ಅನಂತ ಕುಮಾರ್ ಇಲ್ಲದ ಬಸವನಗುಡಿ ಕಡಲೆಕಾಯಿ ಪರಿಷೆ
Recommended Video

ಬೆಂಗಳೂರು, ಡಿಸೆಂಬರ್ 3: ಪ್ರತಿ ವರ್ಷದ ಆರಂಭದ ದಿನದಿಂದ ಅದಮ್ಯ ಚೇತನ ಉತ್ಸವ, ನಾಡಪ್ರಭು ಕೆಂಪೇಗೌಡ ಜಯಂತಿ, ಬಸವನಗುಡಿಯ ಕಡಲೆಕಾಯಿ ಪರಿಷೆ, ಹೀಗೆ ಬೆಂಗಳೂರಿನ ಹಲವಾರು ಸಾಂಸ್ಕೃತಿಕ ಉತ್ಸವಗಳಿಗೆ ಸಾಕ್ಷಿಯಾಗಿ ಬೆನ್ನೆಲುಬಿನಂತೆ ನಿಲ್ಲುತ್ತಿದ್ದ ಕೇಂದ್ರ ಸಚಿವ ದಿ. ಅನಂತ ಕುಮಾರ್ ಅವರ ಅನುಪಸ್ಥಿತಿ ಕಡಲೆಕಾಯಿ ಪರಿಷೆ ಉದ್ಘಾಟನೆಗೆ ಬಂದ ಬಹುತೇಕರನ್ನುಕಾಡಿತು.
ಅನಂತ ಕುಮಾರ್ ಇಲ್ಲದೆ ನಡೆಯುತ್ತಿರುವ ಮೊದಲನೇ ಕಡಲೆಕಾಯಿ ಪರಿಷೆ ಇದಾಗಿದ್ದು, ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕಡಲೆಕಾಯಿ ಪರಿಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಕಡಲೆಕಾಯಿ ಪರಿಷೆ ನಡೆಯುವ ಸಂದರ್ಭದಲ್ಲಿ ಮುಂದೆ ನಿಂತು ಕೆಲಸ ಮಾಡುತ್ತಿದ್ದರು.
ಬೆಂಗಳೂರಿನ ಕಡಲೆಕಾಯಿ ಪರಿಷೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರಪಡಿಸಲು ಬಹುವಾಗಿ ಶ್ರಮಿಸುತ್ತಿದ್ದರು ಎನ್ನುವುದನ್ನು ಎಲ್ಲರು ಮನಬಿಚ್ಚಿ ಕೊಂಡಾಡಿದರು.

ಈ ಕುರಿತು ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ದಿವಂಗತ ಅನಂತ ಕುಮಾರ್ ಅವರು ಕಳೆದ ಹತ್ತು ವರ್ಷಗಳಿಗಿಂತಲೂ ಮೊದಲಿಂದಲೇ ಕಡಲೆಕಾಯಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು, ಈ ಪರಿಷೆಯನ್ನು ರಾಷ್ಟ್ರಮಟ್ಟದ ಉತ್ಸವವಾಗಿ ಮಾಡಲು ಅವರು ಶ್ರಮಿಸದ್ದರು ಎಂದು ಕೊಂಡಾಡಿದರು.
ಬಸವನಗುಡಿ ಕ್ಷೇತ್ರ ಅಭಿವೃದ್ಧಿಗೆ ಈಗಾಗಲೇ ಮುಜರಾಯಿ ಇಲಾಖೆ ಕೋಟಿ ರೂ ಮೀಸಲಿಟ್ಟಿದೆ, ಇದೀಗ ಬಿಬಿಎಂಪಿ ಮೇಯರ್ ಕೂಡ ಭರವಸೆ ನೀಡಿದ್ದಾರೆ, ಅಭಿವೃದ್ಧಿ ಶೀಘ್ರವಾಗಿ ಆಗಲಿದೆ ಎಂದು ಭರವಸೆ ನೀಡಿದರು.












Click it and Unblock the Notifications