ಮೆಟ್ರೋ ನಿಲ್ದಾಣದ ಬಳಿ ಹಾರ್ನ್ ಮಾಡಿದರೆ ಬೀಳುತ್ತೆ ದಂಡ
Recommended Video

ಬೆಂಗಳೂರು, ಫೆಬ್ರವರಿ 8: ಮೆಟ್ರೋ ನಿಲ್ದಾಣದ ಬಳಿ ಇನ್ನು ಮುಂದೆ ಹಾರ್ನ್ ಮಾಡುವಂತಿಲ್ಲ, ನಮ್ಮ ಮೆಟ್ರೋ ನಿಲ್ದಾಣಗಳ ಮುಂಭಾಗ ಹಾರ್ನ್ ಬಳಕೆಯಿಂದ ಶಬ್ದಮಾಲಿನ್ಯ ಹೆಚ್ಚಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ, ಎಲ್ಲ ನಿಲ್ದಾಣಗಳ ಮುಂಭಾಗದ ರಸ್ತೆಯನ್ನು ನೋ ಹಾರ್ನ್ ಪ್ರದೇಶ ಎಂದು ಘೋಷಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಮೆಟ್ರೋದ ಎತ್ತರಿಸಿ ಮಾರ್ಗದ ನಿಲ್ದಾಣದ ರಸ್ತೆ ಬದಿಯಲ್ಲಿವೆ, ರಸ್ತೆಯ ಮೇಲ್ಭಾಗ ಒಂದು ಬದಿಯಿಂದ ಇನ್ನೊಂದು ಬದಿಗೆ ಹಬ್ಬಿರುವ ನಿಲ್ದಾಣದ ಕಟ್ಟಡ ರಸ್ತೆಯನ್ನು ಒಳಗೆ ಇರಿಸಿಕೊಂಡಂತಿದೆ.
ಮೆಟ್ರೋ ನಿಲ್ದಾಣಗಳ ಮುಂಭಾಗ ಹಾರ್ನ್ ಮಾಡಿದರೆ ಪ್ರತಿಧ್ವನಿ ಉಂಟಾಗುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಮಂಡಳಿಗೆ ದೂರು ನೀಡಿದ್ದಾರೆ. ಹೀಗಾಗಿ ಶಬ್ದ ಮಾಲಿನ್ಯ ನಿಯಂತ್ರಕ್ಕೆ ಕ್ರಮ ಕೈಗೊಳ್ಳಲು ಈ ತೀರ್ಮಾನಕ್ಕೆ ಬರಲಾಗಿದೆ.
ಮೆಟ್ರೋ ನಿಲ್ದಾಣದ ಗೋಡೆಯಿಂದಾಗಿ ಪ್ರತಿಧ್ವನಿ ಉಂಟಾಗುತ್ತದೆ. ವಾಹನಗಳು ಹಾರ್ನ್ ಮಾಡಿದರೆ ಕೂಡಲೇ ಶಬ್ದ ನಿಲ್ದಾಣದ ಗೋಡೆಗೆ ತಾಗಿ ಸಾಮಾನ್ಯಕ್ಕಿಂತ ಹೆಚ್ಚು ಶಬ್ದ ಉಂಟು ಮಾಡುತ್ತದೆ.
ಎಂಜಿ ರಸ್ತೆ, ಟ್ರಿನಿಟಿ ವೃತ್ತ, ನ್ಯಾಷನಲ್ ಕಾಲೇಜು, ಸ್ವಾಮಿ ವಿವೇಕಾನಂದ್ ಮೆಟ್ರೋ ನಿಲ್ದಾಣ, ವಿಜಯನಗರ, ಲಾಲ್‌ಬಾಗ್ ಮೆಟ್ರೋ ನಿಲ್ದಾಣಗಳಲ್ಲಿ ಈ ರೀತಿ ಹಾರ್ನ್ ಮಾಡುವುದರಿಂದ ಪ್ರತಿಧ್ವನಿ ಸೃಷ್ಟಿಯಾಗಿ ಮಿತಿ ಮೀರಿದ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಹಾಗಾಗಿ ಮೆಟ್ರೋ ನಿಲ್ದಾಣದ ಬಳಿ ಹಾರ್ನ್ ನಿಷೇಧಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.












Click it and Unblock the Notifications