ಬೆಂಗಳೂರಿಗೆ ಸೇರ್ಪಡೆ ಮಾಡಲಾಗುವ ಈ ತಾಲ್ಲೂಕುಗಳ ಮೂಲಕ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು
National Highway & Expressways: ಇತ್ತೀಚೆಗಷ್ಟೇ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ಆರು ತಲ್ಲೂಕುಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ, ಮಾಗಡಿ ತಾಲೂಕಿನ ಬಿಡದಿ ತಾಲ್ಲೂಕುಗಳನ್ನು ಸೇರಿಸಿ ಒಂದು ಸೆಕ್ಟರ್ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಹಾಗಾದ್ರೆ, ಈ ಭಾಗಗಳಲ್ಲಿ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳು ಯಾವುವು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳ ಸುತ್ತಮುತ್ತಲಿನ ಪ್ರದೇಶಗಳು ದೊಟ್ಟ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿವೆ. ಅದರಲ್ಲೂ, ಈ ಭಾಗಗಳಲ್ಲಿ ಭೂಮಿ ಹೊಂದಿರುವವರು ಕೊಟ್ಯಾಧಿಪತಿಗಳಾಗುತ್ತಿದ್ದಾರೆ. ಇನ್ನೂ ಬೆಂಗಳೂರಿಗೆ ಸೇರ್ಪಡೆ ಮಾಡಬೇಕೆಂದು ಹೇಳಿರುವ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ, ಮಾಗಡಿ ತಾಲೂಕಿನ ಬಿಡದಿ ತಾಲ್ಲೂಕುಗಳ ಮೇಲೆ ಪ್ರಮುಖ ಹೆದ್ದಾರಿಗಳು ಹಾದುಹೋಗಿವೆ. ಹಾಗಾದ್ರೆ, ಅವುಗಳು ಯಾವುವು ಹಾಗೂ ಪ್ರಯೋಜನೆಗಳೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಹೊಸಕೋಟೆ ಮೂಲಕ ಹಾದುಹೋಗಿರುವ ಹೆದ್ದಾರಿಗಳು
* ಹೊಸಕೋಟೆ ಮೂಲಕ ರಾಷ್ಟ್ರೀಯ ಹೆದ್ದಾರಿ - 48 (NH 48) ಹಾದುಹೋಗಿದೆ. ಇದು ಬೆಂಗಳೂರು-ಚೆನ್ನೈಗೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರಮುಖ ಹೆದ್ದಾರಿಯಾಗಿದೆ. ಇದರಿಂದ ಕೈಗಾರಿಕಾ, ಪ್ರವಾಸೋದ್ಯಮ, ಸಾರಿಗೆ ಕ್ಷೇತ್ರದಲ್ಲಿ ದೊಟ್ಟ ಮಟ್ಟದ ಅಭಿವೃದ್ಧಿಯಾಗಿದೆ.
* NH 75 ಬೆಂಗಳೂರು - ಕೋಲಾರ - ಮುಳಬಾಗಿಲು - ವೆಲ್ಲೂರು ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಇದು ಹೊಸಕೋಟೆ ಮೂಲ ಹಾದುಹೋಗಿದೆ. ಹಳೆ ಬೆಂಗಳೂರು-ಕೋಲಾರ ರಸ್ತೆಯೇ ಈ ಹೆದ್ದಾರಿ.
* NH 648 (ಹಳೆಯ NH 207) ಹೊಸಕೋಟೆ - ದೇವನಹಳ್ಳಿ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದು ಪ್ರಮುಖ ಹೆದ್ದಾರಿಯಾಗಿದೆ. ಈ ಮೂರು ರಾಷ್ಟ್ರೀಯ ಹೆದ್ದಾರಿಗಳಿಂದ ಹೊಸಕೋಟೆ ಒಂದು ಪ್ರಮುಖ ಸಾರಿಗೆ ಜಂಕ್ಷನ್ ಆಗಿ ಅಭಿವೃದ್ಧಿ ಕಾಣುತ್ತಿದೆ.
* ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: NE-7 ಹೊಸಕೋಟೆ ಮೇಲೆ ಹಾದುಹೋಗಲಿದ್ದು, ಇದು ಶ್ರೀಪೆರಂಬದೂರಿನವರೆಗೆ ಸಂಪರ್ಕ ಕಲ್ಪಿಸಲಿದೆ. 262 ಕಿಲೋ ಮೀಟರ್ ಈ ಎಕ್ಸ್‌ಪ್ರೆಸ್‌ವೇ ಅನ್ನು ವಾಹನಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಚಲಿಸುವಂತೆ ನಿರ್ಮಾಣ ಮಾಡಲಾಗಿದೆ. ಇದನ್ನು 17,930 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ಹೊಸಕೋಟೆ-ಕೆಜಿಎಫ್ ನಡುವಿನ 68 ಕಿಲೋ ಮೀಟರ್ ಭಾಗ ಫೆಬ್ರುವರಿ 2025ರಲ್ಲಿ ಸಂಚಾರಕ್ಕೆ ಮುಕ್ತಗೊಂಡಿದ್ದು, ದೈನಂದಿನ 1,600-2,000 ವಾಹನಗಳು ಸಂಚಾರ ಮಾಡುತ್ತಿವೆ. ಇದು ಕರ್ನಾಟಕದ ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ, ಆಧ್ರ ಪ್ರದೇಶದ ಪಲಮನೇರ್, ಚಿತ್ತೂರು ಹಾಗೂ ತಮಿಳುನಾಡಿದ ರಾಣಿಪೇಟೆ, ಶ್ರೀಪೆರಂಬದೂರಿನ ಮೂಲಕ ಹಾದುಹೋಗಲಿದೆ.
ಈಗಾಗಲೇ ಕರ್ನಾಟಕ ಭಾಗದಲ್ಲಿ 71 ಕಿಲೋ ಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ. ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಕಾಮಗಾರಿ ಬಾಕಿ ಇದ್ದು, ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಲಿದೆ. ಮುಂದಿನ ವರ್ಷದ ಜೂನ್ ಅಥವಾ ಜುಲೈನಲ್ಲಿ ಈ ಕಾರ್ಯ ನೆರವೇರಲಿದೆ ಎನ್ನುವ ಮಾಹಿತಿಯಿದೆ.
ನೆಲಮಂಗಲದ ಮೇಲೆ ಹಾದುಹೋಗುವ ಹೆದ್ದಾರಿಗಳು
* ನೆಲಮಂಗಲದ ಮೂಲಕ NH-48 (ಹಳಿಯಾಳ-ಚೆನ್ನೈ ಮಾರ್ಗ, ಹಿಂದಿನ NH-4) ಹಾಗೂ NH-75 (ಬೆಂಗಳೂರು-ಮಂಗಳೂರು ಮಾರ್ಗ) ಹಾದುಹೋಗುತ್ತವೆ. ಇದೀಗ ಇವುಗಳ ವಿಸ್ತರಣೆ ಕಾರ್ಯಗಳು ನಡೆಯುತ್ತಿವೆ.
ನೆಲಮಂಗಲ-ತುಮಕೂರು 44 ಕಿಲೋ ಮೀಟರ್ ಭಾಗವನ್ನು 4-ಲೇನ್‌ನಿಂದ 6-ಲೇನ್ ಮುಖ್ಯ ರಸ್ತೆ ಹಾಗೂ ಎರಡು ಬದಿಗಳಲ್ಲಿ 2-ಲೇನ್ ಸರ್ವೀಸ್ ರೋಡ್‌ಗಳಾಗಿ ವಿಸ್ತರಣೆ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ₹2,032 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, 2027 ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ ಎನ್ನುವ ಮಾಹಿತಿಯಿದೆ.
ಈ ಹೆದ್ದಾರಿ ಉದ್ಯಮ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೊಟ್ಟ ಮಟ್ಟದ ಅಭಿವೃದ್ಧಿ ಕ್ರಾಂತಿಗಳೇ ಆಗಿವೆ ಮತ್ತು ಉತ್ತರ ಕರ್ನಾಟಕದ ಸಂಪರ್ಕ ಸೇತುವೆಯೂ ಆಗಿವೆ ಅಂದ್ರೆ ತಪ್ಪಾಗಲಾರದು. ಇದು ಬೆಂಗಳೂರಿನಿಂದ ಪುಣೆವರೆಗೆ ಸಂಕರ್ಕ ಕಲ್ಪಿಸುತ್ತದೆ.
* NH 75: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಳದ ಮೇಲೆ ಹಾದುಹೋಗಿದೆ. ಇದು ಶಿರಾಡಿ, ಧರ್ಮಸ್ಥಳ, ಹಾಸನ, ಮಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಪ್ರಮುಖ ಹೆದ್ದಾರಿಗೆಯಾಗಿದೆ. ಮಂಗಳೂರು - ಹಾಸನ - ಕುಣಿಗಲ್ - ನೆಲಮಂಗಲ - ಕೋಲಾರ - ವೆಲ್ಲೂರು ಮಾರ್ಗದಲ್ಲಿ ಹಾದುಹೋಗುತ್ತದೆ. ಇದೇ ಕಾರಣಗಳಿಂದ ನೆಲಮಂಗಲ ರಾಜ್ಯದ ಅತ್ಯಂತ ಪ್ರಮುಖ ರಸ್ತೆ ಸಾರಿಗೆ ಹಬ್‌ಗಳಲ್ಲಿ ಒಂದಾಗಿದೆ.
ದೊಡ್ಡಬಳ್ಳಾಪುರದ ಮೇಲೆ ಹಾದುಹೋಗುವ ಹೆದ್ದಾರಿಗಳು
* ರಾಷ್ಟ್ರೀಯ ಹೆದ್ದಾರಿ-648 (ಹಳೆಯ NH 207) ಇದು ದೊಡ್ಡಬಳ್ಳಾಪುರ - ದೇವನಹಳ್ಳಿ - ಹೊಸಕೋಟೆ ಮಾರ್ಗದಲ್ಲಿ ಹಾದುಹೋಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೊಸಕೋಟೆಗೂ ಇದು ಸಂಪರ್ಕ ಕಲ್ಪಿಸುತ್ತದೆ. ಒಟ್ಟಿನಲ್ಲಿ, NH 648 ಹಾಗೂ STRR ಇರುವ ಕಾರಣದಿಂದ ದೊಡ್ಡಬಳ್ಳಾಪುರ ಒಂದು ಪ್ರಮುಖ ಸಾರಿಗೆ ಹಬ್ ಆಗಿ ಬೆಳೆಯುತ್ತಿದೆ.
ರಾಮನಗರದ ಮೇಲೆ ಹಾದುಹೋಗುವ ಹೆದ್ದಾರಿಗಳು
* ರಾಷ್ಟ್ರೀಯ ಹೆದ್ದಾರಿ-275 ಬೆಂಗಳೂರು - ರಾಮನಗರ - ಚನ್ನಪಟ್ಟಣ - ಮಂಡ್ಯ - ಮೈಸೂರು ಮಾರ್ಗದ ಮೂಲಕ ಹಾದು ಹೋಗುತ್ತದೆ. ದೈನಂದಿನ ಸಂಚಾರ, ಪ್ರವಾಸ ಹಾಗೂ ವಾಣಿಜ್ಯೋದ್ಯಮ ದೃಷ್ಟಿಯಿಂದ ಅತ್ಯಂತ ಪ್ರಮುಖ ಹೆದ್ದಾರಿಯಾಗಿದೆ.
* ರಾಷ್ಟ್ರೀಯ ಹೆದ್ದಾರಿ-948 ರಾಮನಗರ - ಕನಕಪುರ - ಸತ್ಯಮಂಗಲಂ - ಕೋಯಮತ್ತೂರು ಮಾರ್ಗದ ಮೂಲಕ ಹಾದು ಹೋಗುತ್ತದೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದ್ದಾಗಿದೆ. ಅರಣ್ಯ ಪ್ರದೇಶಗಳ ಮೂಲಕ ಹಾದು ಹೋಗುವ ಕಾರಣ ನಿಯಂತ್ರಿತ ಸಂಚಾರವಿದೆ.
* ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲೇ ಹಾದು ಹೋಗುತ್ತದೆ. ವೇಗ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಿದೆ. ಈ ಕಾರಣಗಳಿಂದ ರಾಮನಗರ ಬೆಂಗಳೂರು-ಮೈಸೂರು ಕಾರಿಡಾರ್‌ನ ಪ್ರಮುಖ ರಸ್ತೆ ಸಂಪರ್ಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ.
ಬಿಡದಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು
* ರಾಷ್ಟ್ರೀಯ ಹೆದ್ದಾರಿ-275 ಬೆಂಗಳೂರು - ಬಿಡದಿ - ರಾಮನಗರ - ಚನ್ನಪಟ್ಟಣ - ಮಂಡ್ಯ - ಮೈಸೂರು ಮಾರ್ಗದ ಮೂಲಕ ಹಾದುಹೋಗುತ್ತದೆ. ಹಳೆ ಬೆಂಗಳೂರು-ಮೈಸೂರು ರಸ್ತೆಯೇ ಈಗ NH 275 ಆಗಿದೆ ಪರಿವರ್ತನೆಯಾಗಿದೆ.
* ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಕೂಡ ಬಿಡದಿ ಮೂಲಕ ಹಾದುಹೋಗುತ್ತದೆ. ಬಿಡದಿ ಬಳಿ ಇಂಟರ್‌ಚೇಂಜ್ ವ್ಯವಸ್ಥೆಯನ್ನು ಹೊಂದಿದೆ. ಈ ಕಾರಣಗಳಿಂದ ಬಿಡದಿ ಬೆಂಗಳೂರು-ಮೈಸೂರು ಕಾರಿಡಾರ್‌ನ ಪ್ರಮುಖ ಕೈಗಾರಿಕಾ ಹಬ್ ಆಗಿ ಅಭಿವೃದ್ಧಿಯಾಗುತ್ತಿದೆ.












Click it and Unblock the Notifications