ಬೆಂಗಳೂರು ದಕ್ಷಿಣ: ಕಾಂಗ್ರೆಸ್ಸಿನಿಂದ ತೇಲಿಬಂದ ಅಚ್ಚರಿಯ ಎರಡು ಹೆಸರು

ಲೋಕಸಭಾ ಚುನಾವಣೆಯ ವೇಳಾಪಟ್ಟಿ ಘೋಷಣೆಯಾಗಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ 'ನಮಗೆಷ್ಟು, ನಿಮಗೆಷ್ಟು' ಮಾತುಕತೆ ಇನ್ನೂ ಮುಕ್ತಾಯಗೊಂಡಿಲ್ಲ. ಮೈತ್ರಿ ಧರ್ಮದ ಹೆಸರಿನಲ್ಲಿ ತಾನು ಗೆದ್ದಿದ್ದ ಸೀಟ್ ಅನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ಕಾಂಗ್ರೆಸ್ ನಾಯಕರಲ್ಲಿ ಸುತರಾಂ ಸಮ್ಮತವಿಲ್ಲ.
ರಾಜ್ಯದ ಒಟ್ಟು 28ಲೋಕಸಭಾ ಕ್ಷೇತ್ರಗಳಲ್ಲಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟವಿರುವ ಕ್ಷೇತ್ರಗಳು ಮೂರೋ, ನಾಲ್ಕೋ, ಮಿಕ್ಕೆಲ್ಲ ಕ್ಷೇತ್ರಗಳು ಯಾರ್ಯಾರಿಗೆ ಎಂದು ಈಗಾಗಲೇ ಫೈನಲ್ ಆಗಿದೆ. ಅಭ್ಯರ್ಥಿಗಳು ಯಾರು ಎನ್ನುವುದೂ ಬಹುತೇಕ ಫೈನಲ್ ಆಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ?
ಗಮನಿಸಬೇಕಾದ ಅಂಶವೇನಂದರೆ, ಒಂದೆರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಹಾಕಲು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಮನಸಿಲ್ಲ. ಅವೆರಡೂ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆ, ಅಭ್ಯರ್ಥಿಯನ್ನು ಹಾಕಿದರೂ ಪ್ರಯೋಜನವಿಲ್ಲ ಎನ್ನುವ ಧೋರಣೆ ಇದ್ದರೂ ಇರಬಹುದು.
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಬದಲು ಮತ್ತೊಬ್ಬ ಮಹಿಳೆ ಸ್ಪರ್ಧೆ?
ಕ್ಷೇತ್ರಗಳು ಯಾರಿಗೆ ಎನ್ನುವುದು ಕನ್ಫರ್ಮ್ ಆಗಿದ್ದರೂ, ಅಭ್ಯರ್ಥಿ ಯಾರು ಎನ್ನುವುದು ಕೆಲವೊಂದು ಕ್ಷೇತ್ರಗಳಲ್ಲಿ ಇನ್ನೂ ಅಂತಿಮವಾಗಿಲ್ಲ. ಈ ಕ್ಷೇತ್ರಗಳ ಪೈಕಿ, ಬೆಂಗಳೂರು ದಕ್ಷಿಣ ಕೂಡಾ ಒಂದು. ಆ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಅಚ್ಚರಿಯ ಎರಡು ಹೆಸರು ಈಗ ಚಾಲ್ತಿಯಲ್ಲಿ ಬರಲಾರಂಭಿಸಿದೆ.

ತೇಜಸ್ವಿನಿ ಅನಂತ್ ಕುಮಾರ್ ಹೆಸರು ರಾಜ್ಯಾಧ್ಯಕ್ಷರಿಗೆ ಶಿಫಾರಸು
ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಸತತವಾಗಿ ಪ್ರತಿನಿಧಿಸುವ ಕ್ಷೇತ್ರವಾಗಿದ್ದ ಬೆಂಗಳೂರು ದಕ್ಷಿಣದಲ್ಲಿ, ಬಿಜೆಪಿಯಿಂದ ಅವರ ಪತ್ನಿ ತೇಜಸ್ವಿನಿ ಸ್ಪರ್ಧಿಸುವುದು ಬಹುತೇಕ ಅಂತಿಮವಾಗಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಬಿಜೆಪಿ ಶಾಸಕರು ಅಂತಿಗೊಳಿಸಿ ರಾಜ್ಯಾಧ್ಯಕ್ಷರಿಗೆ ಸೋಮವಾರ (ಮಾ 11) ಶಿಫಾರಸು ಮಾಡಿದ್ದರು. ಅಶೋಕ ಅವರ ನಿವಾಸದಲ್ಲಿ ಸೋಮವಾರ ಸಂಜೆ ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಶಾಸಕರ ಸಭೆ ನಡೆದಿತ್ತು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ

ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಹೆಸರು ಪ್ರಿಯಕೃಷ್ಣ
ಬೆಂಗಳೂರು ದಕ್ಷಿಣಕ್ಕೆ ಕಾಂಗ್ರೆಸ್ ನಿಂದ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಹೆಸರು ಪ್ರಿಯಕೃಷ್ಣ. ಇವರ ತಂದೆ ಮತ್ತು ವಿಜಯನಗರ ಕ್ಷೇತ್ರದ ಶಾಸಕರೂ ಆಗಿರುವ ಎಂ ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿದ್ದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಿಯಕೃಷ್ಣ, ಬಿಜೆಪಿಯ ಹಿರಿಯ ಮುಖಂಡ ವಿ ಸೋಮಣ್ಣ ಎದುರು 11,375 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಮಗನಿಗೆ ಸೀಟು ಕೊಟ್ಟರೆ, ಗೆಲ್ಲಿಸಿಕೊಂಡ ಬರುವ ಜವಾಬ್ದಾರಿ ನನ್ನದು ಎಂದು ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷರಿಗೆ ಹೇಳಿದ್ದರು.

ನಂದನ್ ನೀಲೇಕಣಿ ಅವರ ಪತ್ನಿ ರೋಹಿಣಿ
ಆದರೂ, ಬಿಜೆಪಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎನ್ನುವುದನ್ನು ನೋಡಿ, ಆಮೇಲೆ ನಿರ್ಧರಿಸಲು ಕಾಂಗ್ರೆಸ್ ತೀರ್ಮಾನ ತೆಗೆದುಕೊಂಡಿತ್ತು. ಒಂದು ವೇಳೆ, ಬಿಜೆಪಿ, ತೇಜಸ್ವಿನಿ ಅವರನ್ನು ಕಣಕ್ಕಿಳಿಸಿದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ನಂದನ್ ನೀಲೇಕಣಿ ಅವರ ಪತ್ನಿ ರೋಹಿಣಿಯವರನ್ನು ನಿಲ್ಲಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಹಾಗಾಗಿ, ಬೆಂಗಳೂರು ದಕ್ಷಿಣಕ್ಕೆ ಮತ್ತೊಂದು ಹೆಸರು ಈಗ ಚಾಲ್ತಿಯಲ್ಲಿದೆ.
ಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರು

ಮಾಜಿ ಸಚಿವ, ಕಾಂಗ್ರೆಸ್ ನಿಷ್ಟಾವಂತ ರಾಮಲಿಂಗ ರೆಡ್ಡಿಯ ಹೆಸರು
ಇವೆಲ್ಲದರ ನಡುವೆ, ಮಾಜಿ ಸಿಎಂ ಸಿದ್ದರಾಮಯ್ಯನವರ ಚಿತ್ತ ಬೇರೆಯೇ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಬೆಂಗಳೂರು ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ, ಮಾಜಿ ಸಚಿವ, ಕಾಂಗ್ರೆಸ್ ನಿಷ್ಟಾವಂತ ರಾಮಲಿಂಗ ರೆಡ್ಡಿಯ ಹೆಸರು ಈಗ ಹರಿದಾಡಲಾರಂಭಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ, ರೆಡ್ಡಿಯವರಿಗೆ ನೇರವಾಗಿ ಸಿದ್ದರಾಮಯ್ಯ ಒತ್ತಡ ಹೇರುತ್ತಿದ್ದಾರೆ ಎನ್ನುವ ಸುದ್ದಿ ಕೆಪಿಸಿಸಿ ಅಂಗಣದಲ್ಲಿ ಹರಿದಾಡುತ್ತಿದೆ.

ಸದ್ಯಕ್ಕೆ ಬೆಂಗಳೂರು ದಕ್ಷಿಣದಿಂದ ಪ್ರಿಯಕೃಷ್ಣ, ರೋಹಿಣಿ ಮತ್ತು ರಾಮಲಿಂಗ ರೆಡ್ಡಿ
ಬೆಂಗಳೂರಿನಲ್ಲಿ ಏಪ್ರಿಲ್ ಹದಿನೆಂಟರಂದು ಚುನಾವಣೆ ನಡೆಯಲಿದೆ. ಹಾಗಾಗಿ, ಅಭ್ಯರ್ಥಿಗಳನ್ನು ಆದಷ್ಟು ಬೇಗ ಅಂತಿಮಗೊಳಿಸಿ, ಪ್ರಚಾರಕ್ಕೆ ಇಳಿಸಬೇಕಾಗಿದೆ. ಸದ್ಯಕ್ಕೆ ಬೆಂಗಳೂರು ದಕ್ಷಿಣದಿಂದ ಪ್ರಿಯಕೃಷ್ಣ, ರೋಹಿಣಿ ನೀಲೇಕಣಿ ಮತ್ತು ರಾಮಲಿಂಗ ರೆಡ್ಡಿ ಹೆಸರು ಕೇಳಿಬರುತ್ತಿದೆ. ಈ ಮೂವರು ಬಿಟ್ಟು, ಬೇರೆ ಯಾರಾದರೂ ಆಯ್ಕೆಯಾದರೂ ಆಗಬಹುದು.