ಬೆಂಗಳೂರಲ್ಲಿ ಅದಕ್ಕೆ ಒಪ್ಪದ ಯುವತಿ: ಪಕ್ಕದಲ್ಲೇ ಇದ್ಕೊಂಡ್ ಚಾಕು ಹಾಕಿದ ಕಿರಾತಕ
ಬೆಂಗಳೂರು, ಸೆಪ್ಟೆಂಬರ್ 19: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಅದರಲ್ಲೂ ಅಕ್ರಮ ಸಂಬಂಧಗಳಂತಹ ಘಟನೆಗಳೇ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದೀಗ ನಗರದ ಕೋ ಲಿವಿಂಗ್ ಪಿಜಿಯೊಂದರಲ್ಲಿ ವಿವಾಹಿತನೊಬ್ಬ ಯುವತಿಗೆ ಚಾಕು ಇರಿದ ಘಟನೆ ನಡೆದಿದೆ. ಹಾಗಾದ್ರೆ, ಅಷ್ಟಕ್ಕೂ ಆಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಬೆಚ್ಚಿಬೀಳುವಂತಹ ಕ್ರೈಂ ಪ್ರಕರಣಗಳು ನಡೆಯುತ್ತಲಿವೆ. ಗಂಡ-ಹೆಂಡತಿ, ಅಣ್ಣ-ತಮ್ಮ ಈ ರೀತಿ ಗಲಾಟೆಗಳು ಕೊನೆಗೆ ಸಾವಿನಲ್ಲಿ ಅಂತ್ಯವಾದ ಉದಾಹರಣೆಗಳಿವೆ. ಆದರೆ, ಇದೀಗ ವಿಚಿತ್ರ ಎಂಬಂತೆ ಬೆಂಗಳೂರಿನ ಕೋ ಲಿವಿಂಗ್ ಪಿಜಿಯೊಂದರಲ್ಲಿ ವಿವಾಹಿತನೊಬ್ಬ ಯುವತಿಗೆ ಚಾಕು ಇರಿದ ಭಯಾನಕ ಕೃತ್ಯವೊಂದು ನಡೆದುಹೋಗಿದೆ.

ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣ ಯುವತಿಗೆ ವಿವಾಹಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವಂತಹ ನೀಚ ಕೃತ್ಯ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಕೋ ಲಿವಿಂಗ್ ಪಿಜಿಯೊಂದರಲ್ಲಿ ನಡೆದಿದೆ. ವಿವಾಹ ಆಗಿ ಮಗು ಇದ್ದರೂ ಸಹ ಕೋ ಲಿವಿಂಗ್ ಪಿಜಿಯಲ್ಲಿ ಟೆಕ್ಕಿ ಬಾಬು ಎಂಬಾತ ಒಬ್ಬನೇ ವಾಸ ಇದ್ದನು. ಎರಡು ತಿಂಗಳ ಹಿಂದೆ ಅದೇ ಪಿಜೆಗೆ ಯುವತಿ ಬಂದು ವಾಸ ಆಗಿದ್ದಳು. ಆಕೆ ಬಾಬುಗೆ ಪರಿಚಯ ಆಗಿದ್ದಳು.
ಬಳಿಕ ಬಾಬು ಆಕೆಯ ಪೋನ್ ನಂಬರ್ ಪಡೆದಿದ್ದು, ಆಕೆಯೊಂದಿಗೆ ಮಾತನಾಡುತ್ತಿದ್ದನಂತೆ. ಮೂರು ದಿನಗಳ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ಇದಕ್ಕೆ ಯುವತಿ ಒಪ್ಪಿರಲಿಲ್ಲ. ಆಗ ಆಕೆಯ ಖಾಸಗಿ ಪೋಟೋ ಇಟ್ಟುಕೊಂಡು 70,000 ರೂಪಾಯಿ ಹಣಕ್ಕೂ ಬೇಡಿಕೆ ಇಟ್ಟಿದ್ದನಂತೆ. ಕೊಡದಿದ್ದರೆ, ವಿಡಿಯೋ ಲೀಕ್ ಮಾಡುವುದಾರಿ ಬೆದರಿಕೆ ಹಾಕಿದ್ದನಂತೆ ಎಂದು ವರದಿಯಾಗಿದೆ.
ಅಷ್ಟೇ ಸಾಲದೆಂಬಂತೆ ಯುವತಿಯ ಮೊಬೈಲ್ ಪಡೆದು, ಆಕೆಯ ಖಾತೆಯಲ್ಲಿದ್ದ 14,000 ರೂಪಾಯಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಇನ್ನೂ ಹಣಕ್ಕೆ ಬೇಡಿಕೆ ಇಟ್ಟ ವೇಳೆ ಸ್ನೇಹಿತರ ಬಳಿ ಸಾಲ ಪಡೆದು ಕೊಡುವುದಾಗಿ ಯುವತಿ ತಿಳಿಸಿದ್ದಾರೆ. ಇದಕ್ಕೂ ಬಿಡದೇ ಗಲಾಟೆ ಮಾಡಿದ್ದಾನೆ. ಈ ವೇಳೆ ಯುವತಿಯ ಬೆನ್ನಿಗೆ ಚಾಕುವಿನಿಂದ ಟೆಕ್ಕಿ ಬಾಬು ಇರಿದು ಪರಾರಿ ಆಗಿದ್ದಾನೆ.
ಬಳಿಕ ಚಾಕು ಇರಿದ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ ಎಂದು ತಿಳಿದುಬಂದಿದೆ. ಇಂತಹ ವಿಚಿತ್ರ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೋ ಸಹ ಸುಮಾರು ನಡೆದಿರುವ ಉದಾಹರಣೆಗಳಿವೆ. ಈ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿಯೂ ಪೊಲೀಸರು ಯಶಸ್ವಿಯಾಗುತ್ತಿದ್ದಾರೆ. ಆದರೂ ಸಹ ಎಚ್ಚೆತ್ತುಕೊಳದ ಕೆಲವರು ತಾವು ಆಡಿದ್ದೇ ಆಟ ಎಂಬಂತೆ ಇಂತಹ ನೀಚ ಕೃತ್ಯಗಳಿಗೆ ಇಳಿಯುತ್ತಿದ್ದಾರೆ. ಈ ದೃಶ್ಯಗಳನ್ನು ಸಮಾಜಿಕ ಮಾಧ್ಯಮಗಳು ಹಾಗೂ ಮಾಧ್ಯಗಳಲ್ಲಿ ಪ್ರಸಾರ ಆಗುತ್ತಿದ್ದಂತೆ, ಇನ್ನುಳಿದ ಮನೆಯವರು ಸಹ ತಮ್ಮ ಮಕ್ಕಳನ್ನು ಬೆಂಗಳೂರಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ದುಡಿಮೆ ಇಲ್ಲದಿದ್ದರೂ ಪರ್ವಾಗಿಲ್ಲ. ಊರಿನಲ್ಲೇ ವ್ಯವಸಾಯ ಮಾಡಿಕೊಂಡು ಹೋಗಿ ಎನ್ನುವ ಮಾತುಗಳನ್ನು ಸಹ ಪೋಷಕರು ಹೇಳುತ್ತಿದ್ದಾರೆ.












Click it and Unblock the Notifications