B Khata: ಸ್ವಾಧಿನಾನುಭವ ಪತ್ರ ಕಡ್ಡಾಯದಿಂದ ಬಿ - ಖಾತಾ ಆಸ್ತಿಗೆ ಸಂಕಷ್ಟ, ರಿಯಲ್ ಎಸ್ಟೇಟ್‌ಗೂ ಶಾಕ್!

B Khata: ಕರ್ನಾಟಕ ಸರ್ಕಾರವು ಆಸ್ತಿ ವಿಚಾರದಲ್ಲಿ ಮಾಡಿರುವ ಹೊಸ ಬದಲಾವಣೆಯಿಂದಾಗಿ ಬಿ - ಖಾತಾ ರಿಜಿಸ್ಟ್ರೇಷನ್ ಸೇರಿದಂತೆ ರಿಯಲ್ ಎಸ್ಟೇಟ್‌ಗೆ ಭಾರೀ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಅಕ್ರಮ ಆಸ್ತಿಗಳಿಗೆ ಬಿ ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಸ್ವಾಧಿನಾನುಭವ ಪತ್ರ Occupancy Certificate (OC)ವನ್ನು ಕಡ್ಡಾಯ ಮಾಡಿರುವುದು ಹಲವು ತೊಂದರೆಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಬಿ ಖಾತಾ ಆಸ್ತಿದಾರರು ಮತ್ತೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಏನಿದು Occupancy Certificate (OC) ಪತ್ರ ಆಸ್ತಿದಾರರು ಎದುರಿಸುತ್ತಿರುವ ಸಮಸ್ಯೆಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮನೆಗಳಿಗೆ ಹೊಸದಾಗಿ ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಕಡ್ಡಾಯ ಮಾಡಲಾಗಿದೆ. ಇದರಿಂದ ಕೈಗಾರಿಕೆಗಳ ಮೇಲೆ, ಬಿ ಖಾತಾ ಆಸ್ತಿ ಇರುವವರಿಗೆ ಹಾಗೂ ಕಟ್ಟಡಗಳ ನಿರ್ಮಾಣ ಸೇರಿದಂತೆ ರಿಯಲ್ ಎಸ್ಟೇಟ್‌ ಮೇಲೆ ಪ್ರಭಾವ ಬೀರಿದೆ. ರಾಜ್ಯದಲ್ಲಿ ಲಕ್ಷಾಂತರ ಅಕ್ರಮ ಆಸ್ತಿಗಳಿದ್ದು ಅಕ್ರಮ ಆಸ್ತಿಗಳಿಗೆ ಒಂದು ಬಾರಿ ಪರಿಹಾರವಾಗಿ ಬಿ ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

Mandatory ownership certificate creates hardship for B-Khata properties shock for real estate too

ಸಾವಿರಾರು ಕಟ್ಟಡಗಳು ಬಿ ಖಾತಾ ಆಗದೆ ಉಳಿದಿವೆ. ಬಿ ಖಾತಾ ಆಗದೆ ಹಲವು ಆಸ್ತಿಗಳು ಉಳಿದಿವೆ. ಆದರೆ ರಾಜ್ಯ ಸರ್ಕಾರವು OC ಕಡ್ಡಾಯ ಮಾಡಿರುವುದು ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಆಸ್ತಿದಾರರು ಹಾಗೂ ರಿಯಲ್ ಎಸ್ಟೇಟ್ ಮಾಲೀಕರು ಸರ್ಕಾರದ ಮುಂದಿನ ಕ್ರಮಕ್ಕಾಗಿ ಅಥವಾ ಈ ನಿರ್ಧಾರದ ಬದಲಾವಣೆಗಾಗಿ ಕಾಯುತ್ತಿದ್ದಾರೆ.

5 ಲಕ್ಷ ಪ್ಲಾಟ್ ಬಿ - ಖಾತಾ: ಇನ್ನು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿ - ಖಾತಾ ಇಲ್ಲದ 5 ಲಕ್ಷಕ್ಕೂ ಹೆಚ್ಚು ಪ್ಲಾಟ್‌ಗಳಿವೆ ಎಂದು ಹೇಳಲಾಗಿದೆ. ನೋಂದಣಿ ಇಲಾಖೆಯಲ್ಲಿ ಯಾವುದೇ ನಿಖರ ದಾಖಲೆಗಳಲ್ಲಿದ ಲಕ್ಷಾಂತರ ಪ್ಲಾಟ್‌ಗಳಿವೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಈಗಾಗಲೇ ಕಟ್ಟಲಾಗಿರುವ ಕಟ್ಟಡಗಳಿಗೆ ಆಸ್ತಿದಾರರು OC ಪಡೆಯಲು ಪರದಾಡುತ್ತಿದ್ದಾರೆ. ಈ ರೀತಿ ಇರುವಾಗ ಬಿ ಖಾತಾ ಪ್ರಾಪರ್ಟಿದಾರರಿಗೂ ಸಂಕಷ್ಟ ಎದುರಾಗಿದೆ. ಬಿ ಖಾತಾ ಅವಧಿಯನ್ನು ರಾಜ್ಯ ಸರ್ಕಾರವು ಬರೋಬ್ಬರಿ ಮೂರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶ ಮಾಡಿದೆ. ಆದರೆ, ಈ ರೀತಿ ಆಸ್ತಿ ನೋಂದಣಿಯಲ್ಲಿನ ಬದಲಾವಣೆಗಳು ಗೊಂದಲವನ್ನು ಸೃಷ್ಟಿ ಮಾಡಿವೆ ಎಂದು ಹೇಳಲಾಗುತ್ತಿದೆ.

ರಿಯಲ್ ಎಸ್ಟೇಟ್ ಮೇಲೆ ಪರಿಣಾಮ: ಕಂದಾಯ ಇಲಾಖೆಯು ಆಸ್ತಿಗಳಿಗೆ ಸಂಬಂಧಿಸಿದಂತೆ ಪದೇ ಪದೇ ನಿಯಮಗಳನ್ನು ಬದಲಾಯಿಸುತ್ತಿರುವುದು ಆಸ್ತಿದಾರರಿಗೆ ಅದರಲ್ಲೂ ಬಿ ಖಾತಾ ಆಸ್ತಿಯನ್ನು ಹೊಂದಿರುವವರಿಗೆ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಭಾರೀ ಹಿನ್ನಡೆಯುಂಟಾಗಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ರಿಯಲ್ ಎಸ್ಟೇಟ್‌ಗೂ ಭಾರೀ ಹೊಡೆತ ಎದುರಾಗಿದೆ. ರಿಯಲ್ ಎಸ್ಟೇಟ್‌ನಲ್ಲಿ ಮನೆ ಖರೀದಿ ಹಾಗೂ ಮಾರಾಟಕ್ಕೂ ಹಿನ್ನಡೆ ಉಂಟಾಗಿದೆ. ಅರ್ಧ ಮನೆ ಕಟ್ಟಿರುವ ಬಿ ಖಾತಾದಾರರಿಗೂ ಸಂಕಷ್ಟ ಎದುರಾಗಿದೆ.

ಬಿ - ಖಾತಾ ಗೊಂದಲ: ಇನ್ನು ರಾಜ್ಯ ಸರ್ಕಾರವು ಬಿ ಖಾತಾ ಅವಧಿಯನ್ನು ವಿಸ್ತರಿಸಿದ್ದರೂ ಬಿ ಖಾತಾದಾರರಿಗೆ ಸಂಕಷ್ಟ ಮುಂದುವರಿದಿದೆ. ಬಿ ಖಾತಾ ಮಾಡಿಸಿಕೊಳ್ಳಲು ಅನಧಿಕೃತ ಆಸ್ತಿ ಹೊಂದಿರುವವರು ಪರದಾಡುತ್ತಿದ್ದರೆ ಇನ್ನೂ ಬಿ ಖಾತಾವನ್ನು ಈಗಾಗಲೇ ಮಾಡಿಸಿಕೊಂಡಿರುವವರು ಏನು ಮಾಡಬೇಕು ಅಂತ ತಿಳಿಯದೆ ಪರದಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+