ದಟ್ಟ ಕಾನನಕ್ಕೆ ಉಲ್ಲಾಸ ತುಂಬುವಂಥ ಮಳೆಗೆ ಬೆಂದ ಬೆಂಗಳೂರು ಕೂಡ ಕಾಯುತ್ತಿದೆ

ಬೆಂಗಳೂರು, ಏ.9: ವರ್ಷದ ಮೊದಲ ಮಳೆ ದಟ್ಟ ಕಾನನಕ್ಕೆ ಮಳೆಯ ಸಿಂಚನದಿಂದ ಹೊಸ ಉಲ್ಲಾಸ ತುಂಬಿದೆ. ಆದರೆ ಕಾದ ಕಬ್ಬಿಣದಂತೆ ಕೆಂಪಾಗಿರುವ ಬೆಂಗಳೂರಿಗೆ ಮಾತ್ರ ಇಬ್ಬನಿಯಂತೆ ಒಂದಷ್ಟು ಹನಿಗಳನ್ನು ಸಿಂಪಡಿಸಿ ಹೊರಟೇ ಬಿಟ್ಟಿದೆ.

ವಾಟ್ಸಪ್, ಫೇಸ್‌ಬುಕ್ ಎಲ್ಲಿ ನೋಡಿದರೂ ಮಳೆಯ ಮಾತೇ ನಮ್ಮ ಕಡೆ ಆಲಿಕಲ್ಲು ಮಳೆ ಬಂತು, ಸಿಡಿಲು ಗುಡುಗು, ಗಾಳಿ ಮಳೆ ಬಂತು ನಿಮ್ಮ ಕಡೆ ಇತ್ತಾ ಎಂದು. ಆದರೆ ಬೆಂಗಳೂರಲ್ಲಿ ಈ ವರ್ಷ ಅಂತಹ ಮಳೆಯ ದರ್ಶನವಿನ್ನೂ ಆಗಿಲ್ಲ.

ಆದರೆ ನಿನ್ನೆಯಿಂದ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Maximum temperature increase Bengaluru peoples are waiting for rain

ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು, ಗದಗ, ಶಿವಮೊಗ್ಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾದ ಹಿನ್ನೆಲೆಯಲ್ಲಿ ಸ್ವಲ್ಪ ಮಳೆಯಾಗಿದೆ. ವಾಯು ಭಾರ ಕುಸಿತ ಉಂಟಾಗಿರುವ ಕಾರಣ ಬೆಂಗಳೂರಿನ ಹಲವೆಡೆ ಸಾಧಾರಣ ಮಳೆಯಾಗಬಹುದು ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಮೊದಲ ಮಳೆ ಬಂದಾಗ ಮೂಗಿಗೊತ್ತುವ ಆ ಮಣ್ಣಿನ ಸುವಾಸನೆಗೆ ಬೆಂಗಳೂರು ಜನತೆ ಕಾಯುತ್ತಿದೆ.

ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 35.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.8 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ ಗರಿಷ್ಠ 36.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 35.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ 21.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+