ಬೆಂಗಳೂರಿನಲ್ಲಿ ಇಂಡಿಗೋ ವಿಮಾನದ ಮಹಿಳಾ ಸಿಬ್ಬಂದಿಗೆ ಕಿರುಕುಳ ಕೊಟ್ಟ ಮಾಲ್ಡೀವ್ಸ್ ಪ್ರಜೆ ಬಂಧನ

ಬೆಂಗಳೂರು, ಆಗಸ್ಟ್ 21: ಮಾಲೆಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಾಲ್ಡೀವ್ಸ್ ಪ್ರಜೆಯನ್ನು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಬಂಧಿತ ವ್ಯಕ್ತಿಯನ್ನು 51 ವರ್ಷದ ಅಕ್ರಮ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಂಡಿಗೋ ಉದ್ಯೋಗಿ ನೀಡಿದ ದೂರಿನ ಆಧಾರದ ಮೇಲೆ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

arrested-for-harassing-indigo-flight-crew

ಆಗಸ್ಟ್ 18 ರಂದು ವಿಮಾನ ಸಂಖ್ಯೆ 6E1128 ನಲ್ಲಿ ಮಾಲ್ಡೀವ್ಸ್‌ನ ಮಾಲೆಯಿಂದ ಮಧ್ಯಾಹ್ನ 3:45 ಕ್ಕೆ ಹೊರಟಿತ್ತು. 38ಡಿಯಲ್ಲಿ ಕುಳಿತ ಆರೋಪಿ ಅಹ್ಮದ್‌ ಗಗನಸಖಿಯನ್ನು ಕರೆದು ಬಿಯರ್ ಮತ್ತು ಗೋಡಂಬಿಗೆ ಆರ್ಡರ್ ಮಾಡಿದನು. ನಂತರ ಪ್ರಯಾಣಿಕರು $10 ಬದಲಿಗೆ $100 ಪಾವತಿಸಿದನು ಮತ್ತು ಟಿಪ್ಸ್‌ನ್ನು ಇರಿಸಿಕೊಳ್ಳಲು ಸಿಬ್ಬಂದಿಗೆ ಹೇಳಿದನು. ಬಳಿಕ ಅನುಚಿತವಾಗಿ ಅವಳನ್ನು ಮುಟ್ಟಿದನು ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.

ಬಳಿಕ ವಿಮಾನ ಮತ್ತೊಬ್ಬ ಸಿಬ್ಬಂದಿ ಹಣ ವಸೂಲಿ ಮಾಡಲು ಬಂದಾಗ ಆರೋಪಿ ಪ್ಯಾಂಟ್ ಜೇಬಿಗೆ ಕೈ ಹಾಕಿ ಅಶ್ಲೀಲ ಸನ್ನೆ ಮಾಡಿದ್ದಾನೆ ಎನ್ನಲಾಗಿದೆ. "ನಾನು ನಿಮ್ಮಂತಹ ಹುಡುಗಿಯನ್ನು ಹುಡುಕುತ್ತಿದ್ದೇನೆ, ನೀವು ಸೇವೆಗೆ ಎಷ್ಟು ಶುಲ್ಕ ವಿಧಿಸುತ್ತೀರಿ ಮತ್ತು ನೀವು ಯಾವಾಗ ಫ್ರೀ ಆಗುತ್ತೀರಿ. 51 ವರ್ಷಗಳಿಂದ ನಿನ್ನಂತಹ ಹುಡುಗಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಆರೋಪಿ ಸಿಬ್ಬಂದಿಗೆ ಹೇಳಿದನು.

ಫ್ಲೈಟ್ ಲ್ಯಾಂಡಿಂಗ್ ಆಗುವಾಗ ಅಕ್ರಮ್‌ ಅಹ್ಮದ್‌ ತನ್ನ ಸೀಟಿನಿಂದ ಎದ್ದು, ಗಗನಸಖಿಯೊಬ್ಬರನ್ನು ಕುಳಿತುಕೊಳ್ಳಲು ಹೇಳಿದರು. ಅಲ್ಲದೆ ಅನುಚಿತವಾಗಿ ನಾನು ಒರಟು ವಿಷಯಗಳನ್ನು ಪ್ರೀತಿಸುತ್ತೇನೆ ಮತ್ತು ನೀವು ತುಂಬಾ ಒರಟಾಗಿದ್ದೀರಿ ಆಕೆಗೆ ಹೇಳಿದನು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಆಧಾರದ ಮೇಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಿಂದ ಅಕ್ರಮ್ ನನ್ನು ಬಂಧಿಸಲಾಗಿದೆ. ಆರೋಪಿ ಅಕ್ರಮ್ ವ್ಯಾಪಾರ ವೀಸಾದ ಮೇಲೆ ನಗರಕ್ಕೆ ಬಂದಿದ್ದನು ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಲಕ್ಷ್ಮಿ ಪ್ರಸಾದ್ ಬಂಧನವನ್ನು ಖಚಿತಪಡಿಸಿದ್ದಾರೆ.

"ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಾಲ್ಡೀವ್ಸ್ ಪ್ರಜೆಯೊಬ್ಬರು ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ಅನುಚಿತವಾಗಿ ಸ್ಪರ್ಶಿಸಿದರು. ವಿಮಾನ ಲ್ಯಾಂಡ್ ಆದ ನಂತರ ನಾವು ಅವನನ್ನು ಬಂಧಿಸಿದೆವು. ಅವರು ಭಾರತಕ್ಕೆ ವ್ಯಾಪಾರ ಪ್ರವಾಸದಲ್ಲಿದ್ದರು "ಎಂದು ಡಿಸಿಪಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+