• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಿಗೇಹಳ್ಳಿ ಕೆರೆಗೆ ಹೊಸ ಜೀವ ನೀಡಿದ ‘ಶೆಲ್ ಇಂಡಿಯಾ’

|

ಬೆಂಗಳೂರು, ಆಗಸ್ಟ್ 21: ಕಳೆದ 15 ವರ್ಷಗಳಿಂದ ನಗರದ ತೀವ್ರ ನಗರೀಕರಣದ ಪರಿಣಾಮ, ಮಾಲಿನ್ಯ ಹಾಗೂ ತ್ಯಾಜ್ಯದ ಸೇರ್ಪಡೆಯಿಂದ ಅದರ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಕೊಡಿಗೇಹಳ್ಳಿ ಕೆರೆ ಇಂದು ಮುಕ್ತವಾಗಿ ಉಸಿರಾಡುತ್ತಿದ್ದು, ಸುತ್ತ ಹಸಿರಿನಿಂದ ನಳನಳಿಸುತ್ತಿದೆ.

ಎರಡು ವರ್ಷಗಳ ಹಿಂದೆ ಸಂಪೂರ್ಣ ಮಲಿನಗೊಂಡಿದ್ದ ಈ ಕೆರೆ, ನೀರು ಒಳಹರಿವಿನ ಮಾರ್ಗಗಳು ಬಂದ್ ಆಗಿದ್ದರಿಂದ ಸಂಪೂರ್ಣವಾಗಿ ಸಂಪೂರ್ಣ ಬತ್ತುವ ಸ್ಥಿತಿ ತಲುಪಿತ್ತು. ಜೊತೆಗೆ, ಸುತ್ತಮುತ್ತಲಿನ ಮಹಾದೇಶ ಕೋಡಿಗೆಹಳ್ಳಿ, ಕೊತ್ನತೇವರು, ಕೊಂಡೇನಹಳ್ಳಿ, ಮಂಚಪನಹಳ್ಳಿ, ಎಂ. ಹೊಸಹಳ್ಳಿ, ಮರಳಕುಂಟೆ ಹಾಗೂ ಯಡಿಯೂರು ಗ್ರಾಮಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

ವಿಶೇಷ: ಕೃಷಿಕರಿಗೆ, ನಾಗರಿಕರಿಗೆ ಜಲತಜ್ಞ ದೇವರಾಜ್ ಕೊಟ್ಟ ಎಚ್ಚರಿಕೆ

ನಗರದ ಉಳಿವಿಗಾಗಿ ಅತಿ ಅಗತ್ಯವಾಗಿರುವ ಕೆರೆಗಳಿಗೆ ಪುನರುಜ್ಜೀವನ ನೀಡಲು ಮುಂದಾಗಿರುವ 'ಶೆಲ್ ' ಸಂಸ್ಥೆ 2017ರ ಮಾರ್ಚ್ ನಿಂದಲೇ ಈ ಕೆರೆಯ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇಂದು ಉತ್ತಮ ಫಲಿತಾಂಶ ಕಾಣುತ್ತಿದೆ.

ಈಗ 600 ಅಡಿಗೆ ನೀರು ಸಿಗುತ್ತಿದೆ

ಈಗ 600 ಅಡಿಗೆ ನೀರು ಸಿಗುತ್ತಿದೆ

ಈಗ ಈ ಕೆರೆ ಸುಮಾರು 620,750 ಗ್ಯಾಲನ್ ನಷ್ಟು ನೀರು ಸಂಗ್ರಹ ಯೋಗ್ಯವಾಗಿದೆ, ಈ ಮುಂಚೆ ಈ ಪ್ರದೇಶದಲ್ಲಿ 1,300 ಅಡಿ ಆಳಕೆ ಕೊರೆದು ನೀರು ಪಡೆಯಬೇಕಿತ್ತು. ಈಗ 600 ಅಡಿಗೆ ನೀರು ಸಿಗುತ್ತಿದೆ, ಕೆರೆ ಆಶ್ರಯಿಸಿದ್ದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬತ್ತ ಬೆಳೆಯುವ ಸಂಖ್ಯೆ ಅಧಿಕವಾಗಿದೆ ಎಂದು ಸಂಸ್ಥೆ ಹೇಳಿದೆ.

ಬೆಂಗಳೂರು ಕೆರೆಗಳಿಗೆ ಮರುಜೀವ ನೀಡಲು ಹೊರಟ ಟೆಕ್ಕಿ

ಮೂರನೇ ಎರಡರಷ್ಟು ನೀರು ಸಂಗ್ರಹದ ಗುರಿ

ಮೂರನೇ ಎರಡರಷ್ಟು ನೀರು ಸಂಗ್ರಹದ ಗುರಿ

ಇದು ಕರೆಯ ಹೂಳು ತೆಗೆಯುವುದು, ಒಳಹರಿವಿನ ಕಾಲುವೆಗಳ ಅಗಲೀಕರಣ, ಕೆರೆಗಳಿಗೆ ಮತ್ತೆ ಹೂಳು ಸೇರದಂತೆ ತಡೆಯಲು ಮಳೆ ನೀರು ಸಂಗ್ರಹಣಾ ಹೊಂಡಗಳ ನಿರ್ಮಾಣ, ಎರಡು ವರ್ಷಗಳಲ್ಲಿ ಕೆರೆಯ ಸಾರ್ಮರ್ಥ್ಯದ ಮೂರನೇ ಎರಡರಷ್ಟು ನೀರು ಸಂಗ್ರಹದ ಗುರಿಗಳನ್ನು ಒಳಗೊಂಡಿದೆ. ಇದು ಸ್ಥಳೀಯ ಭತ್ತದ ಬೆಳೆ, ಎರಡು ಬೆಳೆಗಳು ಹಾಗೂ ಜಾನುವಾರುಗಳಿಗೆ ನೀರಿನ ಪೂರೈಕೆಗೆ ಅನುಕೂಲ ಕಲ್ಪಿಸಿದೆ.

ಚೆನ್ನೈನಲ್ಲಿ 'ನೀರಿಗಾಗಿ ಯುದ್ಧ' ಬಿಸಿಲಿನ ಬೇಗೆ, ಆತಂಕದಲ್ಲಿ ಜನತೆ

ಶೆಲ್ ಸಂಸ್ಥೆಯ ಸಾಮಾಜಿಕ ಹಾಗೂ ಪರಿಸರ ಸುಸ್ಥಿರತೆ

ಶೆಲ್ ಸಂಸ್ಥೆಯ ಸಾಮಾಜಿಕ ಹಾಗೂ ಪರಿಸರ ಸುಸ್ಥಿರತೆ

ಈ ಯೋಜನೆ ಶೆಲ್ ಸಂಸ್ಥೆಯ ಸಾಮಾಜಿಕ ಹಾಗೂ ಪರಿಸರ ಸುಸ್ಥಿರತೆ ಕಾಪಾಡುವ ನಿಟ್ಟಿನ ಬದ್ಧತೆಗೆ ಸಾಕ್ಷಿಯಾಗಿದೆ. ಈ ಕಂಪನಿ ಬೆಂಗಳೂರಿನಲ್ಲಿ ನೆಲೆಸಿರುವ ಆರ್ ಆ್ಯಂಡ್ ಡಿ ಹಬ್ ಹಾಗೂ ಪ್ರಮುಖ ತಂತ್ರಜ್ಞಾನಗಳನ್ನೊಳಗೊಂಡ ಶೆಲ್ ತಂತ್ರಜ್ಞಾನ ಸೆಲ್ ಮೂಲಕ ನಗರದ ಸಮುದಾಯದ ಬೆಳವಣಿಗೆಗೆ ನಿರಂತರ ಕೊಡುಗೆ ನೀಡುತ್ತಿದೆ.

ತುಂಗಾ ಭದ್ರಾ ನೀರಿಗೆ ಕೈ ಹಾಕಿದ್ರೆ ರಕ್ತಪಾತವಾದೀತು ಎಚ್ಚರ!

ಕೆರೆಗಳ ಪುನರುಜ್ಜೀವನ ಚಟುವಟಿಕೆಗಳ ಕುರಿತು

ಕೆರೆಗಳ ಪುನರುಜ್ಜೀವನ ಚಟುವಟಿಕೆಗಳ ಕುರಿತು

ಕೆರೆಗಳ ಪುನರುಜ್ಜೀವನ ಚಟುವಟಿಕೆಗಳ ಕುರಿತು ಮಾತನಾಡಿದ ಬೆಂಗಳೂರಿನ ಶೆಲ್ ಟೆಕ್ನಾಲಜಿ ಸೆಂಟರ್ ನ (ಎಸ್ ಟಿಸಿಬಿ) ಮುಖ್ಯಸ್ಥ ಸದಾ ಐಯ್ಯರ್, ಶೆಲ್ ಕಂಪನಿಯಲ್ಲಿ, "ನಾವು ಜಾಗತಿಕ ಮಟ್ಟದ ಸುಸ್ತಿರತೆಯನ್ನು ಹೊಂದಿರುವುದಕ್ಕೆ ಹೆಮ್ಮೆಯಿದೆ. ನಾವು ಸುಸ್ಥಿರತೆಯ ಸವಾಲುಗಳನ್ನು ಸ್ವೀಕರಿಸಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮಹತ್ವವನ್ನು ಗುರುತಿಸುತ್ತೇವೆ. ಸಮಾಜಕ್ಕೆ ದೊಡ್ಡ ಮಟ್ಟದ ನೆರವು ನೀಡುವ ಉದ್ದೇಶದಿಂದ 2017ರಲ್ಲಿ ಕೊಡಿಗೇಹಳ್ಳಿ ಕೆರೆಯ ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಕೇವಲ ಎರಡೇ ವರ್ಷಗಳಲ್ಲಿ ಕೆರೆಯ ಅಭಿವೃದ್ಧಿ ನಮ್ಮ ಸಮಗ್ರ ಹಾಗೂ ಪರಿಣಾಮಕಾರಿ ಚಟುವಟಿಕೆಗಿಳಿಗೆ ಸಾಕ್ಷಿಯಾಗಿ ನಿಂತಿದೆ. ನಾವು ನಮ್ಮ ಪ್ರಯತ್ನವನ್ನು ಮುಂದುವರಿಸಲಿದ್ದು, ಎರಡನೇ ಹಂತದಲ್ಲಿ ಈ ಪ್ರದೇಶದಲ್ಲಿ ವಿಸ್ತೃತ ಪುನರುಜ್ಜೀವನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು" ಎಂದರು.

ತ್ರಿವಳಿ ಕೆರೆಗಳ ಸೌಂದರ್ಯಾಭಿವೃದ್ದಿಗೆ ಕ್ರಮ: ರೋಹಿಣಿ ಸಿಂಧೂರಿ

ಎಸ್ ಟಿಸಿಬಿಯ ಸುಮಾರು 393 ಸಿಬ್ಬಂದಿ

ಎಸ್ ಟಿಸಿಬಿಯ ಸುಮಾರು 393 ಸಿಬ್ಬಂದಿ

ಈ ಕೆರೆ 2018ರಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಜೂನ್ 2019ರಲ್ಲಿ ಎಸ್ ಟಿಸಿಬಿಯ ಸುಮಾರು 393 ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಕೆರೆಯ ಸುತ್ತ 1300 ಗಿಡಗಳನ್ನು ನೆಡುವ ಮೂಲಕ ಜೈವಿಕ ಬೇಲಿ ನಿರ್ಮಿಸಿದ್ದಾರೆ. 2019ರ ಮುಂಗಾರು ಪೂರ್ಣಗೊಂಡ ನಂತರ ಕಂಪನಿ ಇಲ್ಲಿನ ಜವಳು ಭೂಮಿಯಲ್ಲಿ ಜೈವಿಕ ಪ್ರದೇಶಗಳನ್ನು ನಿರ್ಮಿಸಲು ಯೋಜಿಸಿದೆ. ಹೆಚ್ಚುವರಿಯಾಗಿ, ಈ ಕೆರೆಯ ನೀರಿನ ಗುಣಮಟ್ಟವನ್ನು ಪರಿಶೀಲಿಸಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ ) , ಅದನ್ನು ಗೃಹ ಬಳಕೆಗೆ ಬಳಸಬಹುದು ಎಂದು ಪ್ರಮಾಣೀಕರಿಸಿದ್ದಾರೆ.

ಬೆಂಗಳೂರಿನ 6 ಕೆರೆಗಳನ್ನು ದತ್ತು ಪಡೆದ ಕಾರ್ಪೊರೇಟ್ ಕಂಪನಿಗಳು

English summary
Mahadeva Kodigehalli Lake restoration by Shell India. This lake provides water to the people of Vidyaranyapura, Kodigehalli and Bommasandra villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more