ಎಂಇಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಯೋಜನೆ

Recommended Video

      ಎಂಇಪಿ ( ಮಹಿಳಾ ಎಂಪವರ್ಮೆಂಟ್ ಪಾರ್ಟಿ ) ಅಧ್ಯಕ್ಷೆ ಡಾ ನೌಹೀರಾ ಶೇಖ್ ಭರವಸೆಯ ಮಹಾಪೂರ | Oneindia Kannada

      ಬೆಂಗಳೂರು, ಏಪ್ರಿಲ್ 11: ಎಂಇಪಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತೇವೆ, ರೈತರಿಗೆ ಬೆಳೆ ಬೆಳೆಯುವ ಮುನ್ನ ಮುಂಗಡ ಹಣ,ಬಿಪಿಎಲ್ ಕಾರ್ಡುದಾರರ ಮಕ್ಕಳಿಗೆ ಕೆಜಿಯಿಂದ ಪಿಜಿ ವರೆಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಮಹಿಳಾ ಎಂಪವರ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್ ಭರವಸೆ ನೀಡಿದ್ದಾರೆ.

      ಧರ್ಮ, ಜಾತಿ ಒಡೆಯುವ ರಾಜಕೀಯ ನಾವು ಮಾಡಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. 224ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಕಣಕ್ಕಿಳಿಯಲು 5700 ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಎಲ್ಲ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ದಲಿತ, ಲಿಂಗಾಯತ, ಮುಸ್ಲಿಂ ಹೀಗೆ ಎಲ್ಲರೂ ಇದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಶೇ.ನಾಲ್ಕು ಕ್ಷೇತ್ರ ರೈತರಿಗೆ ಮೀಸಲಿರಿಸಿದ್ದೇವೆ ಎಂದರು.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

      ರೈತರ ಸಂಪೂರ್ಣ ಸಾಲ ಮನ್ನ, ಮಹಿಳೆಯರಿಗೆ ಬಡ್ಡಿ ರಹಿತ ಸಾಲ, ರೈತರಿಗೆ ಬೆಳೆ ಬೆಳೆಯುವ ಮುನ್ನ ಮುಂಗಡ ಹಣ, ಬಿಪಿಎಲ್ ಕಾರ್ಡುದಾರರ ಮಕ್ಕಳಿಗೆ ಕೆಜಿಯಿಂದ ಪಿಜಿ ವರೆಗೆ ಉಚಿತ ಶಿಕ್ಷಣ, ಬಸ್ ಪ್ರಯಾಣ ಉಚಿತ, ಭ್ರಷ್ಟಾಚಾರ ತಡೆಯಲು
      ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸುತ್ತೇವೆ.

      MEP releases manifesto promising interest free loan for women

      ಲೋಕಸಭೆ ಚುನಾವಣೆಯಲ್ಲೂ ಕಣಕ್ಕಿಳಿಯುತ್ತೇವೆ. ಅಧಿಕಾರಕ್ಕೆ ಬಂದು ಜಿಎಸ್ ಟಿ ತೆಗೆದು ಹಾಕುತ್ತೇವೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧ ಸರ್ವೆ ಮಾಡಿಸಿದ್ದು 70 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆಂದು ವರದಿ ಬಂದಿದೆ.. ಆದರೆ ನಮ್ನ ಗುರಿ 150 ಸ್ಥಾನ ಗೆಲ್ಲುವುದು ಎಂದು ಮಾಹಿತಿ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+