ಜನೌಷಧಿ ಯೋಜನೆ: ಮೋದಿ ನೇರ ಸಂಭಾಷಣೆ ವೀಕ್ಷಿಸಿದ ಅನಂತ ಕುಮಾರ್
ಬೆಂಗಳೂರು, ಜೂನ್ 7: ಪ್ರಧಾನಮಂತ್ರಿ ಜನೌಷಧಿ ಯೋಜನೆಯ ನೇರ ಸಂಭಾಷಣೆಯನ್ನು ಬಸವನಗುಡಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಸಾರ್ವಜನಿಕರೊಂದಿಗೆ ವೀಕ್ಷಿಸಿದರು.
ಬಳಿಕ ಅನಂತ ಕುಮಾರ್ ಮಾತನಾಡಿ, 3603 ಕೇಂದ್ರಗಳಲ್ಲಿ ಜನೌಷಧಿ ಕಾರ್ಯಕ್ರಮ ಜಾರಿಯಲ್ಲಿದೆ, ಪ್ರಧಾನಿ ನರೇಂದ್ರ ಮೋದಿಯವರು ನೇರ ಸಂಭಾಷಣೆ ಮೂಲಕ ಜನ ಔಷಧಿ ಯೋಜನೆ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದ್ದಾರೆ ಎಂದರು.
ಈ ಯೋಜನೆ ಅಂಗವಾಗಿ ಜೂನ್ 5ರಂದು ದೇಶಾದ್ಯಂತ ಸುವಿಧಾ ಜನ ಔಷಧಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬಿಡುಗಡೆ ಮಾಡಿದ್ದೇವೆ, ವಿಶ್ವ ಆರೋಗ್ಯ ಸಂರ್ಸತೆಯ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟ ಇರುವ ನ್ಯಾಪ್ಕಿನ್ ಇದಾಗಿದೆ. ದೇಶದ ಜನರ ಆರೋಗ್ಯದ ಬಗ್ಗೆ ಮೋದಿ ಸರ್ಕಾರ ಕಾಳಜಿಯನ್ನು ಹೊಂದಿದೆ ಎಂದರು.

ನಮ್ಮ ದೇಶದಲ್ಲಿ ಕೇವಲ ಶೇ 48 ರಷ್ಟು ಮಹಿಳೆಯರು ಮಾತ್ರ ಸ್ಯಾನಿಟರಿ ನ್ಯಾಪ್ ಕಿನ್ ಬಳಸುತ್ತಾರೆ, ಇನ್ನುಳಿದ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಬಳಕೆ ಮಾಡಲ್ಲ, ನಮ್ಮ ದೇಶದಲ್ಲಿ ಬಳಕೆ ಮಾಡುತ್ತಿರುವ ಬ್ರಾಂಡೆಡ್ ನ್ಯಾಪ್ ಕಿನ್ಸ್ ಒಂದಕ್ಕೆ ಎಂಟು ರೂಪಾಯಿ, ಆದ್ರೆ ಅದ್ಯಾವುದು ಬಯೋ ಡೀಗ್ರೇಡಬಲ್ ಅಲ್ಲ, ದೇಶದಲ್ಲಿ ಮೊದಲ ಬಯೋ ಡೀಗ್ರೇಡಬಲ್ ನ್ಯಾಪ್ ಕಿನ್ ಇದ್ರೆ ಅದು ಕೇಂದ್ರ ಸರ್ಕಾರ ತಂದಿರುವ ಸುವಿಧ ನ್ಯಾಪ್ ಕಿನ್ಸ್, ಕೇವಲ 2.50 ರೂಪಾಯಿ ಯಲ್ಲಿ ಒಂದು ಸ್ಯಾನಿಟರಿ ನ್ಯಾಪ್ಕಿನ್ ಲಭ್ಯವಿದೆ.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ಗೆ ನೂತನ ಸದಸ್ಯೆಯಾಗಿ ಆಯ್ಕೆಯಾಗಿರುವ ತೇಜಸ್ವಿನಿ ಗೌಡ ಅವರನ್ನು ಸನ್ಮಾನಿಸಲಾಗಿದೆ. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ , ಕಟ್ಟೆ ಸತ್ಯನಾರಾಯಣ, ಸಂಗಾತಿ ವೆಂಕಟೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.












Click it and Unblock the Notifications