ಹೈಸ್ಪೀಡ್ ರೈಲು ಮೋದಿ ಅವರ ಕನಸು: ಡಿವಿಎಸ್
ಉಡುಪಿ/ ಬೆಂಗಳೂರು, ಜೂ.1: ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿ ಆತ್ಮೀಯ ಸ್ವಾಗತ ಸ್ವೀಕರಿಸಿದ ಸದಾನಂದ ಗೌಡರು ಭಾನುವಾರ ಬೆಂಗಳೂರಿಗೆ ಹಿಂತಿರುಗಿದ್ದಾರೆ. ರೈಲ್ವೆ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಇಲಾಖೆಯಲ್ಲಿ ಭಾರಿ ಬದಲಾವಣೆ ತರಲಾಗುವುದು, ಹೈಸ್ಪೀಡ್ ರೈಲು ಪ್ರಧಾನಿ ಮೋದಿ ಅವರ ಕನಸಾಗಿದೆ ಎಂದರು.
ಸುರಕ್ಷತೆ, ಭದ್ರತೆ ಹಾಗೂ ಸೇವೆ ನಮ್ಮ ಸಚಿವಾಲಯದ ಗುರಿಯಾಗಲಿದೆ. ನಾನು ನಿರೀಕ್ಷಿಸದ ಹೊಣೆಗಾರಿಕೆಯನ್ನು ನನ್ನ ಮೇಲೆ ಮೋದಿ ಅವರು ನೀಡಿದ್ದಾರೆ. ಸುಮಾರು 13 ಲಕ್ಷ ಉದ್ಯೋಗಿಗಳಿರುವ ಬೃಹತ್ ಇಲಾಖೆಯನ್ನು ಆಧುನೀಕರಣಗೊಳಿಸುವುದು ನನ್ನ ಗುರಿ. ಹೈಸ್ಪೀಡ್ ರೈಲು, ಬುಲೆಟ್ ಟ್ರೈನ್ ಅಳವಡಿಕೆ ಪ್ರಧಾನಿ ಮೋದಿ ಅವರ ಪ್ರಸ್ತಾವನೆಯಾಗಿದೆ. ಅದರಂತೆ, ಈ ಬಗ್ಗೆ ಅಧ್ಯಯನ ನಡೆಸಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಸಾಕಾರಗೊಳಿಸಲಾಗುವುದು ಎಂದರು.[ಬೆಂಗಳೂರಿಗೆ ಐಐಟಿ, ಏಮ್ಸ್, ಬುಲೆಟ್ ಟ್ರೈನ್]
ಮಂಗಳೂರಿನಿಂದ ಶನಿವಾರ ತಮ್ಮ ಗ್ರಾಮ ಸುಳ್ಯ ತಾಲೂಕಿನ ದೇವಗುಂಡ ತೆರಳಿ ತಾಯಿ ಕಮಲ ಅವರ ಆಶೀರ್ವಾದ ಪಡೆದುಕೊಂಡ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು, ತಾನು ಈ ಮಟ್ಟಕ್ಕೆ ಏರಲು ಆಕೆಯ ಆಶೀರ್ವಾದ ಕೂಡಾ ಪ್ರಮುಖ ಕಾರಣ ಎಂದರು.

ಡಿವಿಎಸ್ ಗೆ ತಾಯಿ ಕಮಲ ಅವರ ಆಶೀರ್ವಾದ
ಮಂಗಳೂರಿನಿಂದ ಶನಿವಾರ ತಮ್ಮ ಗ್ರಾಮ ಸುಳ್ಯ ತಾಲೂಕಿನ ದೇವಗುಂಡ ತೆರಳಿ ತಾಯಿ ಕಮಲ ಅವರ ಆಶೀರ್ವಾದ ಪಡೆದುಕೊಂಡ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು, ತಾನು ಈ ಮಟ್ಟಕ್ಕೆ ಏರಲು ಆಕೆಯ ಆಶೀರ್ವಾದ ಕೂಡಾ ಪ್ರಮುಖ ಕಾರಣ ಎಂದರು.

ರೈಲು ಪ್ರಯಾಣ ದರ ಏರಿಕೆ ಸುಳಿವು
ರೈಲು ಪ್ರಯಾಣ ದರ ಏರಿಕೆ ಸುಳಿವು ನೀಡಿದ ಸದಾನಂದ ಗೌಡರು, ಸಂಪನ್ಮೂಲ ಕ್ರೋಡೀಕರಣ, ಅತ್ಯಾಧುನಿಕ ಸೇವೆ ಒದಗಿಸಲು ದರ ಏರಿಕೆ ಅನಿವಾರ್ಯ ಎಂದಿದ್ದಾರೆ. ಹಿಂದಿನ ಸರ್ಕಾರ ಶೇ 10 ರಷ್ಟು ಪ್ರಯಾಣ ದರ ಶೇ 5 ರಷ್ಟು ಸರಕು ಸಾಗಾಣಿಕೆ ದರ ಏರಿಕೆಗೆ ನಿರ್ಧರಿಸಿತ್ತು, ಅದನ್ನು ಈಗ ಜಾರಿಗೊಳಿಸಲಾಗುತ್ತಿದೆ ಅಷ್ಟೇ, ಖರ್ಗೆ ಅವರ ಮಧ್ಯಂತರ ಬಜೆಟ್ ನಲ್ಲಿ ತೋರಿಸಲಾದ ಕೊರತೆಯನ್ನು ನೀಗಿಸಬೇಕಿದೆ ಎಂದರು.

ರಾಜ್ಯಕ್ಕೆ ಹೆಚ್ಚಿನ ಅದ್ಯತೆ ನನ್ನ ಕರ್ತವ್ಯ
ರಾಜ್ಯದಿಂದ ಆಯ್ಕೆಯಾದ ಮೇಲೆ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದೆ. ಮುಂಬರುವ ಬಜೆಟ್ ನಲ್ಲಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ಖಂಡಿತ ಸಿಗುತ್ತದೆ. ಆದರೆ, ಮೋದಿ ಅವರ ಆಶಯದಂತೆ ಇಡೀ ದೇಶದ ಸಮಗ್ರತೆ ಕಾಯ್ದುಕೊಳ್ಳುವ ಯೋಜನೆಗಳನ್ನು ನಾವು ನೀಡಬೇಕಿದೆ ಎಂದರು.

ಹೈಸ್ಪೀಡ್ ರೈಲು, ಬುಲೆಟ್ ರೈಲು ಅಗತ್ಯವೇ?
ಹೈಸ್ಪೀಡ್ ರೈಲು, ಬುಲೆಟ್ ರೈಲು ಅಗತ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿ, ಇದು ಮೋದಿ ಅವರ ಕನಸಾಗಿದೆ. ಪ್ರಮುಖ ನಗರಗಳನ್ನು ಸಂಪರ್ಕಿಸಲು ಹೈಸ್ಪೀಡ್ ರೈಲು ಅಗತ್ಯವಿದೆ. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಅಧಿಕಾರಿಗಳ ಜತೆ ಸಾಧಕ-ಬಾಧಕ ಚರ್ಚೆ ನಡೆಸಲಾಗುವುದು, ವಿವಿಧ ವಲಯದ ಅಧಿಕಾರಿಗಳ ಪ್ರಸ್ತಾವನೆ ಪರಿಶೀಲಿಸಿ ಯೋಜನೆಯ ಬಗ್ಗೆ ಸೂಕ್ತ ಕಾಲದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.












Click it and Unblock the Notifications