ಅಂತೂ ರೈಗೆ ಕಾಂಗ್ರೆಸ್ ನೀಚತನ ಅರಿವಾಯಿತು: ಕಾಲೆಳೆದ ಸುರೇಶ್ ಕುಮಾರ್
Recommended Video
ಬೆಂಗಳೂರು, ಏಪ್ರಿಲ್ 18: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ತಮಗೆ ಪ್ರಕಾಶ್ ರೈ ಬೆಂಬ ದೊರೆತಿದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅವರ ವಿರೋಧಿಗಳ ಟೀಕೆಗೆ ಆಹಾರವಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರಕಾಶ್ ರೈ ಅವರು ಮಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್, 'ಅಂತೂ ಪ್ರಕಾಶ್ ರೈ ಅವರಿಗೂ ಕಾಂಗ್ರೆಸ್ ಪಕ್ಷದ 'ನೀಚ' ರಾಜಕೀಯದ ಪರಿಚಯ/ಅನುಭವ ಆಯಿತು' ಎಂದು ಕಾಲೆಳೆದಿದ್ದಾರೆ.
'ಕಾಂಗ್ರೆಸ್‌ನವರ ನೀಚ ರಾಜಕೀಯ ನೋಡಿ. ರಿಜ್ವಾನ್ ಬಿಎ ಎಂದು ಹೇಳಿಕೊಳ್ಳುವ ಮಜರ್ ಅಹ್ಮದ್ ಎಂಬ ವ್ಯಕ್ತಿ ನಾನು ಮತ್ತು ರಿಜ್ವಾನ್ ಒಂದು ಸಂವಾದದಲ್ಲಿರುವ ಫೋಟೊ ತೆಗೆದುಕೊಂಡು ಪ್ರಕಾಶ್ ರಾಜ್ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಅವರಿಗೆ ವೋಟ್ ಹಾಕಿ ವ್ಯರ್ಥ ಮಾಡಿಕೊಳ್ಳಬೇಡಿ. ಅದನ್ನು ರಿಜ್ವಾನ್‌ಗೆ ಹಾಕಿ ಎಂದು ವಾಟ್ಸಾಪ್ ಚಳವಳಿ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನವರ ಇಂತಹ ನೀಚ ರಾಜಕೀಯವನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ' ಎಂದು ಪ್ರಕಾಶ್ ರೈ ವಿಡಿಯೋ ಟ್ವೀಟ್ ಮಾಡಿದ್ದರು.
ಅಂತೂ ಪ್ರಕಾಶ್ ರಾಜ್ (ರೈ) ರವರಿಗೂ ಕಾಂಗ್ರೆಸ್ ಪಕ್ಷದ "ನೀಚ" ರಾಜಕೀಯದ ಪರಿಚಯ/ಅನುಭವ ಆಯಿತು!
— Chowkidar Sureshkumar (@nimmasuresh) 17 April 2019
ಅವರ ಮಾತುಗಳಲ್ಲೇ..... pic.twitter.com/K9zlc3rM3R
ಇದಕ್ಕೂ ಮೊದಲು ಅವರು ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ರಿಜ್ವಾನ್ ಅರ್ಷದ್ ಅವರು ತುಂಬಾ ನಾಚಿಕೆಗೇಡಿ. ಅವರು ಸ್ವಂತ ಹೆಸರಿನಿಂದ ಮತಗಳನ್ನು ಸಂಪಾದಿಸಿಕೊಳ್ಳಲಾರರು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ಎಂಬುದು ಸಾಬೀತಾಗಿದೆ. ಪ್ರಕಾಶ್ ರೈ ಕಾಂಗ್ರೆಸ್ ಜತೆಗೆ ಇದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಪ್ರಕಾಶ್ ರಾಜ್ ಬೆಂಗಳೂರು ಕೇಂದ್ರ ಕ್ಷೇತ್ರದ ನಿಮ್ಮ ಅಭ್ಯರ್ಥಿ. ಅರ್ಷದ್ ರಿಜ್ವಾನ್ ಅವರೇ ನಿಮ್ಮದೇ ಮತಗಳನ್ನು ಸಂಪಾದಿಸಲು ಅಗತ್ಯವಾದಷ್ಟು ಧೈರ್ಯ ಪಡೆದುಕೊಳ್ಳಿ. ಉತ್ತಮ ಕ್ರೀಡಾಮನೋಭಾವ ಬೆಳೆಸಿಕೊಳ್ಳಿ ಎಂದು ರೈ ಹೇಳಿದ್ದರು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ










Click it and Unblock the Notifications