ವಿಜ್ಞಾನದ ಮಹತ್ವ ಅರಿಯಲು ಐಐಎಸ್‌ಸಿ 'ಓಪನ್‌ ಡೇ'ಗೆ ಬನ್ನಿ

ಬೆಂಗಳೂರು, ಮಾರ್ಚ್ 15: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನದ ಬಗ್ಗೆ ಮಹತ್ವ ತಿಳಿಸುವ ಕಾರ್ಯಾಗಾರ ಹಾಗೂ , ವಿಜ್ಞಾನ ಪ್ರದರ್ಶನಗಳನ್ನು ಒಳಗೊಂಡಿರುವ ಓಪನ್ ಡೇ ಕಾರ್ಯಕ್ರಮವನ್ನು ಮಾರ್ಚ್ 23ರಂದು ಹಮ್ಮಿಕೊಂಡಿದೆ.

ಪ್ರವೇಶ ಉಚಿತವಾಗಿರುತ್ತದೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಕುತೂಹಲ ಹುಟ್ಟಿಸುವ ಕೆಲಸವನ್ನು ಈ ಕಾರ್ಯಾಗಾರ ಮಾಡಲಿದೆ. ಅಂದು ಬೆಳಗ್ಗೆ 9ರಿಂದ ಕಾರ್ಯಕ್ರಮ ಆರಂಭವಾಗಲಿದ್ದು ಸಂಜೆ 5 ಗಂಟೆಯವರೆಗೂ ಇರಲಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ನಡೆದು ಬಂದ ಹಾದಿ ಕುರಿತು ಐಐಎಸ್ ಸಿ ಮುಖ್ಯ ಕಟ್ಟಡದಲ್ಲಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅದರಲ್ಲಿ ಐಐಎಸ್ಸಿ ಕಾರ್ಯಕ್ರಮಗಳು, ಹಿಂದಿನ ಕಟ್ಟಡಗಳ ಚಿತ್ರವನ್ನು ನೋಡಬಹುದಾಗಿದೆ. ಜತೆಗೆ ಮಕ್ಕಳಿಗಾಗಿ ಕಿಡ್ಸ್ ಜೋನ್ ಓಪನ್ ಪ್ಲೇ ಕಾರ್ಯಕ್ರಮವನ್ನು ಕೂಡ ಅಧೇ ದಿನ ಓಲ್ಡ್ ಏರೋಸ್ಪೇಸ್ ಬಿಲ್ಡಿಂಗ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

mark your calendars, IISC open day will be held on march 23

ಏರೋಸ್ಪೇಸ್ ಎಂಜಿನಿಯರಿಂಗ್, ಲ್ಯಾಬೊರೇಟರೀಸ್ ಫಾರ್ ಹೈಪರ್ ಸೋನಿಕ್ಸ್ ಅಂಡ್ ಶಾಕ್ ವೇವ್ ರಸರ್ಚ್, ಬಯೋ ಕೆಮಿಸ್ಟ್ರಿ, ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ ಕುರಿತು ಕಾರ್ಯಾಗಾರ ಮತ್ತು ರಸ ಪ್ರಶ್ನೆ ಕಾರ್ಯಕ್ರಮವಿರುತ್ತದೆ.

ನ್ಯೂರೋ ಸೈನ್ಸ್, ಸಸ್ಟೈನೇಬಲ್ ಟೆಕ್ನಾಲಜೀಸ್, ಕೆಮಿಕಲ್ ಎಂಜಿನಯರಿಂಗ್, ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿಯರಿಂಗ್ ಇನ್ನು ಮುಂತಾದ ವಿಷಯಗಳ ಮೇಲೆ ನುರಿತ ತಜ್ಞರು ಬೆಳಕು ಚೆಲ್ಲಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+