ಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮ
ಬೆಂಗಳೂರು, ಆಗಸ್ಟ್ 3: ಗಣೇಶನ ಹಬ್ಬಕ್ಕೂ ಮುನ್ನವೇ ಬೆಂಗಳೂರಿನ ಬೀದಿಬೀದಿಗಳಲ್ಲಿ ಗಣೇಶ ಕಾಣಿಸಿಕೊಳ್ಳುತ್ತಿದ್ದಾನೆ, ಟ್ರಾಫಿಕ್ ನಿಯಮ ಪಾಲಿಸಿದರೆ ವರ ಕೊಡ್ತಾನೆ ಉಲ್ಲಂಘಿಸಿದರೆ ಶಾಪ ಕೊಡ್ತಾನೆ.ನಿಮಗೆ ಜಾಗೃತಿ ಮೂಡಿಸಲು ಬಂದಿದ್ದಾನೆ.
ಈಗಾಗಲೇ ಹಲಸೂರು ಟ್ರಾಫಿಕ್ ಪೊಲೀಸರು ಕಲಾವಿದ ವೀರೇಶ್ ಅವರ ಸಹಾಯ ಪಡೆದು ಯಮನ ವೇಷಧರಿಸಿ ಜಾಗೃತಿ ಮೂಡಿಸಿದ್ದಾರೆ, ಇದೀಗ ಬೆಂಗಳೂರು ಉತ್ತರ ರಾಜಾಜಿನಗರ ಟ್ರಾಫಿಕ್ ಪೊಲೀಸರು ಗಣೇಶನ್ನು ಬಳಸಿಕೊಂಡು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ನಗರದಲ್ಲಿ ಈಗಘಾಲೇ 70 ಲಕ್ಷಕ್ಕೂ ಹೆಚ್ಚು ವಾಹನಗಳಿವೆ, ದಿನನಿತ್ಯ ನಗರದೊಳಗೆ 25 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ, ಸಿಗ್ನಲ್ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ಇರುವುದು, ಅತಿಯಾದ ವೇಗದಲ್ಲಿ ಚಾಲನೆ ಹೀಗೆ ಅನೇಕ ಸಂಚಾರ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ ಅವರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.

ಇಷ್ಟು ದಿನ ಜಾಗೃತಿ ಕಾರ್ಯಕ್ರಮ ಎಂದು ಪೊಲೀಸರು ಕರಪತ್ರಗಳನ್ನು ಹಂಚುತ್ತಿದ್ದರು, ಹೆಲ್ಮೆಟ್ ಇಲ್ಲದವರಿಗೆ ದಂಡ ವಿಧಿಸುತ್ತಿದ್ದರು ಜನರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ದಂಡ ಕಟ್ಟಿ ಹೋಗುತ್ತಿದ್ದರು.
ಇದೆಲ್ಲವನ್ನೂ ಗಮನಸಿಸಿದ ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘಿಸಿ ದಂಡ ಕಟ್ಟುವುದು ಮುಖ್ಯವಲ್ಲ ನಿಯಮವನ್ನು ಉಲ್ಲಂಘಿಸಬಾರದು ಎಂದು ಅವರ ಮನಸ್ಸಿನಲ್ಲಿಯೇ ಅಂದುಕೊಳ್ಳುವಂತೆ ಮಾಡಬೇಕು ಇದಕ್ಕೆ ದೇವರೇ ಬರಬೇಕು ಎಂದು ಹೇಳಿ ದೇವರ ವೇಷವನ್ನು ಹಾಕಿಸಿದ್ದಾರೆ.

ಈ ಕುರಿತು ಬೆಂಗಳೂರು ಉತ್ತರ ಟ್ರಾಫಿಕ್ ಎಸಿಪಿ ಜಗದೀಶ್ ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದು, ಜನರಿಗೆ ದೇವರೆಂದರೆ ಭಯ ಅವರು ದೇವರು ಹೇಳಿದರೆ ಮಾತ್ರ ಒಪ್ಪುತ್ತಾರೆ, ಹಾಗಾಗಿ ಸಂಚಾರ ನಿಯಮ ಉಲ್ಲಂಘಿಸಿದಂತೆ ಜಾಗೃತಿ ಮೂಡಿಸಲು ಗಣೇಶನ ವೇಷವನ್ನು ಹಾಕಿಸಲಾಗಿದೆ. ಆದರೆ ಈ ವೇಷ ಹಾಕಿರುವುದು ಕಲಾವಿದರಲ್ಲ ಬದಲಾಗಿ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ್, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications