ಕೇಕ್ ಕತ್ತರಿಸುವಾಗ ಜಗಳ: ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಕೊಲೆ
ಬೆಂಗಳೂರು, ಜನವರಿ 1 : ಹೊಸ ವರ್ಷಾಚರಣೆ ಸಂಭ್ರದಲ್ಲಿ ಕೇಕ್ ಕತ್ತರಿಸುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವರಾಮ್(25) ಕೊಲೆಯಾದ ಯುವಕ, ಭಾನುವಾರ ರಾತ್ರಿ ಸ್ನೇಹಿತರ ಜತೆಗೆ ಹೊಸ ವರ್ಷ ಆಚರಣೆ ಮಾಡಿಕೊಂಡು ಕೇಕ್ ಕತ್ತರಿಸುವ ವಿಚಾರದಲ್ಲಿ ಗಲಾಟೆ ನಡೆದಿದೆ.

ದುಷ್ಕರ್ಮಿಗಳು ತಮಿಳು ಭಾಷೆಯಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದನ್ನು ಶಿವರಾಮ್ ಪ್ರಶ್ನಿಸಿ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಕ್ಕೆ ಕೊಲೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 7 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications