ಶೋಭಾ ಕರಂದ್ಲಾಜೆ, ಬಿಎಸ್ ಯಡಿಯೂರಪ್ಪ ಲೀಲಾ ಪ್ಯಾಲೆಸ್‌ನಲ್ಲಿ ಯಾರನ್ನ ಭೇಟಿ ಮಾಡಿದ್ರು? ಎಂಬಿ ಪಾಟೀಲ್ ಸ್ಫೋಟಕ ಹೇಳಿಕೆ
ಬೆಂಗಳೂರು, ಮೇ 01: 2013ರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಲೀಲಾ ಪ್ಯಾಲೇಸ್‌ನಲ್ಲಿ ಯಾರನ್ನು ಭೇಟಿ ಮಾಡಿದ್ದರು? ಎರಡು ಬಾರಿ ಭೇಟಿ ಮಾಡಿ ಏನು ಮಾತನಾಡಿದ್ದೀರಿ? ಮುಂದಿನ ಮೂರು ನಾಲ್ಕು ದಿನಗಳಲ್ಲಿ ಎಲ್ಲಾ ವಿಚಾರಗಳನ್ನು ಬಹಿರಂಗ ಮಾಡುತ್ತೇವೆ, ನಾವು ಗಾಳಿಯಲ್ಲಿ ಗುಂಡು ಹೊಡೆಯುವರಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ. ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಂ.ಬಿ. ಪಾಟೀಲ್, ಬಿಜೆಪಿ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳನ್ನು ಮಾಡಿದರು. ಪ್ರಧಾನಿ ಮೋದಿ ಯಾವುದೇ ಅಭಿವೃದ್ಧಿ ಮಾಡಿಲ್ಲ, ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದ್ರ, ಆದರೆ ಖರ್ಚನ್ನು ಡಬಲ್ ಮಾಡಿದ್ದಾರೆ, ಆದಾಯ ಮಾತ್ರ ಕಡಿಮೆಯಾಗಿದೆ ಎಂದು ಪಾಟೀಲ್ ಆರೋಪಿಸಿದರು.

ಡಬಲ್ ಇಂಜಿನ್ ಸಂಪೂರ್ಣವಾಗಿ ಫೇಲ್ ಆಗಿವೆ, ಇವು ರಿಪೇರಿ ಮಾಡದಷ್ಟು ಹಾಳಾಗಿವೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ, ಆದರೆ 3.50 ಲಕ್ಷ ಕೋಟಿ ರುಪಾಯಿ ಸಾಲ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆಪರೇಷನ್ ಕಮಲಕ್ಕಾಗಿ ಒಬ್ಬ ಶಾಸಕರ ಮೇಲೆ 80-100 ಕೋಟಿ ರುಪಾಯಿ ಖರ್ಚು ಮಾಡಿ ಯಡಿಯೂರಪ್ಪ ಮೂಲಕ ಬಿಜೆಪಿ ಸರ್ಕಾರವನ್ನು ರಚನೆ ಮಾಡಿದರು ಎಂದು ಪಾಟೀಲ್ ಹೇಳಿದರು.
ಸರ್ಕಾರ ರಚನೆ ಮಾಡಿದ ಕೆಲವು ದಿನಗಳಲ್ಲೇ ಬಿಎಸ್ ಯಡಿಯೂರಪ್ಪನವರನ್ನು ತೆಗೆದುಹಾಕಿದರು. ವೀರೇಂದ್ರ ಪಾಟೀಲ್‌ರನ್ನು ಕಾಂಗ್ರೆಸ್ ಕಡೆಗಣಿಸಿತು ಎಂದು ಅವರು ಹೇಳುತ್ತಾರೆ, ಪಾಟೀಲ್‌ರಿಗೆ ಅನಾರೋಗ್ಯ ಇದ್ದಿದ್ದರಿಂದ ಅವರನ್ನು ತೆಗೆದು ಬಂಗಾರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು, ಹಿರಿಯ ಮುಖಂಡರನ್ನು ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಬಿಜೆಪಿ ಬಳಸಿಕೊಂಡು ಕಡೆಗಣಿಸಿದೆ, ಅವರಿಗೆ ಯಾವ ಆರೋಗ್ಯ ಸಮಸ್ಯೆ ಇಲ್ಲ ದಷ್ಟಪುಷ್ಟವಾಗಿದ್ದಾರೆ. ಒಬ್ಬ ಲಿಂಗಾಯತರನ್ನು ತೆಗೆದು ಮತ್ತೊಬ್ಬ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದೆ, ಇದರಲ್ಲಿ ಬಿಜೆಪಿ ಹಿಡನ್ ಅಜೆಂಡಾ ಇದೆ. ಬೊಮ್ಮಾಯಿ ಆಕ್ಸಿಡೆಂಟಲ್ ಮುಖ್ಯಮಂತ್ರಿ ಎಂದರು ಪಾಟೀಲ್ ಹೇಳಿದರು.
ಲಕ್ಷ್ಮಣ ಸವದಿಯವರಿಗೆ ಟಿಕೆಟ್ ನೀಡುವುದಾಗಿ ಹೇಳಿ ಬಿಜೆಪಿ ಮೋಸ ಮಾಡಿದೆ. ಜಗದೀಶ್ ಶೆಟ್ಟರ್ ಅವರಿಗೆ 67 ವರ್ಷ ವಯಸ್ಸು, ಅವರ ವಯಸ್ಸಿನ ಹಲವು ನಾಯಕರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ, ಶೆಟ್ಟರ್ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರು, ಸಿಎಂ ಆಗಿದ್ದಾಗ ಅವರ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪ ಕೂಡ ಇರಲಿಲ್ಲ, ಹೀಗಿದ್ದರೂ, ಅವರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಲಿಂಗಾಯತ ಸಮುದಾಯವನ್ನು ಬಳಸಿಕೊಂಡು ಕೈಬಿಟ್ಟಿದ್ದಾರೆ.
ಲಿಂಗಾಯತರು ಈಗ ವಾಪಸ್ ಕಾಂಗ್ರೆಸ್‌ಗೆ ಬರುತ್ತಿದ್ದಾರೆ, ಈಗ ಬಿಜೆಪಿ ನಾಯಕರು ಗಾಬರಿಯಾಗಿದ್ದಾರೆ. ಇಲ್ಲಿನ ನಾಯಕರಿಗೆ ಒಂದು ವೋಟು ಬೀಳಲ್ಲ ಅದಕ್ಕಾಗಿ ಮೋದಿ, ಅಮಿತ್ ಶಾರನ್ನು ಕರೆಸಿದ್ದಾರೆ. ಮೋದಿಯನ್ನೇ ಮುಖ್ಯಮಂತ್ರಿ ಮಾಡ್ತಾರೆ ಅನ್ನೋ ರೀತಿ ಬಿಂಬಿಸಲಾಗ್ತಿದೆ ಎಂದರು. ಲಿಂಗಾಯತರನ್ನು ಕಡೆಗಣಿಸಿದ ಬಿಜೆಪಿ ಮತ್ತೆ ಲಿಂಗಾಯತರನ್ನೇ ಶೆಟ್ಟರ್ ವಿರುದ್ಧ ಬಿಟ್ಟಿದೆ.
ಲೀಲಾ ಪ್ಯಾಲೆಸ್‌ನಲ್ಲಿ ಭೇಟಿ ಮಾಡಿದ್ದು ಯಾರನ್ನು?
2013ರಲ್ಲಿ ಕೆಜೆಪಿ ಪಕ್ಷ ಸ್ಥಾಪನೆ ಮಾಡಿದಾಗ ನೀವು ಎಲ್ಲಿಗೆ ಚೂರಿ ಹಾಕಿದ್ದೀರಿ, ಬೆನ್ನಿಗೆ ಚೂರಿ ಹಾಕಿದ್ದೀರಾ, ಎದೆಗೆ ಚೂರಿ ಹಾಕಿದ್ದೀರಾ ಎಂದು ಪ್ರಶ್ನೆ ಮಾಡಿದರು. ಯಡಿಯೂರಪ್ಪನವರು ಮತ್ತು ಶೋಭಾ ಕರಂದ್ಲಾಜೆಯವರು 2013ರಲ್ಲಿ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ, ಎರಡು ಬಾರಿ ಯಾರನ್ನ ಭೇಟಿಯಾಗಿದ್ರಿ? ಏನು ಮಾತುಕತೆ ಆಯಿತು, ಮಾತುಕತೆ ಯಾಕೆ ವಿಫಲವಾಯ್ತು? ಎಂದು ಪ್ರಶ್ನೆ ಮಾಡಿದರು. ಈ ಬಗ್ಗೆ ಎಲ್ಲಾ ಮಾಹಿತಿ ಇದೆ, ಎರಡು ಮೂರು ಹಂತಗಳಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿ ಕೊಡ್ತೀವಿ ಎಂದರು. ಎರಡು ಮೂರು ದಿನದ ಬಳಿಕ ಮತ್ತೆ ಪತ್ರಿಕಾಗೋಷ್ಠಿ ಕರೆದು ಈ ಬಗ್ಗೆ ವಿವರ ಕೊಡ್ತೀನಿ, ನಾನು ಗಾಳಿಯಲ್ಲಿ ಗುಂಡುಹೊಡೆಯುತ್ತಿಲ್ಲ ಎಂದು ಹೇಳಿದರು.
ಯಡಿಯೂರಪ್ಪನವೇ ಮತ್ತು ಶೋಭಾ ಕರಂದ್ಲಾಜೆಯವರೆ ಇದನ್ನೆಲ್ಲಾ ಬಿಟ್ಟುಬಿಡಿ. ಬಿಜೆಪಿಯವರ ಷಡ್ಯಂತ್ರಕ್ಕೆ ಬಲಿಯಾಗ್ಬೇಡಿ, ಲಿಂಗಾಯತರನ್ನು ತುಳಿಯಲು ಹೋಗಬೇಡಿ, ನೀವು ವಿಧಾನಸಭೆಯ ಒಳಗೆ ಮತ್ತು ಹೊರಗೆ ಕಣ್ಣೀರಾಕಿದ್ದೀರಿ, ನಿಮ್ಮನ್ನು ಬಿಜೆಪಿ ಬಳಸಿ ಕಸದ ಬುಟ್ಟಿಯಲ್ಲಾಕಿದೆ ಇದನ್ನು ಅರ್ಥ ಮಾಡಿಕೊಳ್ಳಿ ಎಂದರು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications