ಬಿಸಿ-ಬಿಸಿ ಬಿರಿಯಾನಿಗಾಗಿ ಮದುವೆ ಮುರಿದು ಬಿತ್ತು!

ಬೆಂಗಳೂರು, ಮಾ.10 : ವರದಕ್ಷಿಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದು ಮದುವೆ ನಿಂತು ಹೋಗುವುದು ಕೇಳಿದ್ದೀರಿ. ಆದರೆ, ಬಿರಿಯಾನಿ ವಿಷಯಕ್ಕೆ ಜಗಳ ನಡೆದು ಮದುವೆ ಮುರಿದು ಬಿದ್ದ ಪ್ರಸಂಗ ಕೆ.ಜಿ.ಹಳ್ಳಿಯಲ್ಲಿ ನಡೆದಿದೆ. ಅಚ್ಚರಿಯಾದರೂ ಇದು ಸತ್ಯ!

ಈ ವಿಚಿತ್ರ ಘಟನೆಗ ಕಾರಣವಾದದ್ದು ಮಟನ್ ಬಿರಿಯಾನಿ ಎಂದರೆ ನೀವು ನಂಬಲೇಬೇಕು. ವಧುವಿನ ಕಡೆಯವರು ವಿವಾಹಕ್ಕೆ ಚಿಕನ್ ಬಿರಿಯಾನಿ ಮಾಡಿಸಿದ್ದರು. ಆದರೆ, ಮಟನ್ ಬಿರಿಯಾನಿಗಾಗಿ ಬೇಡಿಕೆ ಇಟ್ಟಿದ್ದ ವರನ ಕಡೆಯವರು, ಚಿಕನ್ ಬಿರಿಯಾನಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮದುವೆಯನ್ನೇ ನಿಲ್ಲಿಸಿದ್ದಾರೆ.

mutton biryani

ವಧು ಮತ್ತು ವರನ ಕಡೆಯವರ ನಡುವೆ ನಡೆದ ಸಂಧಾನ ಪ್ರಕ್ರಿಯೆ ಸಹ ಮುರಿದು ಬಿದ್ದಿದ್ದು, ಮದುವೆ ನಿಂತು ಹೋಗಿದೆ. ವರನ ಕಡೆಯವರ ಮನವೊಲಿಸುವ ಪ್ರಯತ್ನವನ್ನು ನಡೆಸಿದ ವಧುವಿನ ಸಂಬಂಧಿಕರ ಪ್ರಯತ್ನ ಸಹ ವಿಫಲವಾಗಿದ್ದು, ನವ ಜೀವನಕ್ಕೆ ಕಾಲಿಡಬೇಕಾಗಿದ್ದ ಜೋಡಿಗಳು ಏಕಾಂಗಿಯಾಗಿ ಮನೆಗೆ ಮರಳಿವೆ.

ಇದು ಬಿರಿಯಾನಿ ಪ್ರಕರಣ : ಕೆಜಿ ಹಳ್ಳಿಯಲ್ಲಿ ಯಾಸ್ಮಿನ್ ತಾಜ್ ಮತ್ತು ಸೈಫುಲ್ಲಾ ವಿವಾಹ ಸೋಮವಾರ ನಡೆಯಬೇಕಾಗಿತ್ತು. ಅಡುಗೆಯ ಜವಾಬ್ದಾರಿ ಹೊತ್ತಿದ್ದ ವಧುವಿನ ಕಡೆಯವರು ವಿವಾಹ ಭೋಜನಕ್ಕೆ ಚಿಕನ್ ಬಿರಿಯಾನಿ ಮಾಡಿಸಿದ್ದರು. [ಮೊಘಲ್ ಮಟನ್ ಬಿರಿಯಾನಿ ರೆಸಿಪಿ]

ವರನ ಕಡೆಯವರು ವಿವಾಹದ ದಿನ ಮಟನ್ ಬಿರಿಯಾನಿ ಬೇಕು ಎಂದು ಮೊದಲೇ ತಿಳಿಸಿದ್ದರು. ಆದರೂ ವಧುವಿನ ಕಡೆಯವರು ಚಿಕನ್ ಬಿರಿಯಾನಿ ಮಾಡಿಸಿದ್ದು, ವರನ ಕಡೆಯವರ ಕೋಪಕ್ಕೆ ಕಾರಣವಾಗಿದೆ. ಈ ಬಿಸಿ-ಬಿಸಿ ಬಿರಿಯಾನಿ ವಿವಾದ ಪರಸ್ಪರರ ನಡುವಿನ ವಾಗ್ಯುದ್ದಕ್ಕೆ ಕಾರಣವಾಗಿ ಮದುವೆ ಮುರಿದು ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+