ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು, ಏಪ್ರಿಲ್ 10: ಯಲಚೇನಹಳ್ಳಿ ನಮ್ಮ ಮೆಟ್ರೋ ನಿಲ್ದಾಣದ ಕೇಬಲ್ ನಾಳ(ಡಕ್ಟ್)ದಲ್ಲಿ 65 ವರ್ಷದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಾರುತಿನಗರ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ನಾಗರಾಜ್ ಅವರು ಏಪ್ರಿಲ್ 4 ರಂದು ಕೇಬಲ್ ನಾಳದೊಳಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದರೂ ಈ ಘಟನೆ ಏಪ್ರಿಲ್ 9 ರಂದು ಬೆಳಕಿಗೆ ಬಂದಿದೆ.
ಹೌಸ್‌ಕೀಪಿಂಗ್ ಸಿಬ್ಬಂದಿ ಶುಚಿಗೊಳಿಸುತ್ತಿರುವಾಗ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ ಬಳಿಕ ಬಂದು ಬಾಗಿಲು ತೆರೆದಾಗ ಶವ ಇರುವುದು ಕಂಡು ಬಂದಿದೆ ತಕ್ಷಣ ನಮಗೆ ಮಾಹಿತಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಏಪ್ರಿಲ್ 4 ರಂದು ಸಂಜೆ ನಾಗರಾಜ್ ಮೆಟ್ರೋ ನಿಲ್ದಾಣಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ , ಅದೇ ಸಮಯದಲ್ಲಿ ಅವರು ಇನ್ನೊಬ್ಬ ವ್ಯಕ್ತಿಯೊಂದಿಗೆ ಎಸ್ಕಲೇಟರ್ ಪ್ರವೇಶಿಸಿದ್ದರು.
ನಾಗರಾಜ್ ಅವರ ಕುಟುಂಬ, ಅವರ ಪತ್ನಿ ಸೇರಿದಂತೆ ಇಬ್ಬರೂ ಮದ್ಯವ್ಯಸನಿಗಳು ಹಾಗೂ ಇಬ್ಬರಿಗೂ ಮಧುಮೇಹವಿತ್ತು ಎಂಬುದು ತಿಳಿದುಬಂದಿದೆ. ಹಾಗಾಗಿ ಪ್ರತಿ ಗಂಟೆಗೆ ಎರಡು ಬಾರಿಯಾದರೂ ಮೂತ್ರ ವಿಸರ್ಜಿಸಬೇಕಿತ್ತು, ಅವರು ಕೊಳವೆಯನ್ನು ಶೌಚಾಲಯ ಎಂದು ಭಾವಿಸಿ ಅಲ್ಲಿಗೆ ಹೋಗಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ, ಆದರೆ ಭದ್ರತಾ ಸಿಬ್ಬಂದಿ ಲೋಪದಿಂದಲೇ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.












Click it and Unblock the Notifications