ಭಾರತದ ಎದುರು ಸೋತ ಮಾಲ್ಡೀವ್ಸ್: ಪ್ರಧಾನಿ ಮೋದಿಗೆ ಮಾಲ್ಡೀವ್ಸ್ ಅಧ್ಯಕ್ಷನ ಸಲಾಂ!
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಯಕ್ಕಾಗಿ ಇಡೀ ಜಗತ್ತು ಕಾದು ಕುಳಿತಿತ್ತು. ಹೀಗೆ ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಜಗತ್ತು ಕಾದು ಕುಳಿತಿರುವ ಸಮಯದಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಕೂಡ ಸೊಕ್ಕು ಕರಗಿಸಿಕೊಂಡು ಭಾರತಕ್ಕೆ ಬಂದಿದ್ದಾರೆ, ಯಾಕೆ ಗೊತ್ತಾ? ಮುಂದೆ ಓದಿ!
ಭಾರತ ವಿರೋಧಿ ಮಾಲ್ಡೀವ್ಸ್ ಬೀದಿಗೆ ಬಿದ್ದು ನರಳಾಡುತ್ತಿದೆ. ಭಾರತವನ್ನು ಇದೇ ಮಾಲ್ಡೀವ್ಸ್ ಎದುರು ಹಾಕಿಕೊಂಡ ನಂತರ, ಆ ದೇಶಕ್ಕೆ ಹೋಗುತ್ತಿದ್ದ ಭಾರತೀಯರ ಸಂಖ್ಯೆ ಕೂಡ ಭರ್ಜರಿ ಕುಸಿತ ಕಂಡಿದೆ. ಹೀಗೆ, ಭಾರತೀಯರ ಕಾಲು ಹಿಡಿದು ಪ್ರವಾಸೋದ್ಯಮ ಉಳಿಸಲು ಮಾಲ್ಡೀವ್ಸ್ ಅಧ್ಯಕ್ಷರು ಮುಂದೆ ಬಂದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಇದೀಗ ಮಾಲ್ಡೀವ್ಸ್ ಅಧ್ಯಕ್ಷರು ಭಾರತಕ್ಕೆ ಬಂದಿದ್ದಾರೆ, ಅದರಲ್ಲೂ ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸ್ವೀಕಾರದ ಸಮಾರಂಭಕ್ಕೆ ಬಂದು ಭಾರತಕ್ಕೆ ಸಲಾಂ ಹೇಳಿದ್ದಾರೆ!

3ನೇ ಬಾರಿಗೆ ಪ್ರಮಾಣವಚನ!
ಈಶ್ವರನ ಮೇಲೆ ಪ್ರಮಾಣ ಮಾಡಿ ಪ್ರಧಾನಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಮೊದಲನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದರು ಪ್ರಧಾನಿ ಮೋದಿ. ಇದೀಗ 2024ರ ಲೋಕಸಭೆಯ ಚುನಾವಣೆ ವೇಳೆ ಕೂಡ ಎನ್‌ಡಿಎ ಜೊತೆಗೂಡಿ ಪ್ರಧಾನಿ ಮೋದಿ ಅವರು ಸರ್ಕಾರ ರಚನೆ ಮಾಡಿದ್ದು, ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಯದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಕೂಡ ಹಾಜರಿದ್ದು, ಮೊಹಮ್ಮದ್ ಮುಯಿಝ ಅವರು ಪ್ರಧಾನಿ ಮೋದಿ ಅವರಿಗೆ ಸಲಾಂ ಹೇಳಿದ್ದಾರೆ
ಮಾಲ್ಡೀವ್ಸ್ ಮಾಡಿತ್ತು ಎಡವಟ್ಟು!
ಉಗುರಲ್ಲಿ ಹೋಗೋದಕ್ಕೆ, ಕೊಡಲಿ ತಗೊಂಡ್ರಂತೆ ಅನ್ನೋ ಮಾತು ಮಾಲ್ಡೀವ್ಸ್‌ಗೆ ಸೂಕ್ತವಾಗಿ ಅನ್ವಯ ಆಗುತ್ತೆ. ಸಣ್ಣ ವಿಚಾರ ಮಾಲ್ಡೀವ್ಸ್ ಕೆದಕಿ ಕೆದಕಿ ದೊಡ್ಡದಾಗಿ ಮಾಡುತ್ತಿತ್ತು. ಹಾಗೇ ಮಾಲ್ಡೀವ್ಸ್ ಮಾಡುತ್ತಿರುವ ಈ ಕಿತಾಪತಿಯು ಭಾರತ & ಮಾಲ್ಡೀವ್ಸ್‌ನ ಸಂಬಂಧ ಕೂಡ ಹಾಳು ಮಾಡುತ್ತಿತ್ತು. ಹೀಗಿದ್ದಾಗ ಸುಮ್ಮನೆ ಇರದ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುತ್ತಿದ್ದರು.
ಹೀಗಿದ್ದಾಗ ಭಾರತ ಮೂಲದ ಪ್ರವಾಸಿಗರು ಮಾಲ್ಡೀವ್ಸ್ ದೇಶಕ್ಕೆ ಆಘಾತ ನೀಡಿದ್ರು. ಮಾಲ್ಡೀವ್ಸ್ ಪ್ರವಾಸೋದ್ಯಮ ಕುಸಿತು ಬೀಳುವಂತೆ ಮಾಡಿದ್ದಾರೆ. ಹೀಗಾಗಿ ಇದೀಗ ಮಾಲ್ಡೀವ್ಸ್ ಭಾರತದ ಎದುರು ತಲೆಬಾಗಲು ಬಂದಿದೆ ಅಂತಿದ್ದಾರೆ ಭಾರತೀಯರು. ಇದರ ಜೊತೆಗೆ ಇದೀಗ ನೇರ, ಮಾಲ್ಡೀವ್ಸ್ ಅಧ್ಯಕ್ಷರೇ ಭಾರತಕ್ಕೆ ಬಂದು ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.












Click it and Unblock the Notifications