ಪ್ರಿಯತಮನನ್ನೇ ಬರ್ಬರವಾಗಿ ಕೊಂದ ವಿವಾಹಿತೆ

ಬೆಂಗಳೂರು, ಮಾರ್ಚ್ 29: ಮಗಳ ಜತೆಗೆ ಅಸಭ್ಯವಾಗಿ ವರ್ತಿಸಿದ ಎನ್ನುವ ಕಾರಣಕ್ಕೆ ಪ್ರಿಯಕರನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅನ್ನಪೂಣೇಶ್ವರಿ ನಗರದಲ್ಲಿ ಗುರುವಾರ ನಡೆದಿದೆ.

ರಘು ಕೊಲೆಯಾದವ, ರೂಪ(32) ಕೊಲೆಗೈದ ಆರೋಪಿ. ಪ್ರಿಯತಮನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತೆಯೊಬ್ಬಳು ಪ್ರಿಯಕರನನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಮೊದಲು ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ, ಬಳಿಕ ಚಾಕುವಿನಿಂದ ಇರಿದಿದ್ದಾಳೆ.

ನಂತರ ಗ್ರೈಂಡರ್ ನ ರುಬ್ಬು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾಳೆ. ಮೊದಲೇ ಮದುವೆಯಾಗಿದ್ದ ರೂಪಾ ರಘುವಿನೊಂದಿಗೆ ಅಕ್ರಮವಾಗಿ ಸಂಬಂಧವಿಟ್ಟುಕೊಂಡಿದ್ದಳು. ರೂಪಾ ಗಂಡ ಪ್ರಭು ಮತ್ತು ಮೃತ ರಘು ಒಂದೇ ಗಾರ್ಮೆಂಟ್​ನಲ್ಲಿ‌ ಕೆಲಸ ಮಾಡುತ್ತಿದ್ದರು. ಕಳೆದೆರಡು ದಿನಗಳ ಹಿಂದೆ ಗಂಡ ಪ್ರಭು ಚಿಕ್ಕ ಮಗುವಿನೊಂದಿಗೆ ಜಾತ್ರೆಗೆಂದು ತಿಪಟೂರಿಗೆ ತೆರಳಿದ್ದರು.

Married woman kills her boy friend

ತ್ತೊಬ್ಬ ದೊಡ್ಡ ಮಗಳು ಹಾಗೂ ರೂಪಾ ಬೆಂಗಳೂರಿನಲ್ಲೇ‌ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಪ್ರಿಯಕರ ರಘು ‌ರೂಪಾ ಮನೆಗೆ ಬಂದಿದ್ದ.

ಈ ವೇಳೆ ಮೊದಲನೇ ಮಗಳ ಬಗ್ಗೆ ಹಗುರವಾಗಿ ಮಾತನಾಡಿದ್ದ. ನಿನ್ನ ಜೊತೆ ನಿನ್ನ ಮಗಳು ನನಗೆ ಬೇಕು ಎಂದು ಅಸಭ್ಯವಾಗಿ ವರ್ತಿಸಿದ್ದ. ಮಗಳ ಮೇಲೆ ಕಣ್ಣು ಹಾಕಿದ್ದಕ್ಕೆ ಪ್ರಿಯತಮನನ್ನೇ ಬರ್ಬರವಾಗಿ ಹತ್ಯೆಗೈದಿದ್ದಾಳೆ. ಪೀಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+