ಹೆಬ್ಬಾಳ, ಪುಲಿಕೇಶಿ ನಗರ ಕ್ಷೇತ್ರದಲ್ಲಿ 'ಮನೆಮನೆಗೆ ಕುಮಾರಣ್ಣ'

ಬೆಂಗಳೂರು, ಜೂನ್ 9: ಜೆಡಿಎಸ್ ಮೈ ಕೊಡವಿ ನಿಂತಿದೆ. ಭಿನ್ನಮತ, ಆಂತರಿಕ ಕಲಹಗಳನ್ನು ಮೆಟ್ಟಿ ನಿಂತು ನಗರ ಪ್ರದೇಶದ ಮತದಾರರನ್ನು ತಲುಪಲು ಯೋಜನೆಗಳನ್ನು ರೂಪಿಸಿದೆ. ಅಂಥದ್ದೇ ಯೋಜನೆಯ ಭಾಗ 'ಮನೆ ಮನೆಗೆ ಕುಮಾರಣ್ಣ' ಕಾರ್ಯಕ್ರಮ. ಶನಿವಾರ ಅಂದರೆ ಜೂನ್ ಹತ್ತರಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ.

ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ ಆರ್ ಪ್ರಕಾಶ್ ನೇತೃತ್ವ ವಹಿಸಲಿದ್ದಾರೆ. ಸಂಜಯ್ ನಗರ ಮುಖ್ಯರಸ್ತೆಯ ರಾಧಾಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಪಾದಯಾತ್ರೆಯು ಆರಂಭವಾಗಲಿದೆ. ಸಂಸದ ಕುಪೇಂದ್ರ ರೆಡ್ಡಿ, ಶಾಸಕ ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಟಿಎ ಶರವಣ, ಉಪ ಮೇಯರ್ ಎಂ ಆನಂದ್[ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು!]

Mane Manege Kumaranna in Hebbal and Pulikeshi Nagar on Saturday

ನಗರ ಕಾರ್ಯಾಧ್ಯಕ್ಷ ಕೆವಿ ನಾರಾಯಣಸ್ವಾಮಿ, ನಗರ ಮಹಾಪ್ರಧಾನ ಕಾರ್ಯದರ್ಶಿ ಬಿಎಚ್ ಚಂದ್ರಶೇಖರ್, ಕ್ಷೇತ್ರದ ಅಧ್ಯಕ್ಷ ಹನುಮಂತೇಗೌಡ, ಬಿಬಿಎಂಪಿ ಸದಸ್ಯರಾದ ಎನ್ ರಾಜಶೇಖರ್, ಮುಖಂಡ ಎ ರುದ್ರಪ್ಪ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಕಚೇರಿ ಪ್ರಧಾನ ಕಾರ್ಯದರ್ಶಿ ಎಸ್ ರಮೇಶ್ ತಿಳಿಸಿದ್ದಾರೆ.[ಹೊರಟ್ಟಿಗೆ ಸಭಾಪತಿ ಸ್ಥಾನ ಸಿಗುವಂತೆ ಮಾಡಲು ಜೆಡಿಎಸ್ ಚಿಂತನೆ]

ಮಧ್ಯಾಹ್ನ ಮೂರು ಗಂಟೆಗೆ ಪುಲಿಕೇಶಿ ನಗರ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ. ಮುನಿವೀರಪ್ಪ ಬಡಾವಣೆಯ, ಶಾಂಪುರ ಮುಖ್ಯರಸ್ತೆ, ಅಂಬೇಡ್ಕರ್ ಮೆಡಿಕಲ್ ಕಾಲೇಜು ಹತ್ತಿರದ ಶಕ್ತಿ ವಿನಾಯಕ ದೇವಸ್ಥಾನದಿಂದ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+