ಕಸ ಗಲಾಟೆ: ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ
ಬೆಂಗಳೂರು, ಜೂ. 12: ನಿಷೇಧಾಜ್ಞೆ ಜಾರಿಗೊಳಿಸಿ ಬಿಬಿಎಂಪಿ ಕಸ ಸಾಗಿಸುತ್ತಿರುವುದು ಮಂಡೂರು ಜನತೆಯನ್ನು ಕೆರಳಿಸಿದ್ದು, ಜೂ.13 ಶುಕ್ರವಾರ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕುಮಾರಕೃಪ ರಸ್ತೆಯಲ್ಲಿರುವ ವಲ್ಲಭನಿಕೇತನ ಆಶ್ರಮದಲ್ಲಿ ಬುಧವಾರ ಸಂಜೆ ಮಂಡೂರಿನ ಸುಮಾರು 80 ಗ್ರಾಮಸ್ಥರು ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿಯವರ ಜೊತೆ ನಡೆಸಿದ ಸಭೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
ಮಂಡೂರು ನಿವಾಸಿ ಶ್ರೀನಿವಾಸ್ ಕನ್ನಡ ಒನ್‌ಇಂಡಿಯಾದೊಂದಿಗೆ ಮಾತನಾಡಿ " ಜೂನ್. 12 ಸಂಜೆ ಐದು ಗಂಟೆಗೆ ನಿಷೇಧಾಜ್ಞೆ ತೆರವಾಗಲಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಉಪವಾಸ ಸತ್ಯಗ್ರಹ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಊರಿನಲ್ಲಿ ಕಸ ಸುರಿಯಲು ಬಿಡುವುದಿಲ್ಲ" ಎಂದು ಹೇಳಿದರು[ಮಂಡೂರು ಜನತೆಯ ಕಷ್ಟದ ಕಥೆ ಇಲ್ಲಿದೆ]

ಮಂಡೂರಿನಲ್ಲಿ ಮೇಯರ್ ಗ್ರಾಮ ವಾಸ್ತವ್ಯ:
ಮಂಡೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಮೇಯರ್ ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ. ಮಂಡೂರಿನಲ್ಲಿ ಕಸ ಹಾಕುತ್ತಿರುವುದರಿಂದ ಅಲ್ಲಿನ ಜನರ ಬದುಕು ದುಸ್ತರವಾಗಿದೆ. ಕಸದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಯೋಗ್ಯ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ. ನಿಷೇಧಾಜ್ಞೆ ತೆರವಾದ ಬಳಿಕ ಅಲ್ಲಿನ ಜನತೆ ಬಯಸಿದ್ದಲ್ಲಿ ಮಂಡೂರಿನಲ್ಲಿ ವಾಸ್ತವ್ಯ ಹೂಡಲು ಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.[ಕಸದ ಸಮಸ್ಯೆ ಬಗೆಹರಿಸಲು ಸ್ಯಾನ್ ಫ್ರಾನ್ಸಿಸ್ಕೋ ನೆರವು]
ವ್ಯಾಸ್ತವ್ಯ ಹೂಡುವುದರ ಜೊತೆಗೆ ಪ್ರತಿವಾರ ಮಂಡೂರಿಗೆ ನೀಡಿ ಭೇಟಿ ಪರಿಶೀಲಿಸಿ ಗ್ರಾಮಸ್ಥರ ಜೊತೆ ನಾಲ್ಕು ಗಂಟೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.












Click it and Unblock the Notifications