ಚಿಕ್ಕನ್ ಇಲ್ಲದೆ ಬರೀ ಬಿರಿಯಾನಿ ಕೊಟ್ಟ ರೆಸ್ಟೋರೆಂಟ್ ವಿರುದ್ಧ ದೂರು: ಗ್ರಾಹಕನಿಗೆ ವಾಪಸ್ ಸಿಕ್ಕ ಹಣ ಎಷ್ಟು ಗೊತ್ತಾ?
ಬೆಂಗಳೂರಿನ ರೆಸ್ಟೊರೆಂಟ್‌ವೊಂದಲ್ಲಿ ಚಿಕನ್ ಇಲ್ಲದ ಬಿರಿಯಾನಿ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬ ದೂರು ನೀಡಿದ್ದಾರೆ. ಬಳಿಕ ನಗರ ಗ್ರಾಹಕ ನ್ಯಾಯಾಲಯವು ₹150 ಮರುಪಾವತಿಯೊಂದಿಗೆ ಗ್ರಾಹಕನಿಗೆ ಮಾನಸಿಕ ಸಂಕಟಕ್ಕೆ ಪರಿಹಾರವಾಗಿ ₹1000 ನೀಡುವಂತೆ ಆದೇಶೀಸಿದೆ ಎಂದು ರೆಸ್ಟೋರೆಂಟ್‌ಗೆ ಹೇಳಿದೆ ಅಂತಾ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರೆಸ್ಟೋರೆಂಟ್ ಮಾಲೀಕನ ವಿರುದ್ಧ ಆಕ್ರೋಶ
ಕೃಷ್ಣಪ್ಪ ಎಂಬ ವ್ಯಕ್ತಿ ಈ ವರ್ಷದ ಏಪ್ರಿಲ್‌ನಲ್ಲಿ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ ನಂತರ ತನ್ನ ಹೆಂಡತಿಯೊಂದಿಗೆ ರೆಸ್ಟೋರೆಂಟ್‌ಗೆ ಹೋಗಿದ್ದನು. ದಂಪತಿಗಳು ಚಿಕನ್ ಬಿರಿಯಾನಿ ಆರ್ಡರ್ ಮಾಡಿ ಪಾರ್ಸೆಲ್ ಅನ್ನು ಮನೆಗೆ ತೆಗೆದುಕೊಂಡು ಹೋದರು. ಅವರು ಪಾರ್ಸೆಲ್ ಬಾಕ್ಸ್ ಅನ್ನು ತೆರೆದಾಗ ಅದರಲ್ಲಿ ಮಾಂಸವಿಲ್ಲದ ಬರೀ ಬಿರಿಯಾನಿ ಅನ್ನವನ್ನು ನೀಡಲಾಗಿತ್ತು. ನಂತರವೇ ಕೃಷ್ಣಪ್ಪ ತಕ್ಷಣ ರೆಸ್ಟೋರೆಂಟ್‌ಗೆ ಕರೆ ಮಾಡಿ ಆಕ್ರೋಶ ಹೊರಹಾಕಿದ್ದಾ.

ಚಿಕನ್ ಬಿರಿಯಾನಿ ಆರ್ಡನಲ್ಲಿ ಚಿಕನ್ ನೀಡದಿರುವ ಬಗ್ಗೆ ಕೃಷ್ಣಪ್ಪ ಆಕ್ರೋಶಗೊಂಡಾಗ, ರೆಸ್ಟೋರೆಂಟ್ ಮಾಲೀಕರು ಕೆಲವೇ ನಿಮಿಷಗಳಲ್ಲಿ ಆರ್ಡರ್ ಅನ್ನು ಬದಲಾಯಿಸುವ ಭರವಸೆ ನೀಡಿದರು. ಆದರೆ ಎರಡು ಗಂಟೆಗಳ ನಂತರವೂ ಆರ್ಡರ್ ಅನ್ನು ಬದಲಾಯಿಸಲಾಗಿಲ್ಲ ಎಂದು ಮತ್ತೆ ಕೃಷ್ಣಪ್ಪ ಕೆಂಡಕಾರಿದ್ದಾರೆ.
₹30,000 ಪರಿಹಾರ ಪಡೆದ ಗ್ರಾಹಕ
ಕೃಷ್ಣಪ್ಪ ಈ ಬಗ್ಗೆ ರೆಸ್ಟೋರೆಂಟ್‌ಗೆ ನೋಟಿಸ್ ನೀಡಲು ನಿರ್ಧರಿಸಿದ್ದಾರೆ. ಆದರೆ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಅವರು ಮೇ ತಿಂಗಳಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಭೇಟಿ ಮಾಡಿ ಉಪಾಹಾರ ಗೃಹದ ಮಾಲೀಕರ ವಿರುದ್ಧ ದೂರು ಸಲ್ಲಿಸಿದರು ಮತ್ತು ತಮಗೆ ಆದ ಅನ್ಯಾಯದ ಬಗ್ಗೆ ₹30,000 ಪರಿಹಾರವನ್ನು ಕೇಳಿದರು.
₹30,000 ಕೊಡುವಂತೆ ನ್ಯಾಯಾಲಯ ಆದೇಶ
ಕೃಷ್ಣಪ್ಪ ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ, ಸ್ವಂತವಾಗಿ ವಾದಿಸಿದರು. ಅವರು ಬಿರಿಯಾನಿಯ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು. ಮತ್ತು ಅವರ ಪತ್ನಿ ಆ ದಿನ ಆಹಾರವನ್ನು ಬೇಯಿಸಲು ಸಾಧ್ಯವಾಗದೆ ಮಾನಸಿಕ ಸಂಕಟವನ್ನು ಅನುಭವಿಸಿದರು ಎಂದು ಹೇಳಿದರು.
ಕೃಷ್ಣಪ್ಪ ಅವರ ವಾದವನ್ನು ಪರಿಗಣಿಸಿದ ನ್ಯಾಯಾಧೀಶರು, ರೆಸ್ಟೋರೆಂಟ್ ಗೊತ್ತಿದ್ದೋ ಅಥವಾ ತಿಳಿಯದೆಯೋ ತಪ್ಪು ಮಾಡಿದೆ. ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ನೀಡಲಿಲ್ಲ ಎಂದು ಹೇಳಿದೆ. ಅಲ್ಲದೆ ಗ್ರಾಹಕರಿಗೆ ಪರಿಹಾರ ಮತ್ತು ಮರುಪಾವತಿಯನ್ನು ಪಾವತಿಸಲು ನ್ಯಾಯಾಲಯ ಆದೇಶಿಸಿದೆ.












Click it and Unblock the Notifications