ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಂ ಕ್ವಾರಂಟೈನ್‌ನಲ್ಲಿ ನನ್ನನ್ನು ಕಟ್ಟಿಹಾಕಿದಂತೆ ಆಗಿತ್ತು: ಡಾ. ಸುಧಾಕರ್

|
Google Oneindia Kannada News

ಬೆಂಗಳೂರು, ಜೂ. 30: ಹೋಂ ಕ್ವಾರಂಟೈನ್ ಮುಗಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೆಲಸಕ್ಕೆ ಮರಳಿದ್ದಾರೆ. ಡಾ. ಸುಧಾಕರ್ ಅವರ ತಂದೆ, ಪತ್ನಿ ಹಾಗೂ ಮಗಳಿಗೆ ಕೋರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಡಾ. ಸುಧಾಕರ್ ಅವರು ಕ್ವಾರಂಟೈನ್ ಅವಧಿ ಮುಗಿಸಿ ಇವತ್ತು ವಿಧಾನಸೌಧಕ್ಕೆ ಆಗಮಿಸಿದ್ದಾರೆ.

Recommended Video

Dr Sudhakar shares his experience after finishing his quarantine period | Oneindia Kannada

ಕೊರೋನಾ ಸೋಂಕಿತರಿಗೆ ಬೆಡ್ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಪತ್ನಿ, ಪುತ್ರಿಗೆ ಕೋವಿಡ್-19 ಸೋಂಕು ತಗುಲಿದ್ದರ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಜನರು ಆತಂಕ ಪಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಟ್ಟಿ ಹಾಕಿದಂತೆ ಆಗಿತ್ತು

ಕಟ್ಟಿ ಹಾಕಿದಂತೆ ಆಗಿತ್ತು

ಪುತ್ರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದರಿಂದ ನಾನು ಕ್ವಾರಂಟೈನ್‌ನಲ್ಲಿದ್ದೆ ಎಂದು ವಿಧಾನಸೌಧದಲ್ಲಿ ಸಚಿವ ಡಾ. ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ. ಎರಡು ಬಾರಿಯೂ ಟೆಸ್ಟಿಂಗ್‌ನಲ್ಲಿ ನನ್ನ ರಿಪೋರ್ಟ್ ನೆಗಟೀವ್ ಬಂದಿದೆ. ಕ್ವಾರಂಟೈನ್‌ನಲ್ಲಿದ್ದರೂ ನಿತ್ಯ ಕೋವಿಡ್-19 ನಿರ್ವಹಣೆ ಕೆಲಸದಲ್ಲಿ ಮನೆಯಿಂದಲೇ ಭಾಗವಹಿಸಿದ್ದೇನೆ. ಇವತ್ತು ಮನೆಯಿಂದ ಹೊರಗೆ ಬಂದಿದ್ದೇನೆ. ನಾನು ಸದಾ ಚಟುವಟಿಕೆಗಳಿಂದ ಕೂಡಿರುವ ಮನುಷ್ಯ, ಹೀಗಾಗಿ ಮನೆಯಲ್ಲಿರುವುದು ಕಟ್ಟಿ ಹಾಕಿದಂತೆ ಆಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕೋವಿಡ್-19 ಚಿಕಿತ್ಸೆ: ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!ಕೋವಿಡ್-19 ಚಿಕಿತ್ಸೆ: ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!

ಈಗ ಮತ್ತೆ ಜನರ ಸೇವೆ ಮಾಡುವ ಅವಕಾಶ ಬಂದಿದ್ದು ಸಂತಸ ತಂದಿದೆ. ಎಲ್ಲರ ಹಾರೈಕೆಯಿಂದ ಮತ್ತೆ ಎಲ್ಲರ ಸೇವೆಗೆ ಅವಕಾಶ ಸಿಕ್ಕಿದೆ. ಮತ್ತೆ ಎಂದಿನ ಬದ್ದತೆಯಿಂದ ಕೆಲಸ ಮಾಡುತ್ತೇನೆ. ನನ್ನ ಕುಟುಂಬದಲ್ಲಿ ಯಾರಿಗೆಲ್ಲ ಪಾಸಿಟಿವ್ ಬಂದಿತ್ತೋ ಅವರೂ ಗುಣಮುಖರಾಗಿದ್ದಾರೆ, ಇನ್ನೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ ಎಂದಿದ್ದಾರೆ.

ಆತಂಕ ಬೇಡ: ಡಾ. ಸುಧಾಕರ್

ಆತಂಕ ಬೇಡ: ಡಾ. ಸುಧಾಕರ್

ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ. ಆದರೆ ಯಾರು ಆತಂಕ ಪಡಬೇಡಿ ಎಂದು ಡಾ. ಸುಧಾಕರ್ ಮನವಿ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಕೋವಿಡ್-19 ಹೆಚ್ಚಳ ವಾಗುತ್ತಿದೆ. ಈ ಬಗ್ಗೆ ಆಮೇಲೆ ಮಾಧ್ಯಮಗಳ ಜೊತೆ ವಿಚಾರ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ಜುಲೈ ತಿಂಗಳಿನಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ನಾನು ಈ ಮೊದಲೇ ಹೇಳಿದ್ದೆ. ಜೊತೆಗೆ ಆತಂಕ ಪಡಬೇಡಿ ಎಂದೂ ಹೇಳಿದ್ದೆ. ಹೀಗಾಗಿ ಆ ಬಗ್ಗೆ ಸವಿವರವಾಗಿ ಆಮೇಲೆ ಮಾತನಾಡುತ್ತೇನೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.

ಸಿಎಂ ಜೊತೆ ಸಭೆಯಲ್ಲಿ ಭಾಗಿ

ಸಿಎಂ ಜೊತೆ ಸಭೆಯಲ್ಲಿ ಭಾಗಿ

ಕೊರೋನಾ ಸೋಂಕಿತರಿಗೆ ಬೆಡ್ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಾ. ಸುಧಾಕರ್ ಭಾಗವಹಿಸಿದರು.

ಬೆಂಗಳೂರಿನಲ್ಲಿ 495 ಕೋವಿಡ್ 19 ಸೋಂಕಿತ ವಲಯಗಳಿವೆ!ಬೆಂಗಳೂರಿನಲ್ಲಿ 495 ಕೋವಿಡ್ 19 ಸೋಂಕಿತ ವಲಯಗಳಿವೆ!

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್ ಹಾಗೂ ವೈದ್ಯಾಧಿಕಾರಿಗಳು ಹಾಗೂ ಖಾಸಗಿ ಮೆಡಿಕಲ್ ಕಾಲೇಜ್‌ಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಮೆಡಿಕಲ್ ಕಾಲೇಜ್‌ಗಳಲ್ಲಿ ಶೇಕಡ 50ರಷ್ಟು ಬೆಡ್‌ಗಳನ್ನು ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲಿಡುವ ಬಗ್ಗೆ ಚರ್ಚೆ ನಡೆದು. ಖಾಸಗಿ ಆಸ್ಪತ್ರೆ ಮುಖ್ಯಸ್ಥರು 4500 ಬೆಡ್‌ ಒದಗಿಸಲು ಸಭೆಯಲ್ಲಿ ಒಪ್ಪಿಕೊಂಡರು.

ಲ್ಯಾಬ್‌ಗಳ ಸಂಖ್ಯೆ ಹೆಚ್ಚಳ

ಲ್ಯಾಬ್‌ಗಳ ಸಂಖ್ಯೆ ಹೆಚ್ಚಳ

ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡಾಗ ಕೋವಿಡ್-19 ಪರೀಕ್ಷೆಗೆ ಕೇವಲ 2 ಲ್ಯಾಬ್‌ಗಳಿದ್ದವು. ಈಗ 80 ಲ್ಯಾಬ್‌ಗಳನ್ನು ಸ್ಥಾಪಿಸಿದ್ದೇವೆ. ಮುಂದುವರಿದ ಭಾಗವಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಬೆಡ್ ಕಲ್ಪಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ ಹೇಳಿಕೆ ಕೊಟ್ಟಿದ್ದಾರೆ.

English summary
The Minister of Medical Education Dr. Sudhakar who completed the Home Quarantine has returned to work. Dr. Sudhakar's father, wife and daughter have been diagnosed with coronavirus and are being treated at a hospital. They shared their experience, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X