ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ರೂವಾರಿಗಳು ಯಾರು?

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 03 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 'ಸ್ವಚ್ಛ ಭಾರತ' ಅಭಿಯಾನದಿಂದ ಪ್ರೇರೇಪಿತರಾದ ಶಾಸಕ ಸಿ. ಎನ್ ಅಶ್ವತ್ಥ ನಾರಾಯಣ ನಗರದಲ್ಲಿ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಎಂಬ ಅಭಿಯಾನಕ್ಕೆ ಅಕ್ಟೋಬರ್ 2ರ ಗಾಂಧಿಜಯಂತಿಯಂದು ಚಾಲನೆ ನೀಡಿದ್ದು, ಈ ಅಭಿಯಾನಕ್ಕೆ ಹಲವಾರು ಮಂದಿ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಬೆಂಗಳೂರನ್ನು ಇಡೀ ದೇಶಕ್ಕೆ ಮಾದರಿಯನ್ನಾಗಿ ಮಾಡುವ ಉದ್ದೇಶ ಹೊಂದಿರುವ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಬಿಬಿಎಂಪಿ ಅಧಿಕಾರಿಗಳು, ಕಾರ್ಯಕರ್ತರು, ಹಲವಾರು ಎನ್‌ಜಿಒ ಸಂಸ್ಥೆಗಳು, ಶಾಸಕರು, ಸಿನಿಮಾ ನಟರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ಕಸಮುಕ್ತ ನಗರ ಎಂಬ ಗರಿ ಹೊತ್ತು ಕೊಳ್ಳುವಂತೆ ಮಾಡಲಿದ್ದೇವೆ ಎಂದು ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.['ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಚಾಲನೆ]

Meet the man behind Smart Swachh Malleshwaram : Bengaluru

'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ಕುರಿತಾಗಿ ಶಾಸಕ ಡಾ. ಅಶ್ಬತ್ಥ ನಾರಾಯಣ 'ಒನ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ "ಈ ಅಭಿಯಾನದ ಯಶಸ್ಸಿಗೆ ಉತ್ತಮ ಪ್ರಚಾರ ಹಾಗೂ ಪಾಲ್ಗೊಳ್ಳುವ ಮನೋಭಾವ ಅವಶ್ಯಕತೆ ಇದೆ. ಈ ಜವಾಬ್ದಾರಿ ನಿರ್ವಹಣೆಗಾಗಿ ಪ್ರತಿಯೊಬ್ಬರು ತಮ್ಮ ಅಮೂಲ್ಯ ಸಮಯವನ್ನು ಅಭಿಯಾನಕ್ಕಾಗಿ ಮುಡಿಪಾಗಿಡಬೇಕು ಎಂದು ಹೇಳಿದ್ದಾರೆ.

ನಾವು ನಮ್ಮ ಭೂಮಿ ತಾಯಿಗೆ ಯಾವುದೇ ಭಾರ ಹೊರಿಸಬಾರದು. ಹಾಗಾಗಿ ಆದಷ್ಟು ಬೇಗ ಕಸವನ್ನು ವೈಜ್ಞಾನಿಕ ವಿಧಾನದಲ್ಲಿ ತೆರವುಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಂಡಿದ್ದೇವೆ ಎಂದು ಅಭಿಯಾನದ ಕುರಿತಾಗಿ ಭರವಸೆ ಮಾತುಗಳನ್ನಾಡಿದ್ದಾರೆ.

ನಾಗಲ್ಯಾಂಡಿನ ತೆಮ್ಸ್ಮುತಾಲ್ ಇಮ್ ಸಾಂಗ್ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ವಾರಾಣಾಸಿಯ ಗಂಗಾ ಘಾಟ್ ಸ್ವಚ್ಚತೆಗೆ ಮುಂದಾಗಿದ್ದು, ನರೇಂದ್ರ ಮೋದಿ ಅವರಿಂದ ಪ್ರಶಂಸೆಯ ಮಾತುಗಳನ್ನು ಪಡೆದಿದ್ದಾರೆ. ತೆಮ್ಸ್ಮುತಾಲ್ 'ಒನ್ ಇಂಡಿಯಾ'ಕ್ಕೆ ತಮ್ಮ ಸಂದರ್ಶನ ನೀಡಿದ್ದು, ಅಭಿಯಾನದ ಕುರಿತಾಗಿ ಅವರಿಗಿರುವ ಒಲವನ್ನು ತೆರೆದಿಟ್ಟಿದ್ದಾರೆ.[ಮೋದಿ ಕರೆಗೆ ಓಗೊಟ್ಟ ಸಚಿನ್ ಈಗ 'ಸ್ವಚ್ಛ ಭಾರತಕ್ಕೆ ದನಿ']

Meet the man behind Smart Swachh Malleshwaram : Bengaluru

"ಮಿಷನ್ ಪ್ರಭು ಘಾಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಮೂಲಕ ಏಪ್ರಿಲ್ 1 ಕ್ಕೆ ಅಭಿನಂದನೆ ತಿಳಿಸಿದ್ದಾರೆ. ಬಹು ದೊಡ್ಡ ಜವಾಬ್ದಾರಿ ನಿರ್ವಹಣೆಗಾಗಿ ನಾವು ಬಹಳ ಉಲ್ಲಾಸದಿಂದ ಕೆಲಸ ಮಾಡಬೇಕು ಎಂದಿದ್ದಾರೆ.

ಪ್ರಭು ಘಾಟ್ ನ್ನು 'ಸೊನಭಾತ್ರ ಕುಂಡ' ಎಂದು ಮರುನಾಮಕರಣ ಮಾಡಿ ಅದನ್ನು ಸ್ವಚ್ಚಗೊಳಿಸಲು ಮುಂದಾಗಿದ್ದೆವು. ಆದರೆ ಇದು ಸ್ವಚ್ಚವಾಗಿದ್ದು, ನಿರ್ವಹಣೆಗೆ ಅವಶ್ಯಕವಾದ ಪರಿಸರವನ್ನು ನಿರ್ಮಿಸಿಕೊಡುವುದರ ಮೂಲಕ ಅಲ್ಲಿನ ಜನರಿಗೆ ಕಸ ತ್ಯಾಜ್ಯಗಳನ್ನು ಆ ಕುಂಡಕ್ಕೆ ಸುರಿಯದಂತೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ತಿಳಿಸಿದರು. ವಾರಣಾಸಿಯ ಪ್ರಭುಘಾಟ್, ಪಾಂಡೆ ಘಾಟ್ ಹಾಗೂ ಕೇದರನಾಥದ ಗೌರಿ ಕುಂಡದ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.[ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]

ಸ್ವಚ್ಛ ಸ್ಮಾರ್ಟ್ ಮಲ್ಲೇಶ್ವರಂ ಅಭಿಯಾನದ ಕುರಿತಾಗಿ ಮಾತನಾಡಿದ ಇವರು, ಶಾಸಕ ಅಶ್ವತ್ಥ ಸತ್ಯ ನಾರಾಯಣ ಅವರು ಉತ್ತಮ ಜವಾಬ್ದಾರಿ ಹೊತ್ತಿದ್ದಾರೆ. ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ತೀರ್ಮಾನತೆಗೆದುಕೊಂಡಿರುವುದು ಖುಷಿಯಾಗಿದೆ ಎಂದು ಶ್ಲಾಘಿಸಿದರು. ಈ ಕಾರ್ಯಕ್ಕೆ ಕೈ ಜೋಡಿಸುವ ಮನಸ್ಸಿದ್ದರೆ ವಾಟ್ಸಪ್ 9480685700 ಸಂದೇಶ ಕಳುಹಿಸಬಹುದು ಎಂದು ತಿಳಿಸಿದ್ದಾರೆ.

ಮಲ್ಲೇಶ್ವರಂ ಕೇವಲ ಕರ್ನಾಟಕಕ್ಕೆ ಮಾತ್ರ ಮಾದರಿಯಾಗಬಾರದು. ಇದು ಇಡೀ ಪ್ರಪಂಚಕ್ಕೆ ಮಾದರಿಯಾಗಿ ನಿಲ್ಲಲಿ ಎಂದು ಆಶಿಸಿಸುತ್ತೇನೆ ಎಂದು ಶುಭ ಕೋರಿದರು.

English summary
The journey of 'Smart, Swachh Malleshwaram' started under the leadership of Dr CN Ashwathnarayan (MLA) to make this locality, a model for the rest of Bengaluru.To carry this initiative forward, Kannada film actor Yash, cricketers KL Rahul, Varun Aaron, campaigner Temsutula Imsong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X