BREAKING NEWS: ರಾಜಾಜಿನಗರ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಮ್ನಲ್ಲಿ ಬೆಂಕಿ ಅವಘಡ: ಒಂದು ಜೀವ ಹಾನಿ
ಬೆಂಗಳೂರು, ನವೆಂಬರ್ 19: ರಾಜಧಾನಿಯಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಶೋ ರೂಮ್ ಒಂದಕ್ಕೆ ಮಂಗಳವಾರ ಬೆಂಕಿ ತಗುಲಿದ್ದು, ಇಡಿ ಕಟ್ಟಡವೇ ಬೆಂಕಿಗೆ ಆಹುತಿಯಾಗಿದೆ. ರಾಜಾಜಿನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಶೋ ರೂಮ್ ಇದಾಗಿದೆ. ಘಟನೆಯಲ್ಲಿ ಶೋ ರೂಮ್ ಸಿಬ್ಬಂದಿಯೊಬ್ಬರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ.
ರಾಜರಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ವರದಿ ಪ್ರಕಾರ, ಈ ಬೆಂಕಿಯು ಆಕಸ್ಮಿಕವಾಗಿ ತಗುಲಿದೆ ಎನ್ನಲಾಗಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಮಳಿಗೆಗೆ ಚಾಚಿಕೊಂಡಿತು. ಕೂಡಲೇ ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಅವರೊಂದಿಗೆ ರಾಜಾಜಿನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳದಲ್ಲಿ ಬೆಂಕಿ ನಂದಿಸಲು ಹರಸಾಹ ಪಟ್ಟಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಬರುವ ಹೊತ್ತಿಗೆ ಇದೇ ಶೋ ರೋಮ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾ ಎಂಬ ಹೆಣ್ಣುಮಗಳು ಬೆಂಕಿಗೆ ಆಹುತಿಯಾಗಿದ್ದಾಳೆ. ಬೆಂಕಿ ಹರಡಿಕೊಂಡಿದ್ದ ಕಟ್ಟಡದಿಂದ ಹೊರ ಬರಲಾಗದೇ ಚೀರುತ್ತಲೇ ಪ್ರಾಣ ಬಿಟ್ಟಿದ್ದಾರೆ. ಸಿಬ್ಬಂದಿ ಬೆಂಕಿ ನಂದಿಸಿ ಶವ ಹೊರತೆಗೆದು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
#BreakingNews : A fire broke out at an electric vehicle (EV) store on Dr. Rajkumar Road in Rajajinagar's Navrang area. Two fire engines were dispatched to the scene to extinguish the blaze.#Fire #EVshowroom pic.twitter.com/GpmGt9e7aK
— Nithya Mandyam (@Nithya_Mandyam) November 19, 2024
ಪೊಲೀಸ್ ಹಾಗೂ ಅಗ್ನಿಶಾಮಕ ತ್ವರಿತ ಕಾರ್ಯಾಚರಣೆಯಿಂದ ಅಕ್ಕಪಕ್ಕದ ಅಂಗಡಿಗಳಿಗೆ, ಇತರರಿಗೆ ಘಟನೆಯಿಂದ ಹಾನಿ ಆಗುವುದು ತಪ್ಪಿದೆ.
ಒಂದು ಜೀವ ಹಾನಿ, 30ಕ್ಕೂ ಹೆಚ್ಚು ಇವಿ ಸ್ಕೂಟರ್ ಕರಕಲು
ಈ ಅಗ್ನಿ ದರುಂತದಲ್ಲಿ ಕಟ್ಟಡ ಸಂಪೂರ್ಣ ಹಾನಿಯಾಗಿದ್ದು, ಹೊಗೆ ಆವರಿಸಿಕೊಂಡ ಪರಿಣಾಮ ಹೊರಕ್ಕೆ ಓಡಿ ಬರಲಾಗದೇ 20 ವರ್ಷದ ಯುವತಿ (ಪ್ರಿಯಾ) ಮೃತಪಟ್ಟಿದ್ದಾಳೆ. ಅಕ್ಕ ಪಕ್ಕದವರಲ್ಲಿ ಆತಂಕ ಮನೆ ಮಾಡಿದೆ. ಘಟನೆಯಲ್ಲಿ ಒಳಗಿದ್ದ ಅಂದಾಜು 30ಕ್ಕೂ ಹೆಚ್ಚು ಇವಿ ಸ್ಕೂಟರ್, ಬ್ಯಾಟರಿ, ಇನ್ನಿತರ ಪರಿಕರಗಳು ಸುಟ್ಟು ಕರಕಲಾಗಿವೆ. ಹೊಗೆ ಬಾನೆತ್ತರಕ್ಕೆ ಚಿಮ್ಮುತ್ತಿದ್ದಂತೆ ಈ ಭಾಗದ ರಸ್ತೆಗಳಲ್ಲಿ ದಟ್ಟಣೆ ಕಂಡು ಬಂತು. ರಾಜಕುಮಾರ್ ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ಅಡಚರಣೆ, ನಿಧಾನಗತಿ ಚಾಲನೆ ಉಂಟಾಯಿತು.
ಸದ್ಯ ಪ್ರಕರಣವನ್ನು ರಾಜಾಜಿನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಯಾವ ಕಾರಣದಿಂದ ಅವಘಡ ಸಂಭವಿಸಿತು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ, ಇದು ಉದ್ದೇಶಪೂರ್ವಕವೇ, ಆಕಸ್ಮಿಕ ಘಟನೆಯೇ? ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಸಂಚಾರ ಸಲಹೆ ಕೊಟ್ಟ ಪೊಲೀಸರು
ಈ ಅಗ್ನಿ ಅವಘಡದಿಂದಾಗಿ ಡಾ. ರಾಜ್ ಕುಮಾರ್ ರಸ್ತೆ, ನವರಂಗ್ ಬಾರ್ ಜಂಕ್ಷನ್ ಬಳಿ ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್ ಗೆ ಬೆಂಕಿ ಹತ್ತಿದ್ದು, ಮೆಜೆಸ್ಟಿಕ್ ಯಿಂದ ಹೊರಹೋಗುವ ಮತ್ತು ಒಳಬರುವ ವಾಹನ ಸಂಚಾರವು ನಿದಾನಗತಿಯಲ್ಲಿರುತ್ತದೆ. ವಾಹನ ಸವಾರರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.












Click it and Unblock the Notifications