ಅರ್ನಬ್ 'ರಿಪಬ್ಲಿಕ್' ಸಂಸ್ಥೆಗೆ ಸಂಸದ ರಾಜೀವ್ ಹೂಡಿಕೆ!
ಟೈಮ್ಸ್ ನೌ ಮಾಜಿ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಅವರ ಹೊಸ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಹೂಡಿಕೆದಾರರ ವಿವರ ಬಹಿರಂಗವಾಗಿದೆ. ಬಿಜೆಪಿ ಬೆಂಬಲಿತ ರಾಜೀವ್ ಚಂದ್ರಶೇಖರ್ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಹೂಡಿಕೆ ಮಾಡಿದ್ದಾರೆ
ಬೆಂಗಳೂರು, ಜನವರಿ 13: ಟೈಮ್ಸ್ ನೌ ಮಾಜಿ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಅವರ ಹೊಸ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಹೂಡಿಕೆದಾರರ ವಿವರ ಬಹಿರಂಗವಾಗಿದೆ. ಬಿಜೆಪಿ ಬೆಂಬಲಿತ ರಾಜೀವ್ ಚಂದ್ರಶೇಖರ್ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಹೂಡಿಕೆ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ರಾಜ್ಯಸಭಾ ಸದಸ್ಯ ಹಾಗೂ ಕೇರಳ ಎನ್‌ಡಿಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಆರಿನ್ ಕ್ಯಾಪಿಟಲ್ ಪಾಲುದಾರರಾದ ರಂಜನ್ ರಾಮದಾಸ್ ಪೈ ಹಾಗೂ ಮೋಹಾನ್ ದಾಸ್ ಪೈ ಅವರು 7.5 ಕೋಟಿ ಹೂಡಿಕೆ ಮಾಡಿದ್ದಾರೆ.
ರಿಪಬ್ಲಿಕ್ ಹೆಸರಿನ ಈ ಸುದ್ದಿ ಚಾನೆಲ್ ನವೆಂಬರ್ ಕೊನೆಗೆ ಅಪ್‌ಲಿಂಕ್ ಹಾಗೂ ಡೌನ್‌ಲೋಡಿಂಗ್ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದೆ. ರಿಪಬ್ಲಿಕ್, ಎಆರ್ ಸಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಅಂಗ ಸಂಸ್ಥೆಯಾಗಿದೆ.[ಗೋಸ್ವಾಮಿ ಹೊಸ ಸಾಹಸ 'ರಿಪಬ್ಲಿಕ್' ಆರಂಭ ಯಾವಾಗ?]

ಟೈಮ್ಸ್ ನೌ ಎಡಿಟರ್ ಇನ್ ಚೀಫ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನವೆಂಬರ್ 19ರಂದು ಈ ಕಂಪೆನಿಯ ಆಡಳಿತ ನಿರ್ದೇಶಕರಾಗಿ ಗೋಸ್ವಾಮಿ ನೇಮಕಗೊಂಡಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ತಮ್ಮ ಕಂಪೆನಿಯ ಮೂಲಕ 30 ಕೋಟಿ ರೂಪಾಯಿಗಳನ್ನು ಇದರಲ್ಲಿ ಹೂಡಿದ್ದಾರೆ.[ಗೋಸ್ವಾಮಿ ಸ್ಥಾನಕ್ಕೆ ರಾಹುಲ್ ಕರೆ ತಂದ ಟೈಮ್ಸ್ ನೌ]
ಎಸ್‌ಎಆರ್ ಜಿ ಮೀಡಿಯಾ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ರಾಜೀವ್ ಚಂದ್ರಶೇಖರ್ ಅವರ ಏಷ್ಯಾನೆಟ್ ನ್ಯೂಸ್ ಆನ್‌ಲೈನ್ ಪ್ರೈವೇಟ್ ಲಿಮಿಟೆಡ್ ಮುಖ್ಯ ಹೂಡಿಕೆದಾರರು. ಇದಕ್ಕೆ ಗೋಸ್ವಾಮಿ ಹಾಗೂ ಅವರ ಪತ್ನಿ ಸಮ್ಯಬ್ರತ ರಾಯ್ ಗೋಸ್ವಾಮಿ ಕೂಡಾ ನಿರ್ದೇಶಕರು. ಬಹುತೇಕ ಈಕ್ವಿಟಿ ಇವರ ಹೆಸರಿನಲ್ಲಿದೆ. ಇತರ 14 ಮಂದಿ ಇದರಲ್ಲಿ ಹೂಡಿಕೆ ಮಾಡಿದ್ದು, ನವೆಂಬರ್ 16ರಂದು ನೋಂದಣಿಯಾಗಿದೆ.
ಉಳಿದ ಹೂಡಿಕೆದಾರರಲ್ಲಿ ರಮಾಕಾಂತ ಪಾಂಡ, ಹೇಮೇಂದ್ರ ಕೊಠಾರಿ, ಎನ್.ನರೇಶ್ ಹಾಗೂ ಟಿವಿಎಸ್ ನ ಶೋಭನಾ ರಾಮಚಂದ್ರನ್ ಸೇರಿದ್ದಾರೆ. ಡಿಇಎನ್ ನೆಟ್‌ವರ್ಕ್‌ನ ಸಮೀರ್ ಮಂಚಂಡಾ ಹಾಗೂ ಇತರ ಇಬ್ಬರೂ ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಈಗಾಗಲೇ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭದ ಒಡೆತನ ಹೊಂದಿದ್ದಾರೆ. ರಾಜೀವ್ ಹಾಗೂ ಪೈ ಇಬ್ಬರು ಅರ್ನಬ್ ಅವರ ಪ್ರೈಮ್ ಟೈಮ್ ಶೋನಲ್ಲಿ ಹೆಚ್ಚು ಬಾರಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications