ಅನಂತ್ ಕುಮಾರ್ ನನ್ನ ಮೊದಲ ಗುರು: ತೇಜಸ್ವಿ ಸೂರ್ಯ
Recommended Video

ಬೆಂಗಳೂರು, ಮಾರ್ಚ್ 26: ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಯುವ ಮುಖಂಡ ತೇಜಸ್ವಿ ಸೂರ್ಯ ಅತೀವ ಉತ್ಸಾಹದಲ್ಲಿದ್ದಾರೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅವರು ಸಂತೋಷವನ್ನು ಸರಣಿ ಟ್ವೀಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ಹಾಗೆಯೇ ಕೆಲವು ಟ್ವೀಟ್‌ಗಳಲ್ಲಿ ವಿಚಾರಗಳನ್ನು ಹಂಚಿಕೊಳ್ಳುವಾಗ ಅವರು ಭಾವುಕರಾಗಿದ್ದಾರೆ. ತೇಜಸ್ವಿ ಸೂರ್ಯ ಸ್ಪರ್ಧಿಸುತ್ತಿರುವುದು ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ಸತತ 22 ವರ್ಷ ಪ್ರತಿನಿಧಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ.
ತಮಗೆ ಟಿಕೆಟ್ ದೊರೆತ ಸಂದರ್ಭದಲ್ಲಿ ಅವರು ಅನಂತ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸೋಮವಾರ ರಾತ್ರಿ ಬಿಜೆಪಿ ಪ್ರಕಟಿಸಿದ ಪಟ್ಟಿಯಲ್ಲಿ ಹೊಸ ಮುಖ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಅನಂತ್ ಕುಮಾರ್ ಅವರ ಗರಡಿಯಲ್ಲಿ ಬೆಳೆದ ತೇಜಸ್ವಿ, ಅನಂತ್ ಕುಮಾರ್ ಅವರೇ ನನಗೆ ಮೊದಲ ಗುರು ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಶಿಷ್ಯನಾಗಿ ಗುರುವಿನ ಸ್ಮರಣೆ ಮಾಡಿದ್ದಾರೆ.
|
ನನ್ನ ಮೊದಲ ಸಾರ್ವಜನಿಕ ಗುರು
ಅನಂತ್ ಕುಮಾರ್ ಅವರು ನನ್ನ ಸಾರ್ವಜನಿಕ ಜೀವನದ ಮೊದಲ ಗುರು. ನನ್ನ ಹೈಸ್ಕೂಲು ದಿನಗಳಿಂದಲೂ ನನ್ನ ಬೆಳವಣಿಗೆಯನ್ನು ಅವರು ನೋಡಿದ್ದಾರೆ. ಅವರನ್ನು ನೋಡುತ್ತಾ, ಅವರೊಂದಿಗೆ ಮಾತನಾಡುತ್ತಾ ಮತ್ತು ಅವರು ಕೆಲಸಗಳನ್ನು ಕೇವಲ ನೋಡುತ್ತಲೇ ಸಾಕಷ್ಟು ಕಲಿತಿದ್ದೇನೆ. ಅವರು ಕರ್ನಾಟಕದ ಅತ್ಯಂತ ಗಣ್ಯ ನಾಯಕರಲ್ಲಿ ಒಬ್ಬರು. ಅವರಿಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.
| Array |
ನಾನು ಬೆಳೆಯಲು ನೀವೇ ಕಾರಣ
ನನ್ನನ್ನು ಪ್ರೌಢಶಾಲಾ ದಿನಗಳಿಂದಲೂ ಅನಂತ್ ಕುಮಾರ್ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಮೇಡಂ ಬೆಳೆಸಿದ್ದಾರೆ. 'ಜನ ಚೇತನಾ ಯಾತ್ರೆ'ಯಲ್ಲಿ ಅನಂತ್ ಕುಮಾರ್ ಅವರೊಂದಿಗೆ ಕಳುಹಿಸುವಂತೆ ತೇಜಸ್ವಿನಿ ಮೇಡಂ ಅವರಿಗೆ ತುಂಬಾ ಕಾಟ ಕೊಟ್ಟಿದ್ದೆ. ಅವರು ಅದು ಹೇಗೋ ಸರ್ ಅವರನ್ನು ಮನವೊಲಿಸಿ ನನ್ನನ್ನು ಜತೆಯಲ್ಲಿ ಕರೆದೊಯ್ಯುವಂತೆ ಮಾಡಿದ್ದರು. ನಾನು ನನ್ನ ಮೊದಲ ಭಾರತ ದರ್ಶನವನ್ನು ಮಾಡಿದ್ದೆ. ಇಂದು ನಾನು ಏನಾಗಿದ್ದೇನೆಯೋ ಅದಕ್ಕೆ ನೀವಿಬ್ಬರೇ ಕಾರಣ ಎಂದು ಭಾವುಕರಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
|
ಆಧುನಿಕ ಬೆಂಗಳೂರು ನಿರ್ಮಾರ್ತೃ
ಅನಂತ್ ಕುಮಾರ್ ಅವರು ನಿಜವಾದ ಆಧುನಿಕ ಬೆಂಗಳೂರಿನ ನಿರ್ಮಾರ್ತೃ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ, ಕಾವೇರಿ ನಾಲ್ಕನೇ ಹಂತ, ಉಪನಗರ ರೈಲು ಮತ್ತು ಇನ್ನೂ ಅನೇಕ ಕೊಡುಗೆಗಳನ್ನು ಈ ನಗರಕ್ಕೆ ಅವರು ನೀಡಿದ್ದಾರೆ. ನಿಮ್ಮೆಲ್ಲರ ಹಾರೈಕೆಗಳಿಂದ ನಮ್ಮ ನಗರವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲು ಬಯಸಿದ್ದೇನೆ. ಬೆಂಗಳೂರು ಜಗತ್ತಿನ ಅತ್ಯುತ್ತಮ ಮೆಟ್ರೊಪೊಲಿಸ್ ಆಗಲು ಎಲ್ಲ ಅರ್ಹತೆ ಹೊಂದಿದೆ ಎಂದು ತೇಜಸ್ವಿ ಹೇಳಿದ್ದಾರೆ.

ದೇಶ ಮೊದಲು ಎಂಬುದೇ ಸಿದ್ಧಾಂತ
ಬಿಜೆಪಿ ಕೈಗೊಂಡ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಯಾವಾಗಲೂ ಪಕ್ಷದ ಸಿದ್ಧಾಂತದ ಜತೆಗಿದ್ದೇವೆ. ದೇಶ ಮೊದಲು ಎನ್ನುವುದು ನಮ್ಮ ಪಕ್ಷದ ಸಿದ್ಧಾಂತ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಚಾರ ಮಾಡುತ್ತೇವೆ. ತೇಜಸ್ವಿ ಸೂರ್ಯ ಅವರ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳೋಣ ಎಂದು ತೇಜಸ್ವಿನಿ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದರು.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications