ಕುಡಿದ ಮತ್ತಿನಲ್ಲಿ 8 ವರ್ಷದ ಹಿಂದೆ ನೈಲ್ ಕಟ್ಟರ್ ನುಂಗಿದ್ದ ವ್ಯಕ್ತಿ: ಮುಂದಾ..

ಬೆಂಗಳೂರು, ಆಗಸ್ಟ್ 21: ಹಲವು ಶಸ್ತ್ರ ಚಿಕಿತ್ಸೆಗಳ ಮೂಲಕ ಫೇಮಸ್ ಆಗಿರುವ ಮಣಿಪಾಲ್ ಆಸ್ಪತ್ರೆ ವೈದ್ಯರು ಸದ್ಯ ಈಗ ಮತ್ತೆ ತನ್ನ ವೈದ್ಯರ ಕೈ ಚಳಕದ ಮೂಲಕ ಸುದ್ದಿಯಲ್ಲಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಣಿಪಾಲ್ ಆಸ್ಪತ್ರೆ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮಾಡಿದ ರೀತಿಯನ್ನು ಜನರು ಹಾಡಿ ಹೊಗಳುತ್ತಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ಜನ ಹೊಗಳಲು ಕಾರಣ ಕೂಡ ಒಂದು ಇದೆ. ಆ ಕಾರಣ ಏನಂದರೆ ಅದು ಒಂದು ನೈಲ್ ಕಟ್ಟರ್. ಸಾಮಾನ್ಯವಾಗಿ ನೈಲ್ ಕಟ್ಟರ್ ಅನ್ನು ಉಗುರು ಕಟ್ ಮಾಡುವುದಕ್ಕೆ ಬಳಸುತ್ತೇವೆ. ಅಬ್ಬಬ್ಬಾ ಅಂದರೆ ಉಗುರು ಶೇಪ್ ಕೊಡೋದಕ್ಕೆ ಬಳಕೆ ಮಾಡುತ್ತಾರೆ.

Manipal Hospital Doctors Successfully Removed Nail Cutter From Body

ಆದರೆ, ಇಲ್ಲೊಬ್ಬ ವ್ಯಕ್ತಿ ಎಣ್ಣೆ ಏಟಲ್ಲಿ ನೈಲ್ ಕಟ್ಟರ್ ಅನ್ನು ನುಂಗಿ ಬಿಟ್ಟಿದ್ದಾನೆ. ಸರ್ಜಾಪುರ ನಿವಾಸಿ ಆಗಿರುವ ಈ ವ್ಯಕ್ತಿ ಎಣ್ಣೆ ಏಟಲ್ಲಿ ನೈಲ್ ಕಟ್ಟರ್ ನುಂಗಿ 8 ವರ್ಷಗಳೇ ಆಗಿವೆಯಂತೆ. ನೈಲ್ ಕಟ್ಟರ್ ನುಂಗಿದ ಮೇಲೆ ಏನಾಯಿತು. ಅದನ್ನು ಆತನ ದೇಹದಿಂದ ವೈದ್ಯರು ತೆಗೆದ ಪರಿ ಇಂಟರೆಸ್ಟಿಂಗ್ ಆಗಿದೆ.

ಈ ವ್ಯಕ್ತಿ ನೈಲ್ ಕಟ್ಟರ್ ನುಂಗಿ 8 ವರ್ಷ ಆದರೂ ಕೂಡ ಆತನಿಗೆ ಆಗೆಲ್ಲ ಏನೂ ನೋವು ಕಾಣಿಸಿ ಕೊಳ್ಳುತ್ತಾ ಇರಲಿಲ್ಲ. ತೀರಾ ಇತ್ತೀಚೆಗೆ ಈತನಿಗೆ ಹೊಟ್ಟೆ ನೋವು ಕಾಣಿಸಿ ಕೊಳ್ಳುತ್ತದೆ, ಕೂಡಲೇ, ಆ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ತೋರಿಸುತ್ತಾರೆ. ಆಗ ಸ್ಕ್ಯಾನಿಂಗ್ ಮಾಡೋದಕ್ಕೆ ಡಾಕ್ಟರ್ ಸಲಹೆ ಕೊಡುತ್ತಾರೆ.

ಬಳಿಕ ಈತನ ದೇಹದಲ್ಲಿ ನೈಲ್ ಕಟ್ಟರ್ ಇರೋದು ಗೊತ್ತಾಗುತ್ತೆ. ತಕ್ಷಣ ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತೆ. ಬಳಿಕ ವ್ಯಕ್ತಿಯ ಆರೋಗ್ಯ ಸ್ಥಿತಿ ಗಮನದಲ್ಲಿ ಇಟ್ಟುಕೊಂಡು ವೈದ್ಯರು ಆತನಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಆ ಚಿಕಿತ್ಸೆ ಯಶಸ್ವಿ ಆಗುತ್ತೆ, ಕೊನೆಗೆ ಈಗ ಆ ವ್ಯಕ್ತಿ ಡಿಸ್ಚಾರ್ಜ್ ಕೂಡ ಆಗಿ ಮನೆ ಸೇರಿದ್ದಾರೆ.

ಪಾನಮತ್ತನಾದ ವ್ಯಕ್ತಿ ನೈಲ್ ಕಟ್ಟರ್ ನುಂಗಿ ಸುಮಾರು 8 ವರ್ಷವೇ ಕಳೆದು ಹೋಗಿದೆ. ಆ ನೈಲ್ ಕಟ್ಟರ್ ಅನ್ನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಈಗ ಹೊರ ತೆಗೆದು ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ. ಹೀಗಾಗಿ ವೈದ್ಯರ ಕೈ ಚಳಕದ ಬಗ್ಗೆ ಸದ್ಯ ಚರ್ಚೆ ಆಗುತ್ತಿದೆ. 8 ವರ್ಷಗಳಿಂದ ಹೊಟ್ಟೆಯಲ್ಲಿ ಇದ್ದ ನೈಲ್ ಕಟ್ಟರ್ ವೈದ್ಯರು ಹೇಗಪ್ಪಾ ತೆಗೆದರು ಅಂತ ಜನ ಬಾಯಿ ಮೇಲೆ ಬೆರಳಿಟ್ಟು ಯೋಚನೆ ಮಾಡುತ್ತಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+