ಇಂಡಿಗೋ ವಿಮಾನದಲ್ಲಿ (Indigo Flight) ಧೂಮಪಾನ ಮಾಡುತ್ತಿದ್ದ ವ್ಯಕ್ತಿ ಬಂಧನ
ಮಾರ್ಚ್ ಮೊದಲ ವಾರದಲ್ಲಿ ಕೋಲ್ಕತ್ತಾದಿಂದ ಇಂಡಿಗೋ ವಿಮಾನದಲ್ಲಿ 24 ವರ್ಷದ ಮಹಿಳೆಯೊಬ್ಬರು ಟಾಯ್ಲೆಟ್‌ನಲ್ಲಿ ಧೂಮಪಾನ ಮಾಡುತ್ತಿದ್ದರು
ಬೆಂಗಳೂರು, ಮಾರ್ಚ್ 18: ಇಂಡಿಗೋ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ವಿಮಾನ ನಿಲ್ದಾಣ ಪೊಲೀಸರು ನೀಡಿರುವ ಪ್ರಕಾರ, ಬಂಧಿತ ವ್ಯಕ್ತಿಯನ್ನು ಶೆಹಾರಿ ಚೌಧರಿ ಎಂದು ಗುರುತಿಸಲಾಗಿದ್ದು, ಇಂಡಿಗೋ ಫ್ಲೈಟ್ 6E 716ನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಪ್ರಯಾಣಿಕರು ವಿಮಾನ ಹಾರಾಟ ಮಾಡುತ್ತಿದ್ದಾಗ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದು, ಇದರಿಂದ ಇತರ ಪ್ರಯಾಣಿಕರ ಸುರಕ್ಷತೆಗೆ ಅಪಾಯವಾಗಿದೆ. ಶೌಚಗೃಹದಲ್ಲಿ ವಾಸನೆ ಬರುತ್ತಿರುವುದನ್ನು ಗಮನಿಸಿದ ವಿಮಾನದ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಶುಕ್ರವಾರ ಬೆಳಗಿನ ಜಾವ 1.30ಕ್ಕೆ ಈ ಘಟನೆ ನಡೆದಿದೆ. ಈ ಸಂಬಂಧ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ಕೋಲ್ಕತ್ತಾದಿಂದ ಇಂಡಿಗೋ ವಿಮಾನದಲ್ಲಿ 24 ವರ್ಷದ ಮಹಿಳೆಯೊಬ್ಬರು ಟಾಯ್ಲೆಟ್‌ನಲ್ಲಿ ಧೂಮಪಾನ ಮಾಡುತ್ತಿದ್ದರು. ಬೆಂಗಳೂರಿಗೆ ಬಂದ ಮೇಲೆ ಆಕೆಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೇ ಮಾರ್ಚ್ 14ರಂದು ಏರ್ ಇಂಡಿಯಾ ವಿಮಾನದಲ್ಲಿ ಅಸಭ್ಯ ನಡವಳಿಕೆ ಮತ್ತು ಧೂಮಪಾನದ ಆರೋಪದ ಮೇಲೆ ಬಂಧಿತರಾಗಿದ್ದ ರತ್ನಾಕರ್ ದ್ವಿವೇದಿ ಎಂಬಾತನು ಜಾಮೀನಿಗೆ 25,000 ರೂ ಪಾವತಿಸಲು ನಿರಾಕರಿಸಿದ ನಂತರ ಅವರನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿತ್ತು.

ಐಪಿಸಿ ಸೆಕ್ಷನ್ ಅಡಿಯಲ್ಲಿ ದಂಡದ ಮೊತ್ತ ಕೇವಲ 250 ರೂಪಾಯಿ ಎಂದು ದ್ವಿವೇದಿ ಹೇಳಿಕೊಂಡಿದ್ದನು. ಆರೋಪಿ ರತ್ನಾಕರ್ ದ್ವಿವೇದಿ ಅವರಿಗೆ ನ್ಯಾಯಾಲಯವು ನಗದು ಜಾಮೀನು ನೀಡಿದ್ದರೂ, ಅದನ್ನು ಪಾವತಿಸಲು ನಿರಾಕರಿಸಿದ ಅವರು ಜೈಲಿಗೆ ಹೋಗಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಾಗಾಗಿ ಅವರನ್ನು ಜೈಲು ಶಿಕ್ಷಗೆ ಗುರಿಪಡಿಸಲಾಗಿತ್ತು.
ಮಾರ್ಚ್ 10 ರಂದು ನಡೆದ ಘಟನೆಯಲ್ಲಿ ಲಂಡನ್‌ನಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದ ರೆಸ್ಟ್‌ರೂಮ್‌ನಲ್ಲಿ ಧೂಮಪಾನ ಮಾಡುವುದನ್ನು ಗಮನಿಸಿದ ಮತ್ತು ಅಸಹ್ಯಕರ ರೀತಿಯಲ್ಲಿ ವರ್ತಿಸಿದ ನಂತರ ಭಾರತೀಯ ಕ್ರಿಮಿನಲ್ ಕೋಡ್‌ನ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿಯಲ್ಲಿ ರತ್ನಾಕರ ಅವರನ್ನು ಬಂಧಿಸಲಾಗಿತ್ತು.
ಐಪಿಸಿ ಸೆಕ್ಷನ್ 336ರ ಪ್ರಕಾರ 250 ರೂಪಾಯಿ ದಂಡವನ್ನು ಪಾವತಿಸಲು ಸಿದ್ಧನಿದ್ದೇನೆ. ಆದರೆ ಜಾಮೀನು ಹಣವನ್ನು ಆನ್‌ಲೈನ್‌ನಲ್ಲಿ ಓದಿದ ಕಾರಣ ಆರೋಪಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾನೆ. ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸೋಮವಾರ ಅವರನ್ನು ಜೈಲಿಗೆ ಹಾಕಿದ್ದರು.
ಏರ್ ಇಂಡಿಯಾ ಪ್ರಕಾರ, ಪ್ರಯಾಣಿಕ ರತ್ನಾಕರ್ ದ್ವಿವೇದಿ ರೆಸ್ಟ್ ರೂಂನಲ್ಲಿ ಧೂಮಪಾನ ಮಾಡುತ್ತಿರುವುದು ಮತ್ತು ಹಲವಾರು ಎಚ್ಚರಿಕೆಗಳ ಹೊರತಾಗಿಯೂ ಪೈಲಟ್‌ನ ಧ್ವನಿ ಮತ್ತು ಲಿಖಿತ ಆದೇಶಗಳನ್ನು ಧಿಕ್ಕರಿಸುವುದರ ಜೊತೆಗೆ ಆಕ್ರಮಣಕಾರಿಯಾಗಿ ವರ್ತಿಸಿದ್ದನು ಎಂದು ಹೇಳಿದೆ. ಅಲ್ಲದೆ ಮುಂಬೈ ಪೊಲೀಸರ ಪ್ರಕಾರ, ಆರೋಪಿಗಳು ವಿಮಾನದಲ್ಲಿ ಗೊಂದಲವನ್ನು ಸೃಷ್ಟಿಸಿ ಎಲ್ಲರ ಪ್ರಾಣಕ್ಕೆ ಅಪಾಯವನ್ನುಂಟು ಮಾಡಿದರು ಎಂದು ಹೇಳಿತ್ತು.











Click it and Unblock the Notifications