ಜೀವವೈವಿಧ್ಯ ಉದ್ಯಾನವಾಗಿ ಮಾರ್ಪಾಡಾದ ಮಡಿವಾಳ ಕೆರೆ ಪ್ರದೇಶ
ಬೆಂಗಳೂರು, ಜೂನ್ 25: ನಗರದ ಮಡಿವಾಳ ಕೆರೆ ಪರಿಸರದಲ್ಲಿ ಜೀವವೈವಿದ್ಯ ಉದ್ಯಾನ ನಿರ್ಮಾಣವಾಗಿದ್ದು ಶೀಘ್ರ ಉದ್ಘಾಟನೆಗೊಳ್ಳಲಿದೆ. 2016ರಿಂದ ಮಡಿವಾಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.
ಬಿಟಿಎಂ ಲೇಔಟ್ ನಲ್ಲಿರುವ ಕೆರೆ ಪ್ರದೇಶ 272 ಮಡಿವಾಳ ಕೆರೆ ಪ್ರದೇಶವಿದೆ ಆ ಪ್ರದೇಶದಲ್ಲಿ ಜೀವವೈವಿಧ್ಯ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಕರ್ನಾಟಕ ಜ್ಞಾನ ಆಯೋಗ ಅಧ್ಯಕ್ಷ ಡಾ. ಕೆ. ಕಸ್ತೂರಿ ರಂಗನ್ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಉದ್ಯಾನದ ಉದ್ಘಾಟನೆಗೆ ಕೇಳಿಕೊಂಡಿದ್ದಾರೆ. ಇದೀಗ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಉದ್ಯಾನದ ಒಂದು ಭಾಗ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿದೆ.
ಅಲ್ಲಿ ಬಟರ್‌ಫ್ಲೈ ಪಾರ್ಕ್, ಆರ್ಕಿಡ್ ಕಾರ್ನಿವೋರಸ್ ಸಸ್ಯಗಳು, ಮಣ್ಣಿನ ನಡಿಗೆ ಪಥ, ಸೈಕಲ್ ಟ್ರ್ಯಾಕ್, ಚಿಟ್ಟೆಗಳನ್ನು ಆಕರ್ಷಿಸುವ, ವಿದೇಶಗಳಿಂದ ಬರುವ ಪಕ್ಷಿಗಳ ಸಂತಾನೋತ್ಪತ್ತಿಗೆ ಸಹಾಯ ಆಗುವಂತೆ ಪೊದೆ, ಗಿಡಗಳನ್ನು ಬೆಳೆಸಲಾಗುತ್ತದೆ. ಮುಖ್ಯವಾಗಿ ಸ್ಥಳೀಯ ಪ್ರದೇಶಗಳಲ್ಲಿನ ಗಿಡಮರಗಳನ್ನು ಬೆಳೆಸುವ ಯೋಜನೆ ರೂಪಿಸಲಾಗಿದೆ.

ಹೊಂಗೆ, ಬೇವು, ಹಲಸಿನ ಮರಗಳನ್ನು ಈ ಉದ್ಯಾನದಲ್ಲಿ ಬೆಳೆಸುವುದಿಲ್ಲ. ಬದಲಾಗಿ ವಲಸೆ ಪಕ್ಷಿಗಳನ್ನು ಆಕರ್ಷಿಸುವಂತ ಗಿಡ, ಮರಗಳನ್ನು ಆಯ್ಕೆಮಾಡಲಾಗಿದೆ. ನವದೆಹಲಿಯಲ್ಲಿರುವ ಯಮುನಾ ಜೀವವೈವಿಧ್ಯ ಉದ್ಯಾನ ಮಾದರಿಯಲ್ಲಿ ಈ ಉದ್ಯಾನ ನಿರ್ಮಾಣವಾಗುತ್ತಿದ್ದು, ಮಡಿವಾಳ ಕೆರೆ ಪರಿಸರದ 70 ಎಕರೆ ಜಾಗದಲ್ಲಿ 40 ಎಕರೆ ಜಾಗವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಒಟ್ಟು 132 ಬಗೆಯ ಸಸ್ಯಗಳನ್ನು ನೆಡಲಾಗಿದೆ. 40 ರೀತಿಯ ಚಿಟ್ಟೆಗಳನ್ನು ಸಂರಕ್ಷಿಸಲಾಗಿದೆ. ಹಣ್ಣು ಬಿಡುವಂತಹ 100 ಗಿಡಗಳನ್ನು ನೆಡಲಾಗಿದೆ.
ಉದ್ಯಾನದ ಮಣ್ಣಿನ ಗುಣಮಟ್ಟಕ್ಕೆ ಹೊಂದುವಂಥ ಮರಗಳನ್ನು ಆಯ್ಕೆ ಮಾಡಲು ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಅಮ್ಲಜನಕವನ್ನು ಹೆಚ್ಚು ಬಿಡುಗಡೆ ಮಾಡುವ ಮರಗಳನ್ನು ಆಯ್ಕೆ ಮಾಡಲಾಗಿದೆ.
ಉದ್ಯಾನದ ನಿರ್ವಹಣೆಗಾಗಿ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಬೇಕು ಎಂದು ಜ್ಞಾನ ಆಯೋಗ ಒತ್ತಾಯಿಸಿದೆ.
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ












Click it and Unblock the Notifications