ತಾರಾಲಯದಲ್ಲಿ 'ಕೆಂಪು ಗ್ರಹ-ಮಂಗಳ' ಪ್ರದರ್ಶನ ಆರಂಭ
ಬೆಂಗಳೂರು, ಮೇ 2: ಮಂಗಳ ಗ್ರಹದ ಬಗ್ಗೆ ಮತ್ತಷ್ಟು ತಿಳಿಯುವ ಆಸಕ್ತರಿಗೆ ವಿಡಿಯೋ ಮೂಲಕ ವಿವರಿಸುವ 'ಕೆಂಪು ಗ್ರಹ-ಮಂಗಳ' ಪ್ರದರ್ಶನವನ್ನು ಜವಾಹರಲಾಲ್ ನೆಹರೂ ತಾರಾಲಯ ಆರಂಭಿಸಿದೆ. ಮಂಗಳ ಗ್ರಹದ ಬಗ್ಗೆ ಇರುವ ನಂಬಿಕೆಗಳು, ಅಲ್ಲಿನ ಪರಿಸರ, ಮಾನವ ವಾಸದ ಸಾಧ್ಯತೆಗಳನ್ನು ವಿವರಿಸುವ 40 ನಿಮಿಷಗಳ ವಿಡಿಯೋ ಪ್ರದರ್ಶನದ ಇದಾಗಿದೆ.
ಈ ವಿಡಿಯೋವನ್ನು ಅನಿಮೇಶನ್, ಸುಂದರ ಕಲಾಕೃತಿ, ಕಾರ್ಟೂನ್ಗಳಿಂದ ತಯಾರಿಸಲಾಗಿದ್ದು ಸೋಮವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಎರಡು ವಿಡಿಯೋವನ್ನು ಪ್ರದರ್ಶಿಸಲಾಗುತ್ತದೆ. ಕನ್ನಡದಲ್ಲಿ ವಿವರಣೆ ಇರುವ ಪ್ರದರ್ಶನ ಸಂಜೆ 3.30ಕ್ಕೆ ನಡೆದರೆ 4.30ಕ್ಕೆ ಇಂಗ್ಲಿಷ್ ಭಾಷೆಯ ಪ್ರದರ್ಶನ ನಡೆಯುತ್ತಿದೆ.[ಮಂಗಳ ಯಾನ: ರಿಮೋಟ್ ಕಂಟ್ರೋಲ್ ಇವರ ಕೈಯಲ್ಲಿದೆ]

ಈ ವಿಶೇಷ ಪ್ರದರ್ಶನವನ್ನು ಉದ್ಘಾಟಿಸಿ ಇಸ್ರೋದ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಮಾತನಾಡಿ ''ಮಂಗಳ ಗ್ರಹದ ಬಗ್ಗೆ ನಮಗೆ ಇರುವ ತಿಳುವಳಿಕೆ ಸಾಲದು. ಸರ್ಕಾರ 450 ಕೋಟಿ ರೂ.ಖರ್ಚು ಮಾಡಿ ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿದ್ದು ತಪ್ಪು ಎಂದು ಕೆಲವರು ದೂಷಿಸುತ್ತಿದ್ದಾರೆ. ಈ ರೀತಿ ದೂಷಿಸುವುದು ಸರಿಯಲ್ಲ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗೆ ಇದಕ್ಕಿಂತಲೂ ಹೆಚ್ಚು ಖರ್ಚಾಗುತ್ತಿದೆ'' ಎಂದರು.
ಮೇ 1ರಿಂದ ಈ ವಿಶೇಷ ವಿಡಿಯೋ ಪ್ರದರ್ಶನ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗೆ 22203234, 22379725 ಕರೆ ಮಾಡಬಹುದು ಅಥವಾ www.taralaya.org ತಾಣಕ್ಕೆ ಭೇಟಿ ನೀಡಬಹುದು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications