್ಲಿ ಶೇ.40 ಸೈನಿಕರು ಹಾಗೂ ಶೇ.40ರಷ್ಟು ಶಿಕ್ಷಕರಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ತಿಳಿಸಿದ್ದಾರೆ.
ಉಪ್ಪಾರಪೇಟೆಪಲೀಸರು ತಡರಾತ್ರಿ ಆರ್‌ಟಿನಗರದ ಮಸೀದಿ ಬಳಿ ಸಾಜಿದ್ ಖಾನ್‌ನ್ನು ವಶಕ್ಕೆ ಪಡೆದು, ಕಾಟನ್‌ಪೇಟೆಯ ಲಾಡ್‌ಜ್‌ನಲ್ಲಿದ್ದ ಆತನ ಪತ್ನಿ ಹಾಗೂ ಮಕ್ಕಳ ವಿಚಾರಣೆಯನ್ನು ನಡೆಸಿದ್ದರು. ಆತನ ಸ್ವಗ್ರಾಮ ರಾಜಸ್ಥಾನದ ಜುನ್‌ಜುನ್ ಜಿಲ್ಲೆಯ ನಿರಾಧನ್‌ಗೆ ಗ್ರಾಮಕ್ಕೆ ತೆರಳಿ ನಗರದ ಪೊಲೀಸರ ತಂಡ ಪರಿಶೀಲನೆ ನಡೆಸಿತ್ತು.

ಮೆಟ್ರೋ ನಿಲ್ದಾಣದಿಂದ ಶಂಕಾಸ್ಪದ ವ್ಯಕ್ತಿ ಹೊರ ಹೋಗಿರುವ ಕುರಿತು ಟಿವಿ, ಪತ್ರಿಕೆ ಮತ್ತು ಜಾಲತಾಣಗಳಲ್ಲಿ ಫೋಟೊ ಮತ್ತು ವಿಡಿಯೋ ಹರಿದಾಡಿದ್ದವು. ಇದನ್ನು ಗಮನಿಸಿದ್ದ ಆಟೋ ಚಾಲಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದ.
ಸಾಜಿದ್ ಕಾಟನ್ ಪೇಟೆ ಮುಖ್ಯರಸ್ತೆಯಲ್ಲಿರುವ ಸಿಬಿ ಡಿಲಕ್ಸ್ ಲಾಡ್ಜ್ ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಉಳಿದುಕೊಂಡಿದ್ದ, ಅಂದು ಆತನ ಬಳಿ ಸುಮಾರು 5-6 ಸಾವಿರ ರೂ ಹಣ ಸಿಕ್ಕಿದೆ. ಅದರಲ್ಲಿ ಬಹುತೇಕ 5 ರೂ ಮತ್ತು 10 ರೂ ನಾಣ್ಯಗಳಾಗಿದ್ದವು.
ಸಿಬಿ ಡಿಲಕ್ಸ್ ಲಾಡ್ಜ್‌ನಲ್ಲಿ ರೂಮ್‌ಗಳ ಬಾಡಿಗೆ ಜತೆಗೆ ಡಾರ್ಮೆಟರಿಯೂ ಇದೆ. ಇಲ್ಲಿ ದಿನಕ್ಕೆ ಒಬ್ಬರಿಗೆ 50-100 ರೂ ಬಾಡಿಗೆಗೆ ಡಾರ್ಮೆಟರಿ ಸಿಗುತ್ತದೆ. ಆತನ ಡಾರ್ಮೆಟರಿಯಲ್ಲೇ ಕುಟುಂಬದವರ ಜೊತೆ ಉಳಿದುಕೊಳ್ಳುತ್ತಿದ್ದ, ಆತ ದಿನಕ್ಕೆ 100 ರೂ ಬಾಡಿಗೆ ಕಟ್ಟುತ್ತಿದ್ದ ಎಂದು ತಿಳಿದುಬಂದಿದೆ.












Click it and Unblock the Notifications