Breaking News: 'ನಮ್ಮ ಮೆಟ್ರೋ' ನಿಲ್ದಾಣದಲ್ಲಿ ಮತ್ತೊಂದು ಆತ್ಮಹತ್ಯೆ ಯತ್ನ, ಹಳಿಗೆ ಜಿಗಿದ ವ್ಯಕ್ತಿ

ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಲ್ದಾಣಗಳು ಸೂಸೈಡ್ ಹಾಟ್‌ಸ್ಟಾಟ್ ಆಗಿ ಪರಿವರ್ತನೆ ಆಗುತ್ತಿದೆಯೇ ಅಂತನಿಸುತ್ತದೆ. ಕಾರಣ ಮೆಟ್ರೋ ನೇರಳೆ ಮಾರ್ಗದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಆತ್ಮಹತ್ಯೆ ಘಟನೆ ನಡೆದಿದೆ. ರೈಲು ಬರುವುದನ್ನೇ ನೋಡಿಕೊಂಡಿದ್ದ ವ್ಯಕ್ತಿ ನೋಡ ನೋಡುತ್ತಿದ್ದ ಹಳಿಗೆ ಎಗರಿದ್ದಾನೆ. ಆತನ ಮೇಲೆ 10 ಮೀಟರ್ ರೈಲು ಸಂಚಾರ ನಡೆಸಿದೆ.

ಹೌದು, ಇತ್ತೀಚೆಗೆ ನಮ್ಮ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಹೆಚ್ಚಾಗುತ್ತಿವೆ. ಈಗಾಗಲೇ ಎರಡು ಪ್ರಕರಣದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇದೀಗ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ ಅದೃಷ್ಟವಶಾತ್ ಬದುಕಿದ್ದಾನೆ.

Man s Suicide Attempt at Jnanabharathi Station on Namma Metro s Purple Line

ರೈಲು ಬರುವುದನ್ನು ನೋಡಿಕೊಂಡು ದಿಢೀರನೇ ಹಳಿಗೆ ಜಿಗಿದ ವ್ಯಕ್ತಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ರೈಲು ನಿಲ್ಲಿಸಿ ಆತನನ್ನು ರಕ್ಷಣೆ ಮಾಡಲಾಗಿದೆ. ಈ ಕುರಿತು ನಮ್ಮ ಮೆಟ್ರೋ ಅಧಿಕಾರಿಗಳೇ ಖುದ್ದು ಮಾಹಿತಿ ನೀಡಿದ್ದಾರೆ.

ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಆಗಿದ್ದೇನು?

ಎಂದಿನಂತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ನಿಂತಿದ್ದರು. ಈ ವೇಳೆ ಮಂಗಳವಾರ ಮಧ್ಯಾಹ್ನ 14.13 ಗಂಟೆಗೆ ಸುಮಾರು 30 ವರ್ಷ ವಯಸ್ಸಿನ ಬಿಹಾರ ಮೂಲದ ಸಿದ್ಧಾರ್ಥ್ ಎಂಬ ವ್ಯಕ್ತಿ ಬರುತ್ತಿದ್ದ ರೈಲು ನೋಡಿಕೊಂಡು ಹಳಿಗೆ ಧುಮುಕಿದ್ದಾನೆ. ಇದನ್ನು ಮಗನಿಸಿದ ಕೂಡಲೇ ಸಿಬ್ಬಂದಿ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಇಟಿಎಸ್ ಬಟನ್ ಪ್ರೆಸ್ ಮಾಡಿದ್ದಾರೆ.

ಕೂಡಲೇ ಮೆಟ್ರೋ ಟ್ರ್ಯಾಕ್ ಮೇಲಿನ್ ವಿದ್ಯುತ್ ಹರಿವು ಸ್ಥಗಿತಗೊಳಿಸಲಾಯಿತು. ಅಷ್ಟೋತ್ತಿಗಾಗಲೇ ಹಳಿ ಮೇಲಿದ್ದ ಆತನ ಮೇಲೆ ಹತ್ತು ಮೀಟರ್‌ ರೈಲು ಮುಂದೆ ಸಾಗಿತ್ತು. ಎರಡು ಹಳಿಗಳ ಮಧ್ಯೆ ಆತ ಸಿಲುಕಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲು ಮತ್ತು ಹಳಿ ಮಧ್ಯೆ ಸಿಲುಕಿದ್ದ ಆತನನ್ನು ಮೆಟ್ರೋ ನಿಲ್ದಾಣದಲ್ಲಿರುವ ಬಿಎಂಆರ್‌ಸಿಎಲ್ ಸ್ಟೇಷನ್ ನಿಯಂತ್ರಣಕಾರರು ಮತ್ತು ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬಿಹಾರದ ಸಿದ್ಧಾರ್ಥ್‌ಗೆ ಯಾವುದೇ ಗಾಯಗಳು ವರದಿಯಾಗಿಲ್ಲ. ಈ ಘಟನೆಯಿಂದ ನಿಲ್ದಾಣದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು. ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳ ಸುಮಾರು ಅರ್ಧ ಗಂಟೆಗಳ ಕಾಲ ವ್ಯತ್ಯಯಗೊಂಡಿತು. ನಂತರ 14.30 ಗಂಟೆಗೆ ಎಂದಿನಂತೆ ಮೆಟ್ರೋ ರೈಲು ಸೇವೆ ಪುನರಾರಂಭವಾಯಿತು.

ಮಧ್ಯಾಹ್ನ 14.13 ಗಂಟೆಯಿಂದ 14.30 ಗಂಟೆಯವರೆಗೆ ಇದೇ ನೇರಳೆ ಮಾರ್ಗದಲ್ಲಿ ಚಲ್ಲಘಟ್ಟ ಮೆಟ್ರೊ ನಿಲ್ದಾಣದ ಬದಲು ಮೈಸೂರು ರಸ್ತೆಯಲ್ಲಿ 2 ರೈಲುಗಳು ಶಾರ್ಟ್ ಲೂಪ್‌ನಲ್ಲಿ ಕಾರ್ಯ ನಿರ್ವಹಿಸಿದವು ಎಂದು BMRCL ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+