ಬೆಂಗಳೂರು:ಸೆ.08ರಂದು ಮೇರಿ ರಥೋತ್ಸವ, ವಾಹನ ಸಂಚಾರ ನಿಷೇಧ

ಬೆಂಗಳೂರು, ಸೆಪ್ಟೆಂಬರ್ 07 : ನಗರದಲ್ಲಿ ಗುರುವಾರ (ಸೆ. 08) ನಡೆಯಲಿರುವ ಮೇರಿ ಆರೋಗ್ಯ ಮಾತೆಯ ರಥೋತ್ಸವ ಜರುಗಲಿದೆ.

ಈ ಹಿನ್ನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ರಥೋತ್ಸವ ಸಾಗುವ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ಹಾಗೂ ನಿಗಲುಡೆಯನ್ನು ನಿಷೇಧಿಸಲಾಗಿದೆ. ಯಾವ-ಯಾವ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

Mary Matha Rathotsava, Vehicles have been banned on some roads in Bangaluru on Sept 8

1. ಜ್ಯೋತಿ ಕೆಫೆ ವೃತ್ತದಿಂದ ರಸಲ್ ಮಾರ್ಕೆಟ್ ವರೆಗೆ ಮತ್ತು ರಸಲ್ ಮಾರ್ಕೆಟ್ ನಿಂದ ಜ್ಯೋತಿ ಕೆಫೆ ವರೆಗೆ ವಾಹನ ಸಂಚಾರ ಇರುವುದಿಲ್ಲ.
2. ಬ್ರಾಡ್‌ವೇ ರಸ್ತೆಯಲ್ಲಿ ರಸಲ್ ಮಾಕೆಟ್ ಕಡೆಗೆ ಹಾಗೂ ರಸಲ್ ಮಾರ್ಕೆಟ್ ಕಡೆಯಿಂದ ಬ್ರಾಡ್‌ವೇ ರಸ್ತೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
3. ಧರ್ಮರಾಜ ಕೋಯಿಲ್ ಸ್ಟ್ರೀಟ್ ನಿಂದ ಓ.ಪಿ.ಹೆಚ್ ರಸ್ತೆಯಿಂದ ರಸಲ್ ಮಾರ್ಕೆಟ್ ಕಡೆಗೆ ಬರುವ ವಾಹನ ಸಂಚಾರವನ್ನು ತಾಜಾ ವೃತ್ತದಲ್ಲಿ ನಿಷೇಧಿಸಲಾಗಿದೆ.
4. ಬಿ.ಆರ್.ವಿ ಜಂಕ್ಷನ್ ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್ ಸಹಿತ ಎಲ್ಲಾ ತರದ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
5. ಬಾಳೇ ಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಸಹಿತ ಎಲ್ಲಾ ತರಹದ ವಾಹನಗಳನ್ನು ಮಧ್ಯಾಹ್ನ 2 ಗಂಟೆಯ ನಂತರ ಸಂಚಾರವನ್ನು ನಿಷೇಧಿಸಲಾಗಿದೆ.

ವಾಹನಗಳ ನಿಲುಗಡೆಗೆ ನಿಷೇಧಿಸಿರುವ ಸ್ಥಳಗಳು
ರಸಲ್ ಮಾರ್ಕೆಟ್ ಸುತ್ತ-ಮುತ್ತ, ಬ್ರಾಡ್‌ವೇ ರಸ್ತೆ, ಮೀನಾಕ್ಷಿ ಕೋಯಿಲ್ ಸ್ಟ್ರೀಟ್, ಸೆಂಟ್ರಲ್ ಸ್ಟ್ರೀಟ್, ಶಿವಾಜಿ ರಸ್ತೆ, ಬಾಳೇ ಕುಂದ್ರಿ ವೃತ್ತದಿಂದ ಚಂದ್ರಿಕಾ, ಹೋಟೆಲ್ ವರೆಗೂ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ, ಯೂನಿಯನ್ ಸ್ಟ್ರೀಟ್, ಇನ್ ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಲೇಡಿ ಕರ್ಜನ್ ರಸ್ತೆ, ವಿ.ಎಸ್.ಎನ್ ರಸ್ತೆ, ಪ್ಲೇನ್ ಸ್ಟ್ರೀಟ್, ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ನಿಷೇಧಿಸಿಲಾಗಿದೆ.

ವಾಹನ ನಿಲುಗಡೆ ಒದಗಿಸಿರುವ ಸ್ಥಳಗಳ ವಿವರ
ಕಾಮರಾಜ ರಸ್ತೆ ಪಾರ್ಕಿಂಗ್ ಸ್ಥಳದಲ್ಲಿ ( ಸರ್ವೀಸ್ ರಸ್ತೆ ಆರ್ಮಿ ಸ್ಕೂಲ್ ಮುಂಭಾಗ ), ಸಫೀನಾ ಪ್ಞಾಜಾ ಮುಂಭಾಗ ( ಮೈನ್ ಗಾರ್ಡ ರಸ್ತೆ ), ಕಬ್ಬನ್ ಪಾರ್ಕ್ - ಕಿಂಗ್ಸ್ ರಸ್ತೆಯ ಒಳಾಂಗಣದಲ್ಲಿ, ಜೆಸ್ಮಾ ಭವನ ರಸ್ತೆಯಲ್ಲಿ, ಆರ್.ಬಿ.ಎ.ಎನ್.ಎಮ್.ಎಸ್ ಮೈದಾನ ( ಗಂಗಾಧರ ಜೆಟ್ಟಿ ರಸ್ತೆ ), ಮುಸ್ಲಿಂ ಅರಪನೇಜ್ ಡಿಕನ್ ಸನ್ ರಸ್ತೆ (ಹಸನತ್ ಕಾಲೇಜ್ ಹತ್ತಿರ) ಈ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+