ಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಆಹ್ವಾನ

ಬೆಂಗಳೂರು, ಸೆ. 25 : ಮಂಗಳಯಾನದ ಯಶಸ್ಸಿನಿಂದ ಇಸ್ರೋದ ವಿಜ್ಞಾನಿಗಳು ಮಾತ್ರ ಸಂಭ್ರಮಿಸುತ್ತಿಲ್ಲ, ಇಡೀ ಕರ್ನಾಟಕವೇ ಸಡಗರಿಸುತ್ತಿದೆ. ಸಾಮಾಜಿಕ ತಾಣದಲ್ಲಂತೂ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು. ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಕನಸು ಕಾಣುತ್ತಿದ್ದ ಶಾಲಾ ವಿದ್ಯಾರ್ಥಿಗಳು ವಿಜ್ಞಾನಿಗಳಾಗುವ ಕನಸು ಕಾಣಲು ಆರಂಭಿಸಿದ್ದಾರೆ.

ಈ ಐತಿಹಾಸಿಕ ಘಟನೆಯಿಂದ ಉತ್ತೇಜಿತನಾಗಿ ಬೆಂಗಳೂರಿನ ಆಟೋ ಡ್ರೈವರೊಬ್ಬರು ಇಸ್ರೋದ ವಿಜ್ಞಾನಿಯಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳದೆ ಆಟೋದಲ್ಲಿ ಅವರನ್ನು ಮನೆಗೆ ತಲುಪಿಸಿದ್ದಾರೆ. ಅಪರೂಪಕ್ಕೆ ಸಿಗುವ ಇಂಥ ಆಟೋ ಡ್ರೈವರ್ ಹೊಟ್ಟೆ ತಣ್ಣಗಿರಲಿ. [ಮಹಿಳೆ ಮುಖಕ್ಕೆ ಉಗಿದ ಆಟೋ ಚಾಲಕ]

ಕರ್ನಾಟಕದ ಹಲವು ಶಾಲಾಕಾಲೇಜುಗಳು ಮಂಗಳಯಾನದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ನೋಡಿರುವ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಅದೇನೆಂದರೆ... ಇಲಾಖೆಯ ಪ್ರಕಟಣೆ ಕೆಳಗಿದೆ ಓದಿರಿ. [ಮಂಗಳಯಾನ ನಡೆದುಬಂದ ಹಾದಿ]

Mangalyaan success : Invite from Karnataka Information dept

ಆತ್ಮೀಯ ವಿದ್ಯಾರ್ಥಿ/ವಿದ್ಯಾರ್ಥಿನಿಯರೇ, ತಮಗೆಲ್ಲರಿಗೂ ತಿಳಿದಿರುವಂತೆ ನಿನ್ನೆ ಭಾರತವು ತನ್ನ ಮೊದಲ ಪ್ರಯತ್ನದಲ್ಲೇ ಮಂಗಳ ಬಾಹ್ಯಾಕಾಶ ನೌಕೆಯನ್ನು ಮಂಗಳ ಗ್ರಹದ ಕಕ್ಷೆ ತಲುಪಿಸುವಲ್ಲಿ ಯಶಸ್ವಿಯಾಗಿ ವಿಶ್ವದಾಖಲೆಯ ಸಾಧನೆ ಮಾಡಿದೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಇಸ್ರೋದ ಕೇಂದ್ರ ಕಚೇರಿಯು ನೆಲೆಗೊಂಡಿರುವುದು ಮತ್ತು ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹಲವು ಕನ್ನಡಿಗ ವಿಜ್ಞಾನಿಗಳ ಪರಿಶ್ರಮವೂ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಿಮ್ಮ ಸಂಭ್ರಮಾಚರಣೆಯ ಛಾಯಾಚಿತ್ರಗಳನ್ನು ತನ್ನ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಲು ಇಚ್ಛಿಸುತ್ತದೆ. ಆದುದರಿಂದ ನೀವು ಸಂಭ್ರಮಾಚರಣೆಯಲ್ಲಿ ತೊಡಗಿರುವ ಛಾಯಾಚಿತ್ರಗಳನ್ನು ಸಂಕ್ಷಿಪ್ತ ವಿವರಗಳೊಂದಿಗೆ [email protected]ಗೆ ಕಳುಹಿಸಿ.

-ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಸಂ. 17, ವಾರ್ತಾ ಸೌಧ,
ಭಗವಾನ್ ಮಹಾವೀರ ರಸ್ತೆ (ಇನ್‍ಫೆಂಟ್ರಿ ರಸ್ತೆ),
ಬೆಂಗಳೂರು - 560 001

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+