ಜೂಜಾಡಲು ಹಣ ನೀಡಲಿಲ್ಲ ಎಂದು ತಂದೆಗೆ ಇರಿದ ಮಗ
ಬೆಂಗಳೂರು, ಫೆಬ್ರವರಿ 11: ಮಗ ದುಶ್ಚಟಗಳ ದಾಸನಾಗಿದ್ದ ಆತನ ಹಿತದೃಷ್ಟಿಯಿಂದ ಜೂಜಾಡಲು ಹಣ ನೀಡದಿರುವ ಕಾರಣ ಮಗನೊಬ್ಬ ತಂದೆಗೆ ಚಾಕುವಿನಿಂದ ತಿವಿದು ಘಾಸಿಗೊಳಿಸಿರುವ ಘಟನೆ ನಡೆದಿದೆ.
ಗಿರಿನಗರ ಬಳಿಯ ದ್ವಾರಕಾನಗರ ನಿವಾಸಿ ಸಂತೋಷ್(28) ಆರೋಪಿ, ಈತನ ತಂದೆ ರಾಮಪ್ಪ ಹಲ್ಲೆಗೊಳಗಾದವರು. ರಾಮಪ್ಪ ಅವರ ಆಟೋವನ್ನು ಸಂತೋಷ್ ಓಡಿಸುತ್ತಿದ್ದ, ಆತನಿಗೆ ಕೆಲವು ವರ್ಷಗಳಿಂದ ಇಸ್ಪೀಟ್ ಆಡುವ ಚಟವಿತ್ತು. ಈ ಹಿಂದೆ ಸಾವಿರಾರು ರೂ ಕಳೆದುಕೊಂಡಿದ್ದ. ತಾನು ಕಳೆದುಕೊಂಡ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಇಸ್ಪೀಟ್ ಆಡಲು ಹೋಗುತ್ತಿದ್ದ.

ರಾತ್ರಿ ಪರಿಚಿತರ ಜೊತೆ ಜೂಜು ಆಡಿದ್ದ ಸಂತೋಷ್ 20 ಸಾವಿರ ರೂ ಕಳೆದುಕೊಂಡಿದ್ದ, ಆದರೆ ಜೂಜು ಗೆದ್ದವರಿಗೆ ನೀಡಲು ಹಣವಿರಲಿಲ್ಲ. ಈ ಹಿನ್ನೆಲೆಯಲ್ಲಿ ತಡರಾತ್ರಿ 3 ಗಂಟೆಗೆ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ, 1 ಲಕ್ಷ ರೂ ನೀಡುವಂತೆ ತಂದೆಗೆ ಪೀಡಿಸಿದ್ದ ಅದನ್ನು ನಿರಾಕರಿಸಿದ್ದಕ್ಕೆ ತಂದೆಗೆ ಚಾಕುವಿನಿಂದ ಇರಿದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.











Click it and Unblock the Notifications