ಸ್ನೇಹ ತೊರೆದಿದ್ದಕ್ಕೆ ಗೆಳತಿಯ ಬಟ್ಟೆ ಹರಿದು ಫೋಟೊ ತೆಗೆದ

ಬೆಂಗಳೂರು, ಜನವರಿ 10: ಸ್ನೇಹ ತೊರೆದಿದ್ದಕ್ಕೆ ಗೆಳತಿಯ ಬಟ್ಟೆ ಹರಿದು ಫೋಟೊ ತೆಗೆದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಆತನ ಸ್ನೇಹವನ್ನು ಕಡಿದುಕೊಂಡ ಗೆಳತಿಯ ಬಟ್ಟೆಯನ್ನು ಬಿಚ್ಚಿ ಫೋಟೊ ತೆಗೆದು ಆಕೆಗೆ ಅವಮಾನ ಮಾಡಿರುವ ಘಟನೆ ಇದಾಗಿದೆ. ತನ್ನೊಂದಿಗೆ ಸಲುಗೆಯಿಂದ ನಡೆದುಕೊಳ್ಳದಿದ್ದರೆ ನಿನ್ನ ಕುಟುಂಬದ ಎಲ್ಲರನ್ನೂ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತ ಬೆದರಿಕೆ ಒಡ್ಡಿದ್ದ.

ಹೀಗೆಂದು ಆರೋಪಿಸಿ ಕಲಾಸಿಪಾಳ್ಯ ಠಾಣೆಯಲ್ಲಿ ನೌಕರನೊಬ್ಬನ ಪತ್ನಿ ದೂರು ನೀಡಿದ್ದಾಳೆ. ತಮಿಳುನಾಡು ಮೂಲದ ಗಿಲ್ಬರ್ಟ್ ಜಾನ್ ಎಂಬಾತನೇ ಆರೋಪಿಯಾಗಿದ್ದು, ಎರಡು ದಿನಗಳ ಹಿಂದೆ ಗೆಳತಿ ಮನೆಗೆ ಬಂದು ಜಾನ್ ಈ ಕೃತ್ಯ ಎಸಗಿದ್ದಾನೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳ, ಉದ್ದೇಶಪೂರ್ವಕವಾಗಿ ಹಲ್ಲೆ ಹಾಗೂ ಜೀವಬೆದರಿಕೆ ಆರೋಪಗಳಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

Man sexually assault his college mate

ಮೂಲತಃ ತಮಿಳುನಾಡಿನವರಾದ ಸಂತ್ರಸ್ತೆ ಮತ್ತು ಆರೋಪಿ ಕಾಲೇಜು ದಿನಗಳಲ್ಲಿ ಸಹಪಾಠಿಗಳಾಗಿದ್ದರು. ರೈಲ್ವೆ ಇಲಾಖೆಯ ನೌಕರನ ಜೊತೆ ವಿವಾಹದ ನಂತರ ದೂರುದಾರರು, ತಮ್ಮ ಕುಟುಂಬದವರ ಜೊತೆ ಕಲಾಸಿಪಾಳ್ಯದ ಸಮೀಪ ನೆಲೆಸಿದ್ದಾರೆ. ಇತ್ತೀಚಿನ ಗೆಳೆಯನ ನಡವಳಿಕೆ ಬೇಸರ ತಂದಿತ್ತು ಹಾಗಾಗಿ ಆತನ ಸ್ನೇಹವನ್ನು ಕಡಿದುಕೊಳ್ಳಲು ಬಯಸಿದ್ದಳು. ಅದಕ್ಕೆ ಕೋಪಗೊಂಡ ಆತ ಆಕೆಯ ಬಟ್ಟೆಯನ್ನು ಹರಿದು ಫೋಟೊ ತೆಗೆದು ಆಕೆಗೆ ಹಿಂಸೆ ನೀಡಿದ್ದ.

ನಾನು ಮತ್ತು ಜಾನ್ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇವೆ, ಬಳಿಕ ಆತ ಪಿಎಚ್‌ಡಿ ಮುಂದುವರೆಸಿದ್ದ, ಈ ಸ್ನೇಹದಲ್ಲಿ ಆಗಾಗ ನಮ್ಮ ಮನೆಗೆ ಬರುತ್ತಿದ್ದ, ಇತ್ತೀಚೆಗೆ ಆತನೊಂದಿಗೆ ನಾನು ಮಾತನಾಡುತ್ತಿರಲಿಲ್ಲ, ಅಂದು ಬೆಳಗ್ಗೆ 8.30ರ ಸುಮಾರಿಗೆ ದಾರಿಯಲ್ಲಿ ಎದುರಾದ ಆತ ನನ್ನಿಂದ ಮನೆಯ ಬೀಗ ಕೀ ಮತ್ತು ಮೊಬೈಲ್ ಕಸಿದುಕೊಂಡ, ಬಳಿಕ ಬಲವಂತವಾಗಿ ನನ್ನ ಮನೆಗೆ ಬಂದ, ಬಟ್ಟೆ ಹರಿದು ಫೋಟೊ ಕ್ಲಿಕ್ಕಿಸಿ, ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ ಎಂದು ಆಕೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+