ಬೆಂಗಳೂರಿನ ಪ್ರಮುಖ ರಸ್ತೆಗೆ ಹುತಾತ್ಮ ಲೆ.ಕ. ನಿರಂಜನ್ ಹೆಸರು

ಈ ಹಿಂದೆ ದೊಡ್ಡಬೊಮ್ಮಸಂದ್ರದ ಮುಖ್ಯರಸ್ತೆಗೆ ನಿರಂಜನ್ ಹೆಸರಿಡಲು ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ನಂತರ ಸ್ವಾತಂತ್ರ್ಯ ಯೋಧ ರಾಮಯ್ಯ ಹೆಸರಿಡುವಂತೆ ಮೇಯರ್ ಸೂಚಿಸಿದ್ದರು. ಹೀಗೆ ದೊಡ್ಡಬೊಮ್ಮಸಂದ್ರ ರಸ್ತೆಗೆ ಯಾರ ಹೆಸರು ಎಂಬ ಗೊಂದಲ ಮೂಡ

ಬೆಂಗಳೂರು, ಮೇ 22: ಪಠಾಣ್ ಕೋಟ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕನ್ನಡಿಗ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಹೆಸರನ್ನು ಬೆಂಗಳೂರಿನ ಪ್ರಮುಖ ರಸ್ತೆಗೆ ಇಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಈ ಮೂಲಕ ನಿರಂಜನ್ ಹೆಸರು ನಾಮಕರಣಕ್ಕಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ರಸ್ತೆ ಕಸ ಗುಡಿಸುವ ಯಾಂತ್ರೀಕೃತ ಮೆಷೀನ್ ಗಳಿಗೆ ಸೋಮವಾರ ವಿಧಾನ ಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಜಾರ್ಜ್ ಈ ವಿಷಯವನ್ನು ಹಂಚಿಕೊಂಡರು.

Martyr Niranjan name to Bengaluru’s major road – KJ George

ಈ ಹಿಂದೆ ದೊಡ್ಡಬೊಮ್ಮಸಂದ್ರದ ಮುಖ್ಯರಸ್ತೆಯೊಂದಕ್ಕೆ ಲೆ.ಕ. ನಿರಂಜನ್ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ನಂತರ ನಿರಂಜನ್ ಹೆಸರಿನ ಬದಲಿಗೆ ಸ್ವಾತಂತ್ರ್ಯ ಯೋಧ ರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡುವಂತೆ ಮೇಯರ್ ಸೂಚಿಸಿದ್ದರು. ಹೀಗೆ ದೊಡ್ಡಬೊಮ್ಮಸಂದ್ರ ರಸ್ತೆಗೆ ಯಾರ ಹೆಸರು ಎಂಬ ಗೊಂದಲ ಮೂಡಿತ್ತು.

ಇದೀಗ ಈ ರಸ್ತೆ ನಾಮಕರಣ ವಿವಾದಕ್ಕೆ ಕೊನೆ ಹಾಡಲು ನಿರ್ಧರಿಸಿರುವ ಸರಕಾರ ದೊಡ್ಡಬೊಮ್ಮಸಂದ್ರ ರಸ್ತೆಯನ್ನು ಬಿಟ್ಟು ಬೇರೊಂದು ಪ್ರಮುಖ ರಸ್ತೆಗೆ ಲೆ.ಕರ್ನಲ್ ನಿರಂಜನ್ ಹೆಸರನ್ನಿಡಲು ತೀರ್ಮಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+