ಬಾಂಗ್ಲಾ ಯುವತಿ ಕೇರಳಗೆ ಹೋಗುವ ಮೊದಲೇ ಪೊಲೀಸರಿಗೆ "ಲಾಕ್" ಆಗಿದ್ದಳು!

ಬೆಂಗಳೂರು, ಮೇ. 28: ಇಡೀ ರಾಷ್ಟ್ರದಲ್ಲಿ ಬೆಂಗಳೂರು ಮಾನ ಹರಾಜು ಹಾಕಿದ ಬಾಂಗ್ಲಾ ಯುವತಿಯ ಅತ್ಯಾಚಾರ ಪ್ರಕರಣದ ಕೆಲವು ರೋಚಕ ಸತ್ಯಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾರ್ ಡಾನ್ಸರ್ ಆಗಿದ್ದ 22 ವರ್ಷದ ಸಂತ್ರಸ್ತ ಯುವತಿ ಹೈದರಾಬಾದ್ ನಿಂದ ಕೇರಳ ವರೂ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ! ಇನ್ನೊಂದು ರೋಚಕ ಸಂಗತಿ ಅಂದರೆ ಘಟನೆ ನಡೆದ ದಿನವೇ ಬಾಂಗ್ಲಾದೇಶದ ಸಂತ್ರಸ್ತ ಯುವತಿ ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಸಮಯದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಕೆ. ಆರ್. ಪುರಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಆಕೆಯಿಂಧ 80 ಸಾವಿರ ಹಣ ಪಡದು ಕಳಿಸಿದ್ದ ಸಂಗತಿ ಇದೀಗ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಬಾಂಗ್ಲಾ ಯುವತಿಯ ಅಸಲಿ ಸಂಗತಿ ಇಲ್ಲಿದೆ.

ವೇಶ್ಯಾವಟಿಕೆ ಕಿಂಗ್ ಪಿನ್

ವೇಶ್ಯಾವಟಿಕೆ ಕಿಂಗ್ ಪಿನ್

ಬಾಂಗ್ಲಾ ಮೂಲದ ಯುವತಿ ವಿದೇಶದಲ್ಲಿ ಬಾರ್ ಡಾನ್ಸರ್ ಆಗಿದ್ದಳು. ಆನಂತರ ಆಕೆ ಹೈದರಾಬಾದ್ ಗೆ ಬಂದಿದ್ದಳು. ಅಲ್ಲಿ ಮಸಾಜ್ ಪಾರ್ಲರ್ ಇಟ್ಟುಕೊಂಡಿದ್ದ ಸಂತ್ರಸ್ತ ಯುವತಿ ಹಣಕಾಸಿನ ವಿಚಾರದಲ್ಲಿ ಒಬ್ಬನ ಜತೆ ಗಲಾಟೆ ಮಾಡಿಕೊಂಡಿದ್ದಳು. ಆತನ ಮೇಲೆ ವೇಶ್ಯಾವಟಿಕೆ ಆರೋಪದಡಿ ಕೇಸು ದಾಖಲಿಸಿ ಬಂಧಿಸಿದ್ದಳು. ಆನಂತರ ಆಕೆ ಬೆಂಗಳೂರಿನಲ್ಲಿ ಕೂಡ ವೇಶ್ಯವಾಟಿಕೆ ಜಾಲದ ಸಂಪರ್ಕ ಸಾಧಿಸಿದ್ದಳು. ಕೇರಳದ ಕ್ಯಾಲಿಕಟ್ ನಲ್ಲೂ ಸಹ ಮಸಾಜ್ ಪಾರ್ಲರ್ ತೆಗೆದಿದ್ದಳು. ಬೆಂಗಳೂರಿನಲ್ಲಿದ್ದ ಮೂವರು ಯುವತಿಯರನ್ನು ಕೇರಳದ ಕ್ಯಾಲಿಕಟ್ ಗೆ ಕರೆದುಕೊಂಡು ಹೋಗಿದ್ದಳು. ಕೇರಳದಲ್ಲೂ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯವಾಟಿಕೆ ಮಾಡುತ್ತಿದ್ದಳು ಎಂಬ ಸಂಗತಿ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

ವೇಶ್ಯಾವಾಟಿಕೆ ಸಹಕಾರಕ್ಕಾಗಿ ಕರೆಸಿದ್ದಳು

ವೇಶ್ಯಾವಾಟಿಕೆ ಸಹಕಾರಕ್ಕಾಗಿ ಕರೆಸಿದ್ದಳು

ಅಮಾನುಷವಾಗಿ ಸಂತ್ರಸ್ತ ಯುವತಿ ಮೇಲೆ ಎರಗಿರುವ ವಿಕೃತ ಮೃಗಗಳನ್ನು ಬಾಂಗ್ಲಾದಿಂದ ಸಂತ್ರಸ್ತ ಯುವತಿಯೇ ಕರೆಸಿದ್ದಳು. ಭಾರತಕ್ಕೆ ಬಂದಿದ್ದ ಅವರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಳು. ನಕಲಿ ಆಧಾರ್ ಕಾರ್ಡ್ ನಿಂದಲಾಗಿ ಇಲ್ಲಿನ ವಾಸಿಗಳಂತೆ ಬಿಂಬಿಸಿಕೊಂಡಿದ್ದರು. ಯುವಕರಿಗೆ ಹಣ ನೀಡದೇ ಸತಾಯಿಸುತ್ತಿದ್ದಳು, ಹೊಸದಾಗಿ ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನು ಕರೆತರುವಂತೆ ಒತ್ತಾಯಿಸಿದ್ದಳು. ಇದೇ ಹಣಕಾಸಿನ ವಿಚಾರವಾಗಿ ಯುವತಿಯನ್ನು ರಾಮಮೂರ್ತಿನಗರದ ಮನೆಗೆ ಮಾತನಾಡಲು ಕರೆಸಿದ್ದಾರೆ. ಆರಂಭದಲ್ಲಿ ಮದ್ಯಪಾನ ಮಾಡಿ ಮಾತನಾಡಿದ್ದಾರೆ. ಆನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಬಾಂಗ್ಲಾ ಯುವತಿಗೆ ವಿಕೃತ ರೀತಿಯ ಚಿತ್ರಹಿಂಸೆ ನೀಡಿದ್ದಾರೆ.

ವಿಕೃತ ವಿಡಿಯೋ ಚಿತ್ರೀಕರಣ

ವಿಕೃತ ವಿಡಿಯೋ ಚಿತ್ರೀಕರಣ

ಕಳೆದ ಮೇ 19 ರಂದು ಹೈದರಾಬಾದ್ ನಿಂದ ಬಂದಿದ್ದ ಸಂತ್ರಸ್ತ ಯುವತಿಯನ್ನು ಹಣ ನೀಡುವಂತೆ ಬಂಧಿತ ಆರೋಪಿಗಳು ಕೇಳಿದ್ದರು. ಹಣಕಾಸಿನ ವಿಚಾರವಾಗಿ ಚರ್ಚಿಸಲು ರಾಮಮೂರ್ತಿನಗರದ ಮನೆಯಲ್ಲಿ ಸೇರಿದ್ದರು. ಮೊದಲು ಎಣ್ಣೆ ಹೊಡೆದು ಪಾರ್ಟಿ ಮಾಡಿದ್ದ ಗ್ಯಾಂಗ್ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಆನಂತರ ವಿಕೃತವಾಗಿ ನಡೆದಕೊಂಡು ವಿಡಿಯೋ ಮಾಡಿ ಹೈದರಾಬಾದ್ ನಲ್ಲಿರುವ ಯುವಕನೊಬ್ಬನಿಗೆ ರವಾನಿಸಿದ್ದಾರೆ. ಇದೇ ವಿಡಿಯೋ ತೋರಿಸಿ ನಿಮ್ಮ ವಿರುದ್ಧ ಕೇಸು ಮಾಡಿಸುವುದಾಗಿ ಆರೋಪಿಗಳಿಗೆ ಹೆದರಿಸಿದ್ದಾರೆ. ಹಣ ಕೊಡದಿದ್ದರೆ ಕೇಸ್ ಮಾಡಿಸುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಸಂತ್ರಸ್ತ ಯುವತಿಗೆ ಏಳು ಲಕ್ಷ ರೂ. ಹಣ ಕೊಟ್ಟು ಇತ್ಯರ್ಥ ಮಾಡಿಕೊಂಡಿದ್ದಳು ಎಂದು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾರತಹಳ್ಳಿ ಬಾಂಗ್ಲಾ ಕಾಲೋನಿ ಯುವಕರಿಂದ ಹಲ್ಲೆ

ಮಾರತಹಳ್ಳಿ ಬಾಂಗ್ಲಾ ಕಾಲೋನಿ ಯುವಕರಿಂದ ಹಲ್ಲೆ

ಬಾಂಗ್ಲಾ ಯುವತಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಅಷ್ಟೊತ್ತಿಗಾಗಲೇ ನಾನಾ ಕಡೆ ತಲುಪಿದೆ. ಮಾರತಹಳ್ಳಿಯಲ್ಲಿರುವ ಬಾಂಗ್ಲಾ ಕಾಲೋನಿ ಯುವಕರಿಗೆ ವಿಡಿಯೋ ತಲಪಿದೆ. ಆರೋಪಿತರನ್ನು ಹುಡುಕಿ ನಲವತ್ತು ಯುವಕರು ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಆರೋಪಿಗಳ ಕೈಕಾಲಿಗೆ ಗಾಯಗಳಾಗಿವೆ. ಬಳಿಕ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಗಲಾಟೆ ಬಗ್ಗೆ ತಿಳಿಸಿದ್ದಾರೆ. ಪೊಲೀಸರು ಕೆಲವರನ್ನು ವಶಕ್ಕೆ ಪಡೆಯುವ ವೇಳೆಗೆ ಪ್ರಮುಖ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರು ಸುಮ್ಮನಾಗಿದ್ದಾರೆ

ಸಂತ್ರಸ್ತ ಯುವತಿಯಿಂದ 80 ಸಾವಿರ ವಸೂಲಿ

ಸಂತ್ರಸ್ತ ಯುವತಿಯಿಂದ 80 ಸಾವಿರ ವಸೂಲಿ

ಗಲಾಟೆ ಬಳಿಕ ಬೆಂಗಳೂರು ಖಾಲಿ ಮಾಡಲು ನಿರ್ಧರಿಸಿರುವ ಸಂತ್ರಸ್ತ ಯುವತಿ ಯುವಕನ ಜತೆ ರೈಲಿನ ಮೂಲಕ ಕೇರಳಕ್ಕೆ ಹೋಗಲು ಯತ್ನಿಸಿದ್ದಾಳೆ. ಲಾಕ್ ಡೌನ್ ನಿಯಮ ಹಿನ್ನೆಲೆಯಲ್ಲಿ ಕೆ.ಆರ್. ಪುರಂ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಪಿಎಸ್ಐಗಳು ಸಂತ್ರಸ್ತ ಯುವತಿ ಹಾಗೂ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೂರಿಸಿದ್ದಾರೆ. ವಿಚಾರಣೆ ಮಾಡಿದಾಗ ನಾವು ಗಲಾಟೆ ಮಾಡಿಕೊಂಡಿದ್ದು, ನಮ್ಮ ಸ್ನೇಹಿತ ಕೇರಳದ ಕ್ಯಾಲಿಕಟ್ ನಲ್ಲಿರುವುದಾಗಿ ತಿಳಿಸಿದ್ದಾಳೆ. ವೇಶ್ಯಾವಾಟಿಕೆ ದಂಧೆ ಮಾಡುವ ಬಗ್ಗೆ ಮಾಹಿತಿ ಕೆದಕಿದ ಕೆ.ಆರ್‌. ಪುರಂ ಪೊಲೀಸರು 80 ಸಾವಿರ ರೂ. ಹಣ ಸಿಕ್ಕಿದೆ. ಸಂತ್ರಸ್ತ ಯುವತಿಯ ಮೊಬೈಲ್ ಹಾಗೂ ಯುವಕನ ಮೊಬೈಲ್ ನಲ್ಲಿ ಗಲಾಟೆಯ ವಿಡಿಯೋ ಕೂಡ ಪೊಲೀಸರು ನೋಡಿದ್ದಾರೆ. ಆದರೆ, ಅವರಿಗೆ ಅದ್ಯಾವುದು ಮಹತ್ವ ಅನ್ನಿಸಿರಲಿಲ್ಲ. ಹಣ ಪಡೆದು ಬಿಟ್ಟು ಕಳಿಸಿದ್ದಾರೆ. ಹೀಗಾಗಿ ಬೆಂಗೂರಿನಲ್ಲಿ ವಿಕೃತರ ಚಿತ್ರಹಿಂಸೆಗೆ ಒಳಗಾದ ಯುವತಿ ಕೇರಳದ ಕ್ಯಾಲಿಕಟ್ ಗೆ ತಲುಪಿದ್ದಾಳೆ. ಇದೀಗ ಕೆ.ಆರ್. ಪುರಂ ಪೊಲೀಸ್ ಠಾಣೆಯ ಇಬ್ಬರು ಪಿಎಸ್ಐಗಳನ್ನು ವಿಚಾರಣೆಗೆ ಒಳಪಡಿಸಲು ರಾಮಮೂರ್ತಿನಗರ ಪೊಲೀಸರು ಮುಂದಾಗಿದ್ದಾರೆ.

ಮತ್ತೊಬ್ಬ ಯುವತಿಗೆ ಚಿತ್ರಹಿಂಸೆ ವಿಡಿಯೋ ಬಿಡುಗಡೆ

ಮತ್ತೊಬ್ಬ ಯುವತಿಗೆ ಚಿತ್ರಹಿಂಸೆ ವಿಡಿಯೋ ಬಿಡುಗಡೆ

ಯುವತಿಯೊಬ್ಬಳನ್ನು ವೇಶ್ಯಾವಾಟಿಕೆಗೆ ತಳ್ಳಲು ಎಂಟು ಮಂದಿ ವಿಕೃತರು ಸತತ ಒಂದು ಗಂಟೆ ಕಾಲ ಹಿಂಸೆ ನೀಡಿರುವ ವಿಡಿಯೋ ತುಣುಕು ಬಹಿರಂಗವಾಗಿದೆ. ಎಂಟು ಮಂದಿ ಬಾಂಗ್ಲಾ ನಿವಾಸಿಗಳು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ಹಲ್ಲೆ ನಡೆಸಿದ್ದಾರೆ. ವೇಶ್ಯಾವಾಟಿಕೆ ವೃತ್ತಿಗೆ ಒಳಗಾಗದಿದ್ದರೆ ಹೀಗೇ ಹಿಂಸೆ ನೀಡುವುದಾಗಿ ಹೆದರಿಸಿದ್ದಾರೆ. ತದನಂತರದಲ್ಲಿ ಹಲ್ಲೆಗೆ ಒಳಗಾದ ಯುವತಿ ಕೇರಳಗೆ ತೆರಳಿದ್ದಾಳೆ. ಆರೋಪಿಗಳ ಹೇಳಿಕೆ ಆಧಾರದ ಮೇಲೆ ಆ ಯುವತಿಯನ್ನು ಕೂಡ ಕರೆ ತರಲಾಗುತ್ತಿದೆ. ಸಂಜೆಯೊಳಗೆ ಕೇರಳದಿಂದ ಸಂತ್ರಸ್ತ ಯುವತಿಯನ್ನು ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.

Recommended Video

    ಕೊರೊನಾದಿಂದ ಮೃತಪಟ್ಟ ವ್ಯಕ್ತಿಯಿದ್ದ ಆಂಬುಲೆನ್ಸ್ ಚಾಲನೆ ಮಾಡಿದ Renukacharya | Oneindia Kannada
    ಡಿಸಿಪಿ ಕಾರ್ಯಕ್ಕೆ ಶ್ಲಾಘನೆ

    ಡಿಸಿಪಿ ಕಾರ್ಯಕ್ಕೆ ಶ್ಲಾಘನೆ

    ಇನ್ನು ದೆಹಲಿಯ ಸಾಮಾಜಿಕ ಜಾಲ ತಾಣದ ಮೂಲಕ ವೈರಲ್ ಆಗಿದ್ದ ವಿಡಿಯೋ ತುಣುಕು ಆಧರಿಸಿ ಒಂದೇ ದಿನದಲ್ಲಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ. ಪೂರ್ವ ವಿಭಾಗದ ಡಿಸಿಪಿ ಎಸ್. ಡಿ. ಶರಣಪ್ಪ ಮಾರ್ಗದರ್ಶನದಿಂದ ಒಂದೇ ದಿನದಲ್ಲಿ ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಲಾಗಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದು, ಇದೀಗ ಸಂತ್ರಸ್ತ ಯುವತಿಯನ್ನು ಕರೆ ತರಲಾಗುತ್ತಿದೆ. ಕೆ.ಆರ್. ಪುರ ಪೊಲೀಸರು ಹಣದಾಸೆಗೆ ಬೀಳದೇ ಎಚ್ಚೆತ್ತುಕೊಂಡಿದ್ದರೆ, ಇಡೀ ಪ್ರಕರಣಕ್ಕೆ ಮೊದಲೇ ತಾರ್ಕಿಕ ಅಂತ್ಯ ನೀಡುವ ಅವಕಾಶವಿತ್ತು. ಅದನ್ನು ಹಣಕ್ಕಾಗಿ ಬಳಸಿಕೊಂಡವವರಿಗೆ ಅಮಾನತಿನ ತೂಗುಕತ್ತಿ ನೇತಾಡುತ್ತಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+