ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ಮಳೆಗೆ ಬೆಂಗಳೂರಿನಲ್ಲಿ ಬಾಯ್ತೆರೆದ ಮ್ಯಾನ್‌ಹೋಲ್‌ಗಳು!

|
Google Oneindia Kannada News

ಬೆಂಗಳೂರು,ಆಗಸ್ಟ್‌ 05: ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳಚರಂಡಿಗಳಲ್ಲಿ ನೀರಿನ ಹೆಚ್ಚುವರಿ ಹರಿವು ಮತ್ತು ಒತ್ತಡದ ಹೆಚ್ಚಳದಿಂದಾಗಿ ಕಳೆದ 8 ರಿಂದ 10 ದಿನಗಳಲ್ಲಿ ನಗರದಾದ್ಯಂತ ಸುಮಾರು 103 ಮ್ಯಾನ್‌ಹೋಲ್‌ಗಳು ತೆರೆದಿವೆ. ಹೀಗಾಗಿ ರಸ್ತೆಗಳು ಚರಂಡಿ ನೀರು ಮತ್ತು ಹೊಲಸು ಕಾಲುವೆಗಳಾಗಿ ಮಾರ್ಪಟ್ಟಿವೆ.

ಬೆಂಗಳೂರು ಸಂಚಾರಿ ಪೊಲೀಸ್ ಅಧಿಕಾರಿಗಳು ಈ ಸ್ಥಳಗಳನ್ನು ಗುರುತಿಸಿದ್ದಾರೆ. ಮಾತ್ರವಲ್ಲದೆ, ಈ ಮ್ಯಾನ್‌ಹೋಲ್‌ಗಳನ್ನು ಸರಿಪಡಿಸಲು ಬೆಂಗಳೂರು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ.

4 ದಿನ ಬೆಂಗಳೂರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲು!4 ದಿನ ಬೆಂಗಳೂರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲು!

ಈ ಬಗ್ಗೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ. ಆರ್. ರವಿಕಾಂತೇಗೌಡ, "ಈ ತೆರೆದ ಮ್ಯಾನ್‌ಹೋಲ್‌ಗಳು ಸಂಭಾವ್ಯ ಸಾವಿನ ಬಲೆಗಳಾಗಿವೆ. ಹೊಸದಾಗಿ ನಿರ್ಮಿಸಲಾದ ಮನೆಗಳು ತಮ್ಮ ಆವರಣದಿಂದ ನೀರನ್ನು ಭೂಗತ ಚರಂಡಿಗಳಿಗೆ ಬಿಡುತ್ತವೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಒಳಚರಂಡಿಗಳ ಒತ್ತಡವನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಬೆಂಗಳೂರು ಒಳಚರಂಡಿ ಮಂಡಳಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.

ಕಳೆದ ಕೆಲವು ದಿನಗಳಲ್ಲಿ ರಸ್ತೆಗಳಲ್ಲಿನ ಹೊಂಡಗಳು ದೊಡ್ಡದಾಗಿ ಮತ್ತು ಆಳವಾಗಿವೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮ್ಯಾನ್‌ಹೋಲ್‌ಗಳಿಂದಾಗಿ ಯಾವುದೇ ಅಪಘಾತಗಳು ಸಂಭವಿಸಿಲ್ಲ. ಆದರೆ ಅವು ಸಂಚಾರದ ಚಲನೆಯನ್ನು ನಿಧಾನಗೊಳಿಸಿವೆ. ಗುಂಡಿಗಳು ಕೂಡ ಯಾವಾಗಲೂ ಸಮಸ್ಯೆಯಾಗಿದೆ. ಆದರೆ ನಿರಂತರ ಮಳೆಯಿಂದಾಗಿ ಅವುಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಮಳೆಗಾಲದ ಮುನ್ನವೇ ಬಿಬಿಎಂಪಿ ಆದ್ಯತೆ ಮೇರೆಗೆ ಈ ಗುಂಡಿಗಳನ್ನು ಸರಿಪಡಿಸಬೇಕಿತ್ತು ಎಂದರು.

ಏತನ್ಮಧ್ಯೆ, ಬೆಂಗಳೂರು ಒಳಚರಂಡಿ ಮಂಡಳಿ ಅಧಿಕಾರಿಗಳು ನಗರದಾದ್ಯಂತ ಮ್ಯಾನ್‌ಹೋಲ್‌ಗಳಿಂದ ಹೆಚ್ಚುವರಿ ನೀರು ಮತ್ತು ಘನ ತ್ಯಾಜ್ಯವನ್ನು ಹೊರಹಾಕಲು ಸುಮಾರು 200 ಜೆಟ್ಟಿಂಗ್ ಯಂತ್ರಗಳನ್ನು ಸೇವೆಗೆ ನಿಯೀಜನೆಗೆ ಕೋರಿದ್ದಾರೆ. ಚರಂಡಿಗಳ ಕಾಂಕ್ರೀಟೀಕರಣ ಮತ್ತು ಚರಂಡಿಗಳ ಅನಿಯಮಿತ ಡಿ-ಸಿಲ್ಟಿಂಗ್ ಹೆಚ್ಚುವರಿ ನೀರು ಭೂಗತ ಚರಂಡಿಗಳಿಗೆ ಹರಿಯುವಂತೆ ಮಾಡಿದೆ.

ಭೂಗತ ಚರಂಡಿಗಳು ಮುಚ್ಚಿಹೋಗಿವೆ

ಭೂಗತ ಚರಂಡಿಗಳು ಮುಚ್ಚಿಹೋಗಿವೆ

ಒಳಚರಂಡಿ ಮುಚ್ಚಿರುವ ಕಾರಣ ಮ್ಯಾನ್‌ಹೋಲ್‌ಗಳನ್ನು ಬಲವಂತವಾಗಿ ತೆರೆಯುವಂತೆ ಮಾಡಿದೆ. ನೈರ್ಮಲ್ಯ ಮತ್ತು ಇತರ ಘನತ್ಯಾಜ್ಯಗಳನ್ನು ಮನೆಯವರು ಶೌಚಾಲಯಗಳಲ್ಲಿ ತೊಳೆಯುವುದರಿಂದ ಭೂಗತ ಚರಂಡಿಗಳು ಮುಚ್ಚಿಹೋಗಿವೆ. ನಾವು ಸ್ವಚ್ಛಗೊಳಿಸಿದಾಗ ನಾವು ಬಹಳಷ್ಟು ಘನತ್ಯಾಜ್ಯವನ್ನು ಹೊರತೆಗೆಯುತ್ತೇವೆ. ನೈರ್ಮಲ್ಯ ತ್ಯಾಜ್ಯವು ಅವುಗಳಲ್ಲಿ ಪ್ರಾಥಮಿಕವಾಗಿದೆ ಎಂದು ಹಿರಿಯ ಬೆಂಗಳೂರು ಒಳಚರಂಡಿ ಮಂಡಳಿ ಅಧಿಕಾರಿ ಹೇಳಿದರು.

ಬೆಂಗಳೂರಿನ ಈ ಏರಿಯಾಗಳಲ್ಲಿ ಆಗಸ್ಟ್ 6ರಂದು ವಿದ್ಯುತ್ ವ್ಯತ್ಯಯಬೆಂಗಳೂರಿನ ಈ ಏರಿಯಾಗಳಲ್ಲಿ ಆಗಸ್ಟ್ 6ರಂದು ವಿದ್ಯುತ್ ವ್ಯತ್ಯಯ

ಮೂರು ಮ್ಯಾನ್‌ಹೋಲ್‌ಗಳನ್ನು ಸ್ವಚ್ಛ ಮಾಡಬಹುದು

ಮೂರು ಮ್ಯಾನ್‌ಹೋಲ್‌ಗಳನ್ನು ಸ್ವಚ್ಛ ಮಾಡಬಹುದು

ಬೆಂಗಳೂರು ಒಳಚರಂಡಿ ಮಂಡಳಿ ಅಧ್ಯಕ್ಷ ಎನ್ ಜಯರಾಮ್ ಮಾತನಾಡಿ, ವಾರ್ಡ್‌ನಿಂದ ಯಾವುದೇ ದೂರು ಬಂದರೆ ತಕ್ಷಣವೇ ಗಮನಹರಿಸಲಾಗುವುದು ಎಂಬ ಖಚಿತತೆಗೆ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಒಂದು ಅಥವಾ ಎರಡು ಕೊಳಚೆ ನೀರು ಸ್ವಚ್ಛಗೊಳಿಸುವ ಯಂತ್ರಗಳಿವೆ. ಹೆಚ್ಚು ಯಂತ್ರಗಳು ಇರುವುದರಿಂದ ಕೆಲವೊಮ್ಮೆ ನಾವು ಎರಡು ಅಥವಾ ಮೂರು ಮ್ಯಾನ್‌ಹೋಲ್‌ಗಳನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸಬಹುದು. ಮಳೆ ಬಂದಾಗಲೆಲ್ಲ ಕಾರ್ಮಿಕರು, ಕೆಲವೆಡೆ ಸ್ಥಳೀಯರು ಮ್ಯಾನ್ ಹೋಲ್ ತೆರೆದು ಬಿಡುವುದರಿಂದ ಮಳೆ ನೀರು ಹರಿದು ಬರುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕಿದೆ. ಮಳೆನೀರು ತೆರೆದ ಮಳೆ-ನೀರಿನ ಚರಂಡಿಗಳಿಗೆ ಹರಿಯಬೇಕೇ ಹೊರತು ಮ್ಯಾನ್‌ಹೋಲ್‌ಗಳಿಗೆ ಅಲ್ಲ ಎಂದು ತಿಳಿಸಿದರು.

ಮಳೆನೀರು ಕೊಯ್ಲು ವ್ಯವಸ್ಥೆ ಇಲ್ಲ

ಮಳೆನೀರು ಕೊಯ್ಲು ವ್ಯವಸ್ಥೆ ಇಲ್ಲ

ಒಳಚರಂಡಿ ಮಂಡಳಿಯ ಮುಖ್ಯ ಇಂಜಿನಿಯರ್, ಭೂಗತ ಚರಂಡಿಗಳನ್ನು ನಿರ್ದಿಷ್ಟ ಪ್ರಮಾಣದ ನೀರನ್ನು ಹಿಡಿದಿಡಲು ಮಾತ್ರ ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿ ಮ್ಯಾನ್‌ಹೋಲ್ ಮೂಲಕ ಸೋರಿಕೆಯಾಗುತ್ತದೆ. ಹೆಚ್ಚಿನ ಮನೆಗಳು ಮಳೆನೀರನ್ನು ಮರುಬಳಕೆ ಮಾಡಲು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಲ್ಲ. ಬದಲಿಗೆ ಅವರು ತಮ್ಮ ಮನೆಗಳಿಂದ ಮಳೆನೀರನ್ನು ಸಾಗಿಸುವ ಪೈಪ್‌ಗಳನ್ನು ನೇರವಾಗಿ ಭೂಗತ ಚರಂಡಿಗಳಿಗೆ ಸಂಪರ್ಕಿಸಿರುತ್ತಾರೆ. ಇದು ನೀರಿನ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಹೆಚ್ಚುವರಿ ನೀರನ್ನು ಹೊರಹಾಕಲು ಸಹಾಯ

ಹೆಚ್ಚುವರಿ ನೀರನ್ನು ಹೊರಹಾಕಲು ಸಹಾಯ

ವಸತಿ ಪ್ರದೇಶಗಳಲ್ಲಿ ಹೆಚ್ಚುವರಿ ಚರಂಡಿ ವ್ಯವಸ್ಥೆ ಮುಚ್ಚದಂತೆ ಬಿಬಿಎಂಪಿಗೆ ಹಲವು ಬಾರಿ ಸೂಚಿಸಿದ್ದೇವೆ. ಇದು ಹೆಚ್ಚುವರಿ ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಚರಂಡಿಗಳಿಂದ ನೀರು ರಸ್ತೆಗಳ ಮೇಲೆ ಹರಿಯುತ್ತದೆ ಮತ್ತು ಅನೇಕ ನಿವಾಸಿಗಳು ತಮ್ಮ ಮನೆಗಳಿಗೆ ನೀರು ಪ್ರವೇಶಿಸುವುದನ್ನು ತಡೆಯಲು ಮ್ಯಾನ್‌ಹೋಲ್‌ಗಳನ್ನು ತೆರೆಯುವುದನ್ನು ನಾವು ಕಾಣುತ್ತೇವೆ. ಇದು ಭೂಗತ ಚರಂಡಿಗಳಲ್ಲಿ ನೀರಿನ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

Recommended Video

Nancy Pelosi ಅವರ ತೈವಾನ್ ಭೇಟಿಯಿಂದ ಕೆಂಡಾಮಂಡಲವಾದ ಚೀನಾ !! *World | OneIndia Kannada

English summary
As many as 103 manholes have opened up across Bengaluru city in the last 8 to 10 days due to excess flow of water in drains and increase in pressure due to rains. Thus the roads have turned into sewage and dirty canals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X