ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Maha Kumbh Mela : ಅ.13ರಿಂದ ಮಹಾಕುಂಭಮೇಳ: ಲೋಗೋ ಬಿಡುಗಡೆ ಮಾಡಿದ ಬೊಮ್ಮಾಯಿ

|
Google Oneindia Kannada News

ಬೆಂಗಳೂರು,ಅಕ್ಟೋಬರ್ 07: ಕೆ.ಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮಹಾಕುಂಭಮೇಳದ ಲೋಗೋ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ‌ಡಾ.ನಾರಾಯಣಗೌಡ ಅವರು ಬಿಡುಗಡೆಗೊಳಿಸಿದರು.

ಶುಕ್ರವಾರ ಮುಖ್ಯಮಂತ್ರಿಗಳ ರೇಸ್ ಕೋರ್ಸ್ ನಿವಾಸದಲ್ಲಿ ಮಹಾಕುಂಭಮೇಳದ ಲೋಗೋವನ್ನು ಬಿಡುಗಡೆ ಮಾಡುವ ಮೂಲಕ ಬಸವರಾಜ ಬೊಮ್ಮಾಯಿಯವರು ಶುಭ ಕೋರಿದರು.

Maha Kumbh Mela of South india from Oct.13 Basavaraj Bommai released the logo

ಶನಿವಾರ ಜೆಡಿಎಸ್‌ 'ಜನತಾ ಮಿತ್ರ' ಸಮಾರೋಪ: ಎಚ್‌ಡಿಕೆ ಸ್ಥಳ ಪರಿಶೀಲನೆ

ಅಕ್ಟೋಬರ್ 13ರಿಂದ 16 ರವರೆಗೆ ಕೆ.ಆರ್ ಪೇಟೆಯ ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರದ ಕಾವೇರಿ-ಹೇಮಾವತಿ-ಲಕ್ಷ್ಮಣ ತೀರ್ಥಗಳ ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಬಾಮೇಳ ನಡೆಯಲಿದೆ. ಪ್ರತಿದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಕುರಿತು ಗಮನಸೆಳೆಯಲೆಂದು ಮಹಾಕುಂಭಮೇಳದ ವಿಶೇಷ ಲೋಗೋ ಅನ್ನು ಸಿದ್ದಪಡಿಸಲಾಗಿದೆ.

ಇದೇ ಸಂದರ್ಭದಲ್ಲಿ ಮಹಾಕುಂಭಮೇಳದ ಸಿದ್ಧತೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಡೆಯಲಿರುವ ಕಾರ್ಯಕ್ರಮ, ಎಷ್ಟು ದಿನ ನಡೆಯಲಿದೆ, ಜನ ಆಗಮಿಸುವ ಬಗ್ಗೆ ವಿಚಾರಿಸಿದರು.

ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
ಮಹಾಕುಂಭಮೇಳವು ಇದೊಂದು ರಾಜ್ಯದ ಮಹತ್ವದ ಕಾರ್ಯಕ್ರಮವಾಗಿದೆ. ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆ ಹಾಗೂ ವಿಶೇಷ ಕಾಳಜಿವಹಿಸಲಾಗುವುದು. ಯಾವುದೇ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

Maha Kumbh Mela of South india from Oct.13 Basavaraj Bommai released the logo

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್, ಶಾಸಕ ನಾಗೇಂದ್ರ, ಮಂಡ್ಯ ಜಿಲ್ಲಾಧಿಕಾರಿ ಎಸ್ ಅಶ್ವಥಿ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಪಾಲ್ಗೊಂಡಿದ್ದರು.

ಈ ಮಹಾಕುಂಭ ಮೇಳದ ಸಿದ್ಧತೆ ಕುರಿತು ವಾರದ ಹಿಂದೆಯೇ ಸಂಗಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರ ಸ್ವಾಮೀಜಿಗಳು ಪೊರ್ವಭಾವಿ ಸಭೆ ನಡೆಸಿದ್ದಾರೆ.

ಮಹಾಕುಂಭ ಮೇಳದ ಸಂದರ್ಭದಲ್ಲಿ ನಿತ್ಯ ಗಂಗಾರತಿ, ವಿವಿಧ ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. ಮಲೆ ಮಹದೇಶ್ವರ ಬೆಟ್ಟದಿಂದ ತ್ರಿವೇಣಿ ಸಂಗಮದವರೆಗೂ ಜ್ಯೋತಿಯಾತ್ರೆ ಸೇರದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಈ ಬಗ್ಗೆ ಸ್ವಾಮೀಜಿಗಳು ಚರ್ಚಿಸಿದ್ದರು.

English summary
Maha Kumbh Mela of South india from Oct.13 Basavaraj Bommai released the logo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X