ಬೆಂಗಳೂರನ್ನು ಸ್ವಚ್ಛ, ಸುಂದರವಾಗಿಸಲು ಕೆನರಾ 'ಗ್ರಾಫಿಟಿ' ಅಭಿಯಾನ
ಬೆಂಗಳೂರು, ಫೆಬ್ರುವರಿ 9, 2019: ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಪ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ 'me for my city' ಹೆಸರಿನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆರಂಭಿಸಿತು. ಈ ಕಾರ್ಯಕ್ರಮವು ನಮ್ಮ ನಗರವು ಸ್ವಚ್ಛ ಮತ್ತು ಸುಂದರವಾಗಿರಲು ನೆರವಾಗಲಿದೆ. ಇದರ ಭಾಗವಾಗಿ 135/3, ವಿಜಯು ಆರ್ಕೆಡ್, ಲಾಲ್‍ಬಾಗ್ ರಸ್ತೆ, ಬೆಂಗಳೂರು ಇಲ್ಲಿ ಗ್ರಾಫಿಟಿ ಕಲೆ ನಡೆಯಿತು.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂಥದೊಂದು ಕ್ರಮಕ್ಕೆ ಮುಂದಾಗಿದ್ದು, ದೆಹಲಿ, ಗುರುಗ್ರಾಮ, ಮುಂಬೈ ಮತ್ತು ಪಂಜಾಬ್‍ನ ಮೊಹಾಲಿಯಲ್ಲಿ ಜನನಿಬಿಡ ಸ್ಥಳದ ಗೋಡೆಗಳ ಮೇಲೆ ಗ್ರಾಫಿಟಿ ಕಲೆ ಮೂಡಿಸಿದ ಬಳಿಕ ಇಲ್ಲಿ ಚಾಲನೆ ನೀಡಲಾಗಿದೆ.
ಕೆನರಾ ಎಚ್‍ಎಸ್‍ಬಿಸಿ ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ ಈ ನಿಟ್ಟಿನಲ್ಲಿ ಹೆಜ್ಜೆಯನ್ನು ಕೈಗೊಂಡಿದ್ದು, ಒಂದು ಸರಳವಾದ ಚಿತ್ರಣ, ಅಭಿವ್ಯಕ್ತಿಯು ಹೇಗೆ ನಗರವನ್ನು ಸುಂದರವಾಗಿ ಇಡಬಹುದು ಎಂಬ ಪ್ರಜ್ಞೆಯನ್ನು ಜಾಗೃತಗೊಳಿಸಲಿದೆ. ಈ ಕಾರ್ಯಕ್ರಮವು ಮೂಲಕ ನಮ್ಮ ಪರಿಸರವನ್ನು ಹೇಗೆ ಸುಂದರವಾಗಿ ಮತ್ತು ಸ್ವಚ್ಛವಾಗಿ ಇಡಬಹುದು ಎಂಬುದನ್ನು ತೋರಿಸಲಿದೆ. ಕಂಪನಿಯು ಇದರ ಜೊತೆಗೆ ಗ್ರಾಫಿಟಿ ಕಲೆಯನ್ನು ಕೊಚ್ಚಿ ಮತ್ತು ಚೆನ್ನೈನಲ್ಲಿಯೂ ಕೈಗೊಳ್ಳಲಿದೆ.

ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅನುಜ್ ಮಾಥೂರ್ ಅವರು, 'ನಾವು ಈಮೂಲಕ ಸಮಾಜಕ್ಕೆ ಸಣ್ಣ ಕೊಡುಗೆ ನೀಡಲು ಯತ್ನಿಸುತ್ತಿದ್ದು, ಇದಕ್ಕೆ ನಮ್ಮ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು, ನಮ್ಮ ಹೊಣೆಯನ್ನು ಹೆಚ್ಚಿಸಿದ್ದು, ಜೊತೆಗೆ ನಮ್ಮ ಗ್ರಾಹಕರ ಜೊತೆಗೆ ಇನ್ನೂ ಹೆಚ್ಚಿನ ಬಾಂಧವ್ಯ ಹೊಂದಲು ನೆರವಾಗಿದೆ.
ಒಂದು ಕಂಪನಿಯಾಗಿ ಪ್ರತಿಯೊಂದು ಸಂಘಟನೆಯು ಇದರಲ್ಲಿ ಭಾಗಿಯಾಲು ನಾವು ಉತ್ತೇಜಿಸಲಿದ್ದು, ಪರಿಸರವನ್ನು ಕಾಯ್ದುಕೊಳ್ಳಲು ಸುಸ್ಥಿರಾಭಿವೃದ್ಧಿ ಕ್ರಮಗಳಿಗೆ ಒತ್ತು ನೀಡಲು ಬೆಂಬಲಿಸಲಿದೆ. ಅಲ್ಲದೆ, ನಾವು ಪರಿಸರವನ್ನು ಸ್ವಚ್ಛವಾಗಿ ಇಡುವ ಕುರಿತು ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ' ಎಂದು ತಿಳಿಸಿದರು.
ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್‍ನ ಚೀಫ್ ಡಿಸ್ಟ್ರಿಬ್ಯೂಷನ್ ಆಫೀಸರ್ ತರನ್ನುಮ್ ಹಾಸಿಬ್ ಅವರು, 'ನಮ್ಮ ಭರವಸೆಯ ಕಾರ್ಯಗಳು ಎಂದಿಗೂ ನೆನಪಿನಲ್ಲಿ ಇರುತತವೆ. ನಗರ ಸ್ವಚ್ಛ ಮತ್ತು ಸುಂದರವಾಗಿ ಇರಲು ಸಮಾಜ ದೊಡ್ಡ ಪ್ರಮಾಣದಲ್ಲಿ ಕೈಜೋಡಿಸಬೇಕು. ಚೆನ್ನೈ, ಬೆಂಗಳೂರು ಮತ್ತು ಕೊಚ್ಚಿಯಲ್ಲಿ ಕೈಗೊಂಡ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ, ಸ್ಪಂದನೆ ದೊರೆತಿದೆ' ಎಂದರು.
ಇದುವರೆಗೂ ಕೆನರಾ ಎಚ್‍ಎಸ್‍ಬಿಸಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಲೈಫ್ ಇನ್ಸೂರೆನ್ಸ್ ಸುಮಾರು 10,000 ಚದರ ಅಡಿ ಅಳತೆಯ ಗ್ರಾಫಿಟಿ ಚಿತ್ರಕಲೆಯನ್ನು ಏಳು ನಗರಗಳಲ್ಲಿ ಕೈಗೊಂಡಿದೆ. ಸ್ವಚ್ಛ ಮತ್ತು ನಗರವನ್ನು ಸುಂದರವಾಗಿಡುವ ನಿಟ್ಟಿನಲ್ಲಿದೊಡ್ಡ ಪ್ರಮಾಣದ ಕೊಡುಗೆ ನೀಡಿದೆ ಎಂಣದು ಹೇಳಿದರು. ಕಂಪನಿಯು ಈ ಕಾರ್ಯಕ್ರಮಕ್ಕಾಗಿ ರೇಡಿಯೊ ಮಿರ್ಚಿ ಜೊತೆಗೆ ಪಾಲುದಾರಿಕೆ ಹೊಂದಿದ್ದು, ರೇಡಿಯೋ ಮೂಲಕ ಸಭಿಕರನ್ನು ತಲುಪುತ್ತಿದೆ.












Click it and Unblock the Notifications