ಎಸಿಪಿ ಹರಿಶೇಖರನ್ ಬಿಚ್ಚಿಟ್ಟ 'ಆಪರೇಷನ್ ಸ್ಮೈಲ್' ಒಳ ಹೊರಗು
ಬೆಂಗಳೂರು, ಆಗಸ್ಟ್ 07: ಬೆಂಗಳೂರು ಪೊಲೀಸರು ಭಿಕ್ಷಾಟನೆಯಿಂದ ಮಕ್ಕಳನ್ನು ರಕ್ಷಣೆ ಮಾಡಲು 'ಆಪರೇಷನ್ ಸ್ಮೈಲ್' ಹೆಸರಿನ ಆಂದೋಲನವನ್ನು ಆರಂಭಿಸಿದ್ದಾಗಿದೆ. ಪೊಲೀಸರ ಹೊಸ ತಂಡದ ನಾಯಕತ್ವ ವಹಿಸಿಕೊಂಡಿರುವವರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್.
ಮಕ್ಕಳಿಗೆ ಹೊಸ ಬಾಳು ನೀಡುವ ಆಪರೇಶನ್ ಸ್ಮೈಲ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 190 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಯಾವ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳಬಾರದು. ನಮ್ಮ ಯೋಜನೆಯ ಮುಖ್ಯ ಗುರಿ ಇದೆ ಆಗಿದೆ ಎಂದು ಹರಿಶೇಖರನ್ ಒನ್‌ಇಂಡಿಯಾಕ್ಕೆ ತಿಳಿಸಿದ್ದಾರೆ.
ಮಕ್ಕಳ ಭಿಕ್ಷಾಟನೆಯ ಕರಾಳ ಮುಖ, ತೆಗೆದುಕೊಂಡ ಪರಿಹಾರ ಕ್ರಮ, ಮುಂದೆ ನಡೆದುಕೊಳ್ಳಬೇಕಾದ ರೀತಿ, ನಾಗರಿಕರ ಸಹಕಾರ ಈ ಎಲ್ಲ ಅಂಶಗಳನ್ನು ಹರಿಶೇಖರನ್ ಅವರ ಬಾಯಿಂದಲೇ ಕೇಳಿ...[ಬೆಂಗಳೂರಲ್ಲಿ ರಕ್ಷಿಸಿದ ಮಕ್ಕಳ ಸಂಖ್ಯೆ ಎಷ್ಟು]

ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳಲ್ಲಿ ಬಹುತೇಕರು ಬಿಹಾರ ಮತ್ತು ರಾಜಸ್ಥಾನಕ್ಕೆ ಸೇರಿದವರಾಗಿದ್ದಾರೆ. ಮಕ್ಕಳನ್ನು ಬಲಾತ್ಕಾರಯುತವಾಗಿ ಭಿಕ್ಷಾಟನೆಗೆ ತಳ್ಳಿರುವುದು ಗೊತ್ತಾಗಿದೆ. ಮಕ್ಕಳ ಭಿಕ್ಷಾಟನೆ ಹಿಂದೆ ರಾಜಸ್ಥಾನದ ಗ್ಯಾಂಗ್ ವೊಂದರ ಕೈವಾಡವಿದೆ.
ಶಿಶುಗಳಿಗೆ ಮುಂಜಾನೆಯೇ ಮತ್ತು ಬರುವ ಔಷಧ ಕುಡಿಸಲಾಗುತ್ತಿತ್ತು. ಮಗುವಿನ ಎದುರಿಗೆ ಕುಳೀತು ಭಿಕ್ಷೆ ಬೇಡಲಾಗುತ್ತಿತ್ತು ಎಂಬ ಮಾಹಿತಿಯನ್ನು ನೀಡಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಮಗುವಿನ ತಾಯಿ ಅಥವಾ ಕುಟುಂಬಸ್ಥರು ಭಿಕ್ಷೆ ಬೇಡುತ್ತಿದ್ದರು. ಮತ್ತಿನ ಔಷಧ ಪರಿಣಾಮ ಮಗು ಯಾವ ಸಮಯದಲ್ಲೂ ಎಚ್ಚರಗೊಳ್ಳುತ್ತಿರಲಿಲ್ಲ.[ಮಕ್ಕಳ ರಕ್ಷಣೆಗೆ ಆರಂಭವಾಯಿತು 'ಆಪರೇಷನ್ ಸ್ಮೈಲ್']
ರಕ್ಷಣೆ ಮತ್ತು ಪುನರ್ವಸತಿ
ಆಪರೇಶನ್ ಸ್ಮೈಲ್ ಎರಡು ವಿಭಾಗದಲ್ಲಿ ಕಾರ್ಯ ನಿರ್ವಹಿಸಲಿದೆ. ಎಲ್ಲ ಮಕ್ಕಳನ್ನು ಈ ಯೋಜನೆ ಅನ್ವಯ ರಕ್ಷಣೆ ಮಾಡಲಾಗುತ್ತಿದೆ. ಕೇವಲ ರಕ್ಷಣೆ ಮಾಡಿದರೆ ಕೆಲ ಮುಗಿದಂತೆ ಅಲ್ಲ. ಈ ಮಕ್ಕಳು ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ನೆರವಿನಲ್ಲಿ ರಕ್ಷಣೆ ಮಾಡಿದ ಎಲ್ಲ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುತ್ತದೆ. ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲಿದ್ದೇವೆ ಎಂಬ ನಂಬಕೆಯೂ ಇದೆ. ಮಕ್ಕಳನ್ನು ರಾಜ್ಯ ಸರ್ಕಾರ ನಡೆಸುತ್ತಿರುವ ಬಾಲಮಂದಿರದ ಆರೈಕೆಗೆ ನೀಡಲಾಗುವುದು. ಮಕ್ಕಳ ಮುಖದಲ್ಲೇ ಮತ್ತೆ ನಗುವನ್ನು ತರಿಸಿದರೆ ಯೋಜನೆ ಸಾರ್ಥಕ ಕಾಣುತ್ತದೆ.
ಆಪರೇಶನ್ ಸ್ಮೈಲ್ ಮುಂದುವರಿಯುತ್ತದೆ
ಮಕ್ಕಳನ್ನು ಬಲಾತ್ಕಾರಯುತವಾಗಿ ಭಿಕ್ಷಾಟನೆಗೆ ತಳ್ಳುತ್ತಿದ್ದ 65 ಮಹಿಳೆಯರು ಮತ್ತು ಎಂಟು ಪುರುಷರನ್ನು ಬಂಧಿಸಲಾಗಿದೆ. ಬಸ್ ನಿಲ್ಆದಣ, ರೈಲ್ವೆ ನಿಲ್ದಾಣ, ಟ್ರಾಫಿಕ್ ಸಿಗ್ನಲ್, ಸಿನಿಮಾ ಮಂದಿರ, ಶಾಲೆ, ದೇವಾಲಯ ಎಲ್ಲ ಕಡೆಗಳಲ್ಲೂ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದಾರೆಯೇ ಎಂಬುದನ್ನು ಮತ್ತೇ ಮತ್ತೇ ಪರಿಶೀಲನೆ ಮಾಡಲಾಗುತ್ತಿದೆ.
ತಾಯಿಯೇ ಮಗುವನ್ನು ಭಿಕ್ಷಾಟನೆಗೆ ತಳ್ಳುತ್ತಿದ್ದ ಪ್ರಸಂಗಗಳು ಕಂಡುಬಂದಿವೆ. ಮುಂದೆ ಇಂಥ ಪ್ರಕರಣ ನಡೆದರೆ ತಾಯಿಯನ್ನು ರಕ್ಷಣಾ ಕೇಂದ್ರಕ್ಕೆ ಕಳುಹಿಸಿ ಕೊಡಲಾಗುವುದು. ಸುಮಾರು 300 ಜನ ಅಧಿಕಾರಿಗಳೊಂದಿಗೆ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಎನ್ ಜಿಒಗಳು ಸದಾ ಕಾರ್ಯನಿರತವಾಗಿರಲಿವೆ.












Click it and Unblock the Notifications